ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಕ್ರೀಡಾಕೂಟಕ್ಕೆ ಮೀನುಗಾರ ಆಯ್ಕೆ
ಕೆನಡಾದಲ್ಲಿ ನಡೆಯುವ ಚಾಂಪಿಯನ್‌ಶಿಪ್‌ನಲ್ಲಿ ಆಡಲಿರುವ ಕುಂದಾಪುರದ ಸತೀಶ್ ಖಾರ್ವಿ
Team Udayavani, Aug 8, 2019, 5:47 AM IST
ವಿಶೇಷ ವರದಿ-ಕುಂದಾಪುರ: ವೃತ್ತಿಯಲ್ಲಿ ಮೀನುಗಾರರಾಗಿದ್ದು, ಪ್ರವೃತ್ತಿಯಲ್ಲಿ ಕ್ರೀಡಾಪಟುವಾಗಿದ್ದ ಕುಂದಾಪುರದ ಖಾರ್ವಿಕೇರಿಯ ಸತೀಶ್ ಖಾರ್ವಿ ಅವರು ರಾಷ್ಟ್ರಮಟ್ಟದಲ್ಲಿ ಮಿಂಚಿ, ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾದ ಸಾಧನೆಗೆ ಪಾತ್ರರಾಗಿದ್ದಾರೆ.
ಸತೀಶ್ ಖಾರ್ವಿ ಅವರದು ಮೂಲ ಕಸುಬು ಮೀನುಗಾರಿಕೆ. ಆದರೂ ಪವರ್ ಲಿಫ್ಟಿಂಗ್‌ನಲ್ಲಿ ಸತತ ಪ್ರಯತ್ನದ ಫಲವಾಗಿ, ಸೆಪ್ಟಂಬರ್ 15 ರಿಂದ ಕೆನಾಡದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದು, ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಖಾರ್ವಿಕೇರಿಯ ದಾಸ ಖಾರ್ವಿ – ಕಮಲ ಖಾರ್ವಿ ದಂಪತಿಯ ಪುತ್ರನಾದ ಸತೀಶ್ ಅವರು, ಚಿಕ್ಕಂದಿನಿಂದಲೇ ದೇಹದಾಡ್ಯì, ಕಬಡ್ಡಿ, ಕ್ರಿಕೆಟ್, ಪವರ್ ಲಿಫ್ಟಿಂಗ್ ಸಹಿತ ಬಹುತೇಕ ಹೆಚ್ಚಿನೆಲ್ಲ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಅದರಲ್ಲೂ ಪವರ್ ಲಿಫ್ಟಿಂಗ್ ಬಗ್ಗೆ ವಿಶೇಷ ಆಸಕ್ತಿಯಿದ್ದ ಇವರು, 1995 ರಲ್ಲಿ ಕುಂದಾಪುರದ ಹಕ್ಯುìಲಸ್ ಜಿಮ್ ಸದಸ್ಯರಾಗಿ ಅಲ್ಲಿ ನರಸಿಂಹ ದೇವಾಡಿಗ ಅವರಿಂದ ಪವರ್ ಲಿಫ್ಟಿಂಗ್ ಕುರಿತು ಮೊದಲ ಪಾಠ ಕಲಿತರು.
ಬಳಿಕ ಬೆಂಗಳೂರಿನ ಕೋರಮಂಗಲ ಕ್ಲಬ್ ಸಂಸ್ಥೆಯಲ್ಲಿ ತರಬೇತಿ ಪಡೆದು, ಅಲ್ಲಿ ಹಾಗೂ ಬೇರೆ – ಬೇರೆ ಜಿಮ್ ಸೆಂಟರ್‌ನಲ್ಲಿ ತರಬೇತುದಾರರಾಗಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಇದಾದ ಅನಂತರ 2011ರಲ್ಲಿ ತಾವೇ ಸ್ವತಃ ಕುಂದಾಪುರದಲ್ಲಿ ನ್ಯೂ ಹಕ್ಯುìಲಸ್ ಜಿಮ್ ಆರಂಭಿಸಿ, ಗ್ರಾಮೀಣ ಭಾಗದ ಹಲವು ಕ್ರೀಡಾಪಟುಗಳಿಗೆ ಫಿಟ್‌ನೆಸ್ ಕಾಪಾಡಿಕೊಳ್ಳಲು ನೆರವಾದರು.
ಇದಲ್ಲದೆ ಇವರ ನೇತೃತ್ವದಲ್ಲಿ ಕುಂದಾಪುರ ಭಾಗದಲ್ಲಿಯೇ ಜಿಲ್ಲಾ, ರಾಜ್ಯ ಮಟ್ಟದ ದೇಹದಾಡ್ಯì, ಪವರ್ ಲಿಫ್ಟಿಂಗ್ ಸ್ಪರ್ಧೆಗಳನ್ನು ಆಯೋಜಿಸಿದ್ದರು.
ಮೀನುಗಾರಿಕಾ ಕುಟುಂಬ
ಇವರದು ಹುಟ್ಟು ಮೀನುಗಾರಿಕಾ ಕುಟುಂಬ. ಈಗಲೂ ಸತೀಶ್ ಖಾರ್ವಿ ಅವರ ಮನೆಯವರು, ಸಂಬಂಧಿಕರು ಮೀನುಗಾರಿಕೆ ವೃತ್ತಿಯನ್ನೇ ಮಾಡು ತ್ತಿದ್ದಾರೆ. ಇವರು ಕೂಡ ಮೊದಲ 10 -12 ವರ್ಷ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
3 ರಾಷ್ಟ್ರೀಯ ಪದಕ
ಸತೀಶ್ ಖಾರ್ವಿಯವರು ಇದೇ ಮೊದಲ ಬಾರಿಗೆ ವಿಶ್ವ ಮಟ್ಟದ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಈವರೆಗೆ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 1 ಬೆಳ್ಳಿ ಪದಕ ಹಾಗೂ 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇನ್ನು ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ 5 ಚಿನ್ನದ ಪದಕಗಳನ್ನು ಪಡೆದ ಸಾಧನೆಗೆ ಪಾತ್ರರಾಗಿದ್ದಾರೆ.
ಕನಸು ನನಸು
ನಮ್ಮದು ಮೀನುಗಾರಿಕಾ ಕುಟುಂಬವಾಗಿದ್ದರೂ, ನನಗೆ ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸಿತ್ತು. ಈವರೆಗೆ ರಾಷ್ಟ್ರ, ರಾಜ್ಯ ಮಟ್ಟದ ಟೂರ್ನಿಯಲ್ಲಿ ಆಡಿ, ಗೆದ್ದಿದ್ದರೂ, ಇದೇ ಮೊದಲ ಬಾರಿಗೆ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಪ್ರತಿನಿಧಿಸುವ ಮೂಲಕ ಬಹುದಿನದ ಕನಸೊಂದು ನನಸಾಗುತ್ತಿದೆ.
–ಸತೀಶ್ ಖಾರ್ವಿ,
ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಟಿಟಿ ರೋಡ್‌ನಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Kaup: ಬೈಕ್ ಗೆ ಕಾರು ಢಿಕ್ಕಿ; ಸವಾರ ಗಂಭೀರ
Koteshwara: ಹುತಾತ್ಮ ಯೋಧ ಅನೂಪ್ ಪೂಜಾರಿ ಮನೆಗೆ ಖಾದರ್, ಸೊರಕೆ ಭೇಟಿ
ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಟಿಟಿ ರೋಡ್‌ನಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!
Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್ ಸಿಟಿʼ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.