ಹಗಲಲ್ಲೇ ಹೊತ್ತಿಕೊಂಡ ಫ್ಲಡ್‌ಲೈಟ್: ಏಕಾಗ್ರತೆ ಕಳೆದುಕೊಂಡ ಜೊಕೋ
Team Udayavani, Jan 21, 2019, 1:05 AM IST
ಮೆಲ್ಬರ್ನ್: ವಿಶ್ವ ನಂ.1 ಟೆನಿಸಿಗ ನೊವಾಕ್ ಜೊಕೊವಿಕ್ ನೀತಿಸಂಹಿತೆ ಉಲ್ಲಂಘನೆ ಆಪಾದನೆ ಎದುರಿಸಿದ್ದಾರೆ. ಶನಿವಾರದ 3ನೇ ಸುತ್ತಿನ ಪಂದ್ಯದ ವೇಳೆ ಅವರು ಡೆನ್ನಿಸ್ ಶಪೊವೊಲೋವ್ ವಿರುದ್ಧ ಆಡುತ್ತಿದ್ದರು. 3ನೇ ಸೆಟ್‌ನಲ್ಲಿ 3-0 ಮುನ್ನಡೆಯನ್ನೂ ಸಾಧಿಸಿದ್ದರು. ಸಂಜೆ 5 ಗಂಟೆ ಹೊತ್ತಿಗೆ ಸಾಕಷ್ಟು ಬೆಳಕು ಇದ್ದಾಗಲೇ ಇದ್ದಕ್ಕಿದ್ದಂತೆ ಫ್ಲಡ್‌ಲೈಟ್ ಬೆಳಗಿಸಲಾಯಿತು. ಕಣ್ಣು ಕುಕ್ಕಿದ್ದರಿಂದ ದಿಢೀರನೆ ಅವರು ಆಟದ ಮೇಲಿನ ಏಕಾಗ್ರತೆ ಕಳೆದುಕೊಂಡು 3ನೇ ಸೆಟ್ ಸೋತರು. ಮುಂದಿನ ಸೆಟ್‌ನಲ್ಲಿ ತಿರುಗಿ ಬಿದ್ದು ಗೆಲುವು ಸಾಧಿಸಿದರು.
ಈ ಹಂತದಲ್ಲಿ ಪ್ರೇಕ್ಷಕನೊಬ್ಬ, “ನೀವು ನರ್ವಸ್ ಆಗಿದ್ದೀರಾ?’ ಎಂದು ಅಣಕಿಸಿದ. ಇದರಿಂದ ಸಿಟ್ಟಿಗೆದ್ದ ಜೊಕೋವಿಕ್, ಆ ಪ್ರೇಕ್ಷಕನ ವಿರುದ್ಧ ಕಿರುಚಿದರು. ಆಗ ಅಂಪಾಯರ್ ಜೊಕೋಗೆ ಎಚ್ಚರಿಕೆ ನೀಡಿದರು. ಸೂರ್ಯನ ಬೆಳಕಿದ್ದಾಗಲೂ ಸಂಘಟಕರು ಫ್ಲಡ್‌ಲೈಟ್ ಹಾಕಿದ್ದರ ವಿರುದ್ಧ ಜೊಕೋಗೆ ಅಸಮಾಧಾನವಿದ್ದರೂ, ತಾನು ಕೂಗಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.