ಕಾವೇರಿಸಿಕೊಳ್ಳುತ್ತಿದೆ ಕಿರಿಯರ ಕಾಲ್ಚೆಂಡಿನ ಕಾಳಗ


Team Udayavani, Sep 27, 2017, 11:53 AM IST

27-STATE-28.jpg

ಮುಂಬಯಿ: ಇದೇ ಮೊದಲ ಬಾರಿಗೆ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಫಿಫಾ ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯ ಕ್ಷಣಗಣನೆ ಆರಂಭಗೊಂಡಿದೆ. ಅ. 6ರಿಂದ ಮೊದಲ್ಗೊಳ್ಳ ಲಿರುವ ಈ ಕಾಲ್ಚೆಂಡಿನ ಕಾಳಗ ನಿಧಾನ ವಾಗಿ ಕಾವೇರಿಸಿಕೊಳ್ಳುತ್ತಿದೆ. 3 ಬಾರಿಯ ಚಾಂಪಿಯನ್‌ ಬ್ರಝಿಲ್‌ ತಂಡ ಮಂಗಳವಾರ ಮುಂಬಯಿಗೆ ಬಂದಿಳಿಯುವುದರೊಂದಿಗೆ ಫ‌ುಟ್‌ಬಾಲ್‌ ಜ್ವರ ಭಾರತೀಯರನ್ನು ನಿಧಾನವಾಗಿ ಆವರಿಸತೊಡಗಿದೆ.

ಬ್ರಝಿಲ್‌ ತಂಡ ಮಂಗಳವಾರ ಬೆಳಗ್ಗೆ ಮುಂಬಯಿಗೆ ಆಗಮಿಸಿದ್ದು, ಸಂಜೆ ಅಂಧೇರಿಯ “ಮುಂಬೈ ಫ‌ುಟ್ಬಾಲ್‌ ಅರೆನಾ’ದಲ್ಲಿ ಅಭ್ಯಾಸ ಆರಂಭಿಸಿತು. ಅ. 28ರಂದು ಅಂಧೇರಿ ಕಾಂಪ್ಲೆಕ್ಸ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಬ್ರಝಿಲ್‌ ಅಭ್ಯಾಸ ಪಂದ್ಯವನ್ನು ಆಡಲಿದೆ. 

ಬ್ರಝಿಲ್‌ “ಡಿ’ ವಿಭಾಗದಲ್ಲಿ ಸ್ಥಾನ ಪಡೆದಿದ್ದು, ಕೊರಿಯಾ, ನೈಜೀರಿಯಾ ಮತ್ತು ಸ್ಪೇನ್‌ ಈ ವಿಭಾಗದ ಉಳಿದ ತಂಡಗಳಾಗಿವೆ. ಅ. 7ರಂದು ಕೊಚ್ಚಿಯಲ್ಲಿ ಸ್ಪೇನ್‌ ವಿರುದ್ಧ ಆಡುವ ಮೂಲಕ ಬ್ರಝಿಲ್‌ ತನ್ನ ಅಭಿಯಾನ ಆರಂಭಿಸಲಿದೆ. 

ಟರ್ಕಿ ತಂಡ ಆಗಮನ
ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಟರ್ಕಿ ತಂಡ ಸೋಮವಾರ ರಾತ್ರಿಯೇ ಮುಂಬಯಿಗೆ ಬಂದಿದೆ. ಮಂಗಳವಾರ ಅದು ನವೀ ಮುಂಬಯಿಯಲ್ಲಿ ಅಭ್ಯಾಸ ನಡೆಸಿತು. ಟರ್ಕಿ “ಬಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಪರಗ್ವೆ, ಮಾಲಿ ಮತ್ತು ನ್ಯೂಜಿಲ್ಯಾಂಡ್‌ ಈ ವಿಭಾಗದ ಇನ್ನಿತರ ತಂಡಗಳು. ಕೂಟದ ಉದ್ಘಾಟನಾ ದಿನದಂದೇ (ಅ. 6) ಟರ್ಕಿ ತಂಡ ನವೀ ಮುಂಬಯಿಯ “ಡಿ.ವೈ. ಪಾಟೀಲ್‌ ಸ್ಟೇಡಿಯಂ’ನಲ್ಲಿ ತನ್ನ ಮೊದಲ ಲೀಗ್‌ ಪಂದ್ಯವನ್ನು ನ್ಯೂಜಿಲ್ಯಾಂಡ್‌ ವಿರುದ್ಧ ಆಡಲಿದೆ. 

6 ತಾಣಗಳಲ್ಲಿ ಪಂದ್ಯಗಳು
ಕಿರಿಯರ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿ ಅ. 6ರಿಂದ ಮೊದಲ್ಗೊಂಡು ಅ. 28ರ ತನಕ 22 ದಿನಗಳ ಕಾಲ ನಡೆಯಲಿದೆ. ದೇಶದ 6 ತಾಣಗಳು ಕೂಟದ ಆತಿಥ್ಯ ವಹಿಸಲಿವೆ. ಇವುಗಳೆಂದರೆ ಹೊಸದಿಲ್ಲಿ, ನವೀ ಮುಂಬಯಿ, ಗೋವಾ, ಕೊಚ್ಚಿ, ಗುವಾಹಟಿ ಮತ್ತು ಕೋಲ್ಕತಾ. “ಎ’ ವಿಭಾಗದಲ್ಲಿರುವ ಭಾರತ ತನ್ನ ಮೊದಲ ಲೀಗ್‌ ಪಂದ್ಯವನ್ನು ಯುಎಸ್‌ಎ ವಿರುದ್ಧ ಅ. 6ರಂದು ಆಡಲಿದೆ.

20 ಸಾವಿರ ಟಿಕೆಟ್‌ ಮಾರಾಟ
ವಿಶ್ವಕಪ್‌ ಫ‌ುಟ್‌ಬಾಲ್‌ ವೀಕ್ಷಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನವೀ ಮುಂಬಯಿಯಲ್ಲಿ ಮೊದಲ ದಿನ ನಡೆಯಲಿರುವ 2 ಪಂದ್ಯಗಳ 20 ಸಾವಿರ ಟಿಕೆಟ್‌ ಈಗಾಗಲೇ ಮಾರಾಟವಾಗಿದೆ. ಅಂದು “ಡಿ.ವೈ. ಪಾಟೀಲ್‌ ಸ್ಟೇಡಿಯಂ’ನಲ್ಲಿ ಭಾರತ- ಯುಎಸ್‌ ಮತ್ತು ಪರಗ್ವೆ-ಮಾಲಿ ನಡುವೆ ಪಂದ್ಯಗಳು ನಡೆಯಲಿವೆ. ಈ ಸ್ಟೇಡಿಯಂ 45 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದೆ. ಪಂದ್ಯಾ ವಳಿಯ ಆರಂಭಕ್ಕೆ ಇನ್ನೂ 10 ದಿನ ಇರುವುದರಿಂದ ಅಷ್ಟರಲ್ಲಿ ಟಿಕೆಟ್‌ “ಸೋಲ್ಡ್‌ ಔಟ್‌’ ಆದೀತೆಂಬ ನಿರೀಕ್ಷೆ ಸಂಘಟಕರದ್ದು. “ಡಿ.ವೈ. ಪಾಟೀಲ್‌ ಸ್ಟೇಡಿಯಂ’ನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ದಕ್ಷಿಣ ಕೊರಿಯಾದಿಂದ ತರಿಸಲಾದ ನೂತನ ಆಸನ ಹಾಗೂ ಛಾವಣಿಯನ್ನು ಅಳವಡಿಸಲಾಗಿದ್ದು, ಪ್ರತಿಯೊಬ್ಬರಿಗೂ ಪಂದ್ಯವನ್ನು ಸ್ಪಷ್ಟವಾಗಿ ವೀಕ್ಷಿಸುವ ಅವಕಾಶ ಲಭಿ ಸಲಿದೆ. ಸೆ. 28ರ ಬಳಿಕ ಯಾವುದೇ ಹೊತ್ತಿನಲ್ಲಿ ಈ ಕ್ರೀಡಾಂಗಣವನ್ನು ಫಿಫಾಗೆ ಹಸ್ತಾಂತರಿಸಲಾಗುವುದು. ಪಂದ್ಯಗಳ ದಿನದಂದು ಸ್ಟೇಡಿಯಂನಿಂದ ಹತ್ತಿರದ ರೈಲ್ವೇ ನಿಲ್ದಾಣಗಳಿಗೆ ಬಸ್ಸುಗಳ ವ್ಯವಸ್ಥೆ ಮಾಡಲು ಸ್ಥಳೀಯ ಮುನ್ಸಿಪಲ್‌ ಕಾರ್ಪೊರೇಶನ್‌ ಒಪ್ಪಿಗೆ ಸಲ್ಲಿಸಿದೆ.

ಟಾಪ್ ನ್ಯೂಸ್

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.