ಕುಸ್ತಿ ಶಿಬಿರದಿಂದ ಫೊಗಾಟ್ ಸೋದರಿಯರು ಔಟ್
Team Udayavani, May 18, 2018, 6:20 AM IST
ಲಕ್ನೋ: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕುಸ್ತಿ ಶಿಬಿರದಿಂದ ಫೊಗಾಟ್ ಸಹೋದರಿಯರನ್ನು ಅಶಿಸ್ತಿನ ಕಾರಣ ನೀಡಿ ಹೊರಹಾಕಲಾಗಿದೆ.
ಮೇ 10ಕ್ಕೆ ರಾಷ್ಟ್ರೀಯ ಶಿಬಿರ ಆರಂಭವಾದರೂ ಗೀತಾ, ಬಬಿತಾ, ರೀತು,ಸಂಗೀತಾ ಶಿಬಿರವನ್ನು ಕೂಡಿಕೊಳ್ಳಲಿಲ್ಲ. ಈ ಬಗ್ಗೆ ಯಾವುದೇ ಮಾಹಿತಿಯನ್ನೂ ರಾಷ್ಟ್ರೀಯ ಕುಸ್ತಿ ಒಕ್ಕೂಟಕ್ಕೆ ನೀಡಿಲ್ಲ. ಇದರಿಂದ ಸಿಟ್ಟಾಗಿರುವ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಜಭೂಷಣ್ ಸಿಂಗ್, ಆಟಗಾರ್ತಿಯರನ್ನು ರಾಷ್ಟ್ರೀಯ ಶಿಬಿರದಿಂದ ಹೊರಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ನಿರ್ಧಾರ ಫೊಗಾಟ್ ಸಹೋದರಿಯರಿಗೆ ಮಾರಕವಾಗುವ ಸಾಧ್ಯತೆಯಿದೆ.ಮುಂದಿನ ಏಷ್ಯನ್ ಗೇಮ್ಸ್ ಅರ್ಹತಾ
ಕೂಟಗಳಿಗೆ ಆಯ್ಕೆಯಾಗುವುದೂ ಕಷ್ಟಕರವಾಗಲಿದೆ. ಆದರೂ ಆಟಗಾರ್ತಿಯರಿಗೆ ಒಂದು ಜೀವದಾನ ನೀಡಿದ್ದು,
ಫೊಗಾಟ್ ಸಹೋದರಿಯರು ಸರಿಯಾದ ವಿವರಣೆ ನೀಡಿದರೆ ಕ್ಷಮಿಸುವುದಾಗಿ ಬ್ರಜಭೂಷಣ್ ತಿಳಿಸಿದ್ದಾರೆ.
ಈ ಬಾರಿ ಕಾಮನ್‌ವೆಲ್ತ್ ಕೂಟ ಮತ್ತು 2010ರ ದೆಹಲಿಕಾಮನ್‌ವೆಲ್ತ್ ಕೂಟದಲ್ಲಿ ಗೀತಾ ಮತ್ತು ಬಬಿತಾ ಚಿನ್ನದ ಪದಕ ಗೆದ್ದಿದ್ದರು. ಇವರ ಕುರಿತು ದಂಗಲ್ ಸಿನಿಮಾ ಬಂದ ನಂತರ ಇಡೀ ದೇಶದಲ್ಲಿ ಜನಪ್ರಿಯರಾಗಿದ್ದನ್ನು ಇಲ್ಲಿ
ನೆನಪಿಸಿಕೊಳ್ಳಬಹುದು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಬಿತಾ ಫೊಗಾಟ್, ನನಗೆ ಎರಡೂ ಮಂಡಿನೋವಿನಿಂದ ಬಳಲುತ್ತಿದ್ದೇನೆ. ಆದ್ದರಿಂದ
ಶಿಬಿರವನ್ನು ಸೇರಿಕೊಂಡಿಲ್ಲ. ಅವರಿಗೆ ಮಾಹಿತಿ ನೀಡದಿರುವುದು ನನ್ನ ತಪ್ಪು. ತಕ್ಷಣವೇ ಈ ಬಗ್ಗೆ ಮಾಹಿತಿ ರವಾನಿಸಲಿದ್ದೇನೆ. ಇನ್ನು ರಿಂಕು ಮತ್ತು ಸಂಗೀತಾ ರಷ್ಯಾದಲ್ಲೇ ಕುಸ್ತಿ ತರಬೇತಿ ಪಡೆಯಲು ವೀಸಾಕ್ಕೆ ಯತ್ನಿಸುತ್ತಿದ್ದಾರೆ. ಅಕ್ಕ ಗೀತಾ ಬೆಂಗಳೂರಿನಲ್ಲಿ ಖಾಸಗಿಯಾಗಿ ತರಬೇತಿ ಪಡೆಯುತ್ತಿದ್ದಾರೆ. ಅವರು ಯಾಕೆ ಇನ್ನೂ ಶಿಬಿರ ಸೇರಿಕೊಂಡಿಲ್ಲ ಎನ್ನುವುದು ತನಗೆ ಗೊತ್ತಿಲ್ಲ ಎಂದು ಬಬಿತಾ ವಿವರಿಸಿದ್ದಾರೆ.
ಕುಸ್ತಿ ಶಿಬಿರದಿಂದ ಹೊರಬಿದ್ದಿರುವ ಇನ್ನೊಬ್ಬ ಕುಸ್ತಿಪಟು ರಿಯೋ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಪತಿ ಸತ್ಯವ್ರತ ಕಡಿಯಾನ್. ಅವರು ಕೂಡ ಸೂಕ್ತ ಸಮಯಕ್ಕೆ ಶಿಬಿರವನ್ನು ಕೂಡಿಕೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.