ಫುಟ್‌ಬಾಲ್ ಭವಿಷ್ಯ: ಈ ಬಾರಿ ಬೆಕ್ಕಿನ ಸರದಿ!
Team Udayavani, Jun 10, 2018, 10:52 AM IST
“ಪೌಲ್ ದಿ ಆಕ್ಟೋಪಸ್!’
ಈ ಹೆಸರು ನೆನಪಿರಬೇಕಲ್ಲ? 2010ರ ವಿಶ್ವಕಪ್ ವೇಳೆ ಭವಿಷ್ಯ ನುಡಿದ “ಅಷ್ಟಪದಿ’. ತಂಡಗಳ ಹೆಸರುಳ್ಳ, ಆಹಾರ ತುಂಬಿರುವ 2 ಬೌಲ್‌ಗಳ ಪೈಕಿ ಒಂದನ್ನು ಆರಿಸುವ ಮೂಲಕ ಆಕ್ಟೋಪಸ್ ಗೆಲುವಿನ ತಂಡ ಯಾವುದೆಂದು ಗುರುತಿಸುವ ರೀತಿಗೆ ಎಲ್ಲರೂ ಬೆರಗಾಗಿದ್ದರು.
ಇದೀಗ ಮಾಸ್ಕೊ ವಿಶ್ವಕಪ್ ಸಮೀಪಿಸಿದೆ. ಸೋಲು-ಗೆಲುವಿನ ಭವಿಷ್ಯ ನಡಿಯುವ ಪ್ರಾಣಿ ಯಾವುದು ಎಂಬ ಕುತೂಹಲ ಅನೇಕರಲ್ಲಿತ್ತು. ಇದಕ್ಕೀಗ ತೆರೆ ಬಿದ್ದಿದೆ. ಈ ಸಲ ಭವಿಷ್ಯ ಹೇಳುವುದು ಬೆಕ್ಕಿನ ಸರದಿ. ಬಿಳಿ ಬಣ್ಣದ, ನೀಲಿ ಕಂಗಳ, “ಅಚಿಲ್ಸ್’ ಎಂಬ ಹೆಸರಿನ ಕಿವುಡು ಬೆಕ್ಕು ಈ ಕೆಲಸ ಮಾಡಲಿದೆ. ಆಚೀಚೆ ಬದಿಯಲ್ಲಿ ಇಡಲಾಗುವ 2 ಬೌಲ್‌ಗಳಲ್ಲಿ ಆಹಾರದ ಜತೆಗೆ 2 ದೇಶಗಳ ಧ್ವಜವನ್ನು ನೆಡಲಾಗುತ್ತದೆ. ಇದರಲ್ಲಿ ಒಂದನ್ನು ಆಹಾರಕ್ಕಾಗಿ ಆಯ್ದುಕೊಳ್ಳುವ ಮೂಲಕ ಅಚಿಲ್ಸ್ ಗೆಲುವಿನ ತಂಡವನ್ನು ಗುರುತಿಸುತ್ತದೆ. ಸದ್ಯ ಈ ಬೆಕ್ಕು ಸೇಂಟ್ ಪೀಟರ್ಬರ್ಗ್‌ನ “ಹರ್ಮಿಟೇಜ್ ಮ್ಯೂಸಿಯಂ’ನಲ್ಲಿ ಇದೆ. ಇಲ್ಲಿನ ಬೆಕ್ಕುಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅನ್ನಾ ಕಸತ್ಕಿನಾ ಫುಟ್‌ಬಾಲ್ ಭವಿಷ್ಯ ನುಡಿಯಲು “ಅಚಿಲ್ಸ್’ನನ್ನೇ ಆಯ್ಕೆ ಮಾಡಿದ್ದಾರೆ.
ಈ ಮ್ಯೂಸಿಯಂಗೆ ಆಗಮಿಸಿದ ಬಳಿಕ ಅಚಿಲ್ಸ್ ಮೊದಲ ಬಾರಿಗೆ ಹೊರಹೋಗುತ್ತಿದ್ದು, ವಿಶ್ವಕಪ್ ಫುಟ್‌ಬಾಲ್ ಮುಗಿಯುವ ತನಕ “ಕ್ಯಾಟ್ ರಿಪಬ್ಲಿಕ್ ಕೆಫೆ’ಯಲ್ಲಿ ಉಳಿಯಲಿದೆ. ಇಲ್ಲಿ ಈ ಬೆಕ್ಕಿನ ವೀಕ್ಷಣೆಗೆ ಕೆಲವು ವಿಶೇಷ ಅತಿಥಿಗಳಿಗೆ ಅವಕಾಶ ಕಲ್ಪಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.