ಫುಟ್‌ಬಾಲ್: ಭಾರತಕ್ಕೆ ಪಾಕಿಸ್ಥಾನ ಸೆಮಿ ಎದುರಾಳಿ
Team Udayavani, Sep 11, 2018, 6:50 AM IST
ಢಾಕಾ: ಸ್ಯಾಫ್ ಕಪ್ ಫುಟ್‌ಬಾಲ್ ಕೂಟದಲ್ಲಿ ಹಾಲಿ ಚಾಂಪಿಯನ್ ಭಾರತ ತನ್ನ ಪರಾಕ್ರಮ ಮುಂದುವರಿಸಿದ್ದು, 2-0 ಗೋಲುಗಳಿಂದ ಮಾಲ್ಡೀವ್ಸ್ ತಂಡವನ್ನು ಮಣಿಸಿದೆ.
ಇದರೊಂದಿಗೆ ಬುಧವಾರ ಢಾಕಾದ ಬಂಗಬಂಧು ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ಥಾನವನ್ನು ಎದುರಿಸಲಿದೆ.
5 ವರ್ಷಗಳ ಬಳಿಕ ಮುಖಾಮುಖೀ
ಸ್ಯಾಫ್ ಕಪ್‌ನಲ್ಲಿ ಭಾರತ- ಪಾಕಿಸ್ಥಾನ ತಂಡಗಳು 5 ವರ್ಷಗಳ ಬಳಿಕ ಮುಖಾಮುಖೀ ಯಾಗುತ್ತಿವೆ. 2013ರಲ್ಲಿ ಕಠ್ಮಂಡುವಿನಲ್ಲಿ ನಡೆದ ಪಂದ್ಯದಲ್ಲಿ ಇತ್ತಂಡಗಳು ಕೊನೆಯ ಸಲ ಎದುರಾಗಿದ್ದವು. ಈ ಪಂದ್ಯದಲ್ಲಿ ಭಾರತ 1-0 ಗೋಲಿನಿಂದ ಪಾಕಿಸ್ಥಾಕ್ಕೆ ಸೋಲುಣಿಸಿತ್ತು.
ಮಾಲ್ಡೀವ್ಸ್ ವಿರುದ್ಧದ ಗೆಲುವಿನೊಂದಿಗೆ ಭಾರತ ಒಟ್ಟು 6 ಅಂಕಗಳೊಂದಿಗೆ “ಬಿ’ ವಿಭಾಗದ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತು. ಮಾಲ್ಡೀವ್ಸ್‌ವಿರುದ್ಧ ನಿಖೀಲ್ ಪೂಜಾರಿ (36ನೇ ನಿಮಿಷ) ಹಾಗೂ ಮನ್ವೀರ್ ಸಿಂಗ್ (45ನೇ ನಿಮಿಷ) ಗೋಲು ದಾಖಲಿಸಿದರು. ಇವರಿಬ್ಬರಿಗೂ ಇದು ಮೊದಲ ಅಂತಾರಾಷ್ಟ್ರೀಯ ಗೋಲು ಎನ್ನುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.