ಭಾರತ-ಚೀನ ಫುಟ್‌ಬಾಲ್ ಪಂದ್ಯ ಡ್ರಾ
Team Udayavani, Oct 14, 2018, 12:17 PM IST
ಸುಜೊ (ಚೀನ): ಬರೋಬ್ಬರಿ 21 ವರ್ಷಗಳ ಅನಂತರ ಭಾರತ ಮತ್ತು ಚೀನ ತಂಡಗಳ ನಡುವೆ ನಡೆದ ಫುಟ್‌ಬಾಲ್ ಪಂದ್ಯ ಯಾವುದೇ ಗೋಲು ಕಾಣದೇ ಡ್ರಾದಲ್ಲಿ ಮುಕ್ತಾಯ ಕಂಡಿದೆ. ಗೋಲು ಗಳಿಸಲು ಎರಡೂ ತಂಡಗಳು ನಿಕಟ ಹಣಾಹಣಿ ನಡೆಸಿದರೂ ಇದರಲ್ಲಿ ಯಶ ಕಾಣಲಿಲ್ಲ. ಭಾರತದ ಪರ ಗುರುಪ್ರೀತ್ ಸಿಂಗ್ ಉತ್ತಮವಾಗಿ ಗೋಲ್ ಕೀಪಿಂಗ್ ನಡೆಸಿ ಗಮನ ಸೆಳೆದರು.
ಎರಡೂ ತಂಡಗಳು ಈ ಹಿಂದೆ 17 ಬಾರಿ ಕಾದಾಡಿವೆ. ಆದರೆ ಅವೆಲ್ಲ 21 ವರ್ಷಗಳ ಹಿಂದೆ ನಡೆದದ್ದು! ಅದರಲ್ಲೂ ಭಾರತ ತಂಡ ಚೀನದಲ್ಲಿ ಪಂದ್ಯವಾಡಿರುವುದು ಇದೇ ಮೊದಲು ಎನ್ನುವುದು ಇನ್ನೊಂದು ಮಹತ್ವದ ಸಂಗತಿ. ಭಾರತದಲ್ಲಿ ಚೀನ 7 ಬಾರಿ ಆಡಿದೆ. ಉಳಿದ ಪಂದ್ಯಗಳು ತಟಸ್ಥ ತಾಣದಲ್ಲಿ ನಡೆದಿವೆ.
ನಾಯಕ ಸುನೀಲ್ ಚೆಟ್ರಿ ಶಕ್ತಿ ಮೀರಿ ಗೋಲು ಗಳಿಸಲು ಯತ್ನಿಸಿದರು. ಚೀನದ ರಕ್ಷಣಾ ಪಡೆ ಅದನ್ನು ತಡೆಯಲು ಪೂರ್ಣ ಯಶಸ್ಸು ಸಾಧಿಸಿತು. ಚೀನ ಆಟಗಾರರು ಚೆಟ್ರಿ ಅವರನ್ನು ತಡೆಯಲು ವಿಶೇಷ ಯೋಜನೆ ರೂಪಿಸಿದ್ದಂತೆ ಕಂಡುಬಂತು. ಮತ್ತೂಂದು ಕಡೆ ಭಾರತೀಯರನ್ನು ವಂಚಿಸಿ ಗೋಲು ಗಳಿಸುವ ಚೀನ ಯತ್ನವನ್ನು ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ವಿಫಲಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.