ಫುಟ್‌ಬಾಲ್ ಆಟಗಾರರಿಗೆ ಮೆದುಳು ರೋಗದ ಪ್ರಮಾಣ ಜಾಸ್ತಿ
Team Udayavani, Feb 17, 2017, 3:45 AM IST
ಲಂಡನ್: ಫುಟ್‌ಬಾಲ್ ಆಡುವುದರಿಂದ ಮೆದುಳು ರೋಗ ಬರುತ್ತದೆಯೇ? ಈ ಸಾಧ್ಯತೆ ಜಾಸ್ತಿಯಿದೆ ಎಂದು ಹೇಳುತ್ತದೆ ಒಂದು ಸಮೀಕ್ಷೆ. ಲಂಡನ್ನಿನ ಆಕ್ಟಾ ನ್ಯೂರೋಪ್ಯಾಥೋಲಾಜಿಕಾ ಎಂಬ ನಿಯತಕಾಲಿಕೆಯಲ್ಲಿ ಲಂಡನ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋಲಜಿ ಎಂಬ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆ ಪ್ರಕಟವಾಗಿದೆ.
ಅದರಲ್ಲಿ ಈ ಆತಂಕಕಾರಿ ಸಂಗತಿ ಹೊರಬಿದ್ದಿದೆ. ಚಿಕ್ಕವಯಸ್ಸಿನಿಂದ ಚೆಂಡನ್ನು ತಲೆಯಿಂದ ಹೊಡೆಯುವ ಅಭ್ಯಾಸವನ್ನು ಫುಟ್‌ಬಾಲ್ ಆಟಗಾರರು ಮಾಡುವುದರಿಂದ ಮೆದುಳು ರೋಗ ಅಥವಾ ಡಿಮೆಂಷಿಯಾ ಬರುತ್ತದೆ ಎನ್ನುವುದು ಸಮೀಕ್ಷೆ ಮಾಡಿದವರ ಅಭಿಪ್ರಾಯ.
ಇದಕ್ಕಾಗಿ ಅವರು 14 ಮಂದಿ ನಿವೃತ್ತ ಫುಟ್‌ಬಾಲ್ ಆಟಗಾರರನ್ನು ಅಧ್ಯಯನ ಮಾಡಿದ್ದಾರೆ. ಇದರಲ್ಲಿ ಒಬ್ಬರು ಹವ್ಯಾಸಿ ಆಟಗಾರರಾಗಿದ್ದಾರೆ. ಈ ಎಲ್ಲ ಆಟಗಾರರನ್ನು 1980ರಿಂದ 2010ರವರೆಗೆ ಇಂಗ್ಲೆಂಡ್‌ನ ಸೌಥ್ ವೇಲ್ಸ್‌ನಲ್ಲಿ ನಿರಂತರ ಪರಿಶೀಲನೆಯಲ್ಲಿಡಲಾಗಿತ್ತು. ಈ ಎಲ್ಲ ಆಟಗಾರರು ಸರಾಸರಿ 26ನೇ ವಯಸ್ಸಿನಿಂದ ಫುಟ್‌ಬಾಲ್ ಆಡಲು ಶುರು ಮಾಡಿದ್ದರು. ಇವರೆಲ್ಲರಿಗೆ 60ನೇ ವಯಸ್ಸಿನ ಮಧ್ಯಭಾಗದಲ್ಲಿದ್ದಾಗಲೇ ಡಿಮೆಂಷಿಯಾ ಶುರುವಾಗಿದೆ.
ಸಾಮಾನ್ಯ ಜನರಿಗೆ ಸರಾಸರಿ 70ನೇ ವಯಸ್ಸಿನ ಮಧ್ಯಭಾಗದಲ್ಲಿ ಡಿಮೆಂಷಿಯಾ ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ತೀವ್ರ ಪ್ರಮಾಣದ ಡಿಮೆಂಷಿಯಾದ ಪರಿಣಾಮ ಅಧ್ಯಯನಕ್ಕೊಳಗಾಗದ 14 ಮಂದಿ ಫುಟ್‌ಬಾಲಿಗರಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 6 ಮಂದಿಯ ಮರಣೋತ್ತರ ಪರೀಕ್ಷೆಯಲ್ಲಿ ಡಿಮೆಂಷಿಯಾ ತೀವ್ರ ಪ್ರಮಾಣದಲ್ಲಿರುವುದು ಪತ್ತೆಯಾಗಿದೆ.
ಏಕೆ ಬರುತ್ತದೆ?: ಬಹುತೇಕ ಆಟಗಾರರು ತಮ್ಮ ಬಾಲ್ಯದಿಂದಲೇ ಚೆಂಡನ್ನು ತಲೆಯಿಂದ ಹೊಡೆಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಮೆದುಳು ರೋಗಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ವೈದ್ಯರು. ಅಮೆರಿಕದ ಫುಟ್‌ಬಾಲ್ ಆಟಗಾರರಲ್ಲಿ ಇದರ ಪ್ರಮಾಣ ಜಾಸ್ತಿಯಿದೆ. ತಲೆಗೆ ಸತತವಾಗಿ ಏಟು ತಿನ್ನುವ ಬಾಕ್ಸರ್‌ಗಳಲ್ಲೂ ಇದು ಗರಿಷ್ಠ ಪ್ರಮಾಣದಲ್ಲಿ ಕಂಡುಬರುತ್ತದೆ ಎಂದು ಸಮೀಕ್ಷೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.