Team India ಬೌಲಿಂಗ್ ಕೋಚ್ ಆಗಿ ವಿದೇಶಿ ಆಟಗಾರ? ಈ ಬೌಲರ್ ಹೆಸರು ಸೂಚಿಸಿದ ಗೌತಿ

Team Udayavani, Jul 12, 2024, 1:34 PM IST

Foreign player as Team India bowling coach? Gautam Gambhir suggested a name to BCCI

ಮುಂಬೈ: ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನಾಗಿ (Head Coach) ಗೌತಮ್ ಗಂಭೀರ್ (Gautam Gambhir) ಅವರು ಇತ್ತೀಚೆಗೆ ನೇಮಕವಾಗಿದ್ದಾರೆ. ಇದೀಗ ಗೌತಮ್ ಅವರ ಸಹಾಯಕರ ನೇಮಕಕ್ಕೆ ಬಿಸಿಸಿಐ (BCCI) ಮುಂದಾಗಿದೆ. ಇದಕ್ಕೆ ಇದೀಗ ಹಲವು ಹೆಸರುಗಳು ಕೇಳಿಬರುತ್ತಿದೆ.

ಹೊಸ ಕೋಚ್ ಗೆ ಸಹಾಯಕರಾಗಿ ಬ್ಯಾಟಿಂಗ್ ಕೋಚ್, ಫೀಲ್ಡಿಂಗ್ ಕೋಚ್ ಮತ್ತು ಬೌಲಿಂಗ್ ಕೋಚ್ ನೇಮಕವಾಗಬೇಕಿದೆ. ಮುಖ್ಯ ಕೋಚ್ ಸೂಚಿಸಿದ ಹೆಸರುಗಳನ್ನು ಅಳೆದು ತೂಗಿ ಬಿಸಿಸಿಐ ಈ ಕೋಚ್ ಗಳನ್ನು ನೇಮಿಸುತ್ತದೆ.

ಬೌಲಿಂಗ್ ಕೋಚ್ ಹುದ್ದೆಗೆ ಇದೀಗ ಹಲವು ಹೆಸರುಗಳು ಕೇಳಿಬರುತ್ತಿದೆ. ಆರಂಭದಲ್ಲಿ ಕನ್ನಡಿಗ ವಿನಯ್ ಕುಮಾರ್ ಅವರ ಹೆಸರನ್ನು ಗೌತಿ ಸೂಚಿಸಿದ್ದರು ಎನ್ನಲಾಗಿತ್ತು. ಆದರೆ ಬಿಸಿಸಿಐ ಇದನ್ನು ನಿರಾಕರಿಸಿದೆ ಎಂದು ವರದಿಯಾಗಿದೆ. ಆ ಬಳಿಕ ಮಾಜಿ ವೇಗಿಗಳಾದ ಜಹೀರ್ ಖಾನ್ ಮತ್ತು ಲಕ್ಷ್ಮೀಪತಿ ಬಾಲಾಜಿ ಅವರ ಹೆಸರುಗಳು ಕೇಳಿಬಂದಿದ್ದವು.

ಆದರೆ ಇದೀಗ ಹೊಸ ಹೆಸರೊಂದು ತೇಲಿ ಬಂದಿದೆ. ಈ ಹಿಂದೆ ಎಲ್ಎಸ್ ಜಿಯಲ್ಲಿ ತನ್ನೊಂದಿಗೆ ಕೆಲಸ ಮಾಡಿದ್ದ ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ಮೋರ್ನೆ ಮೊರ್ಕೆಲ್ (Morne Morkel) ಅವರನ್ನು ಗೌತಮ್ ಗಂಭೀರ್ ಶಿಫಾರಸ್ಸು ಮಾಡಿದ್ದಾರೆ ಎನ್ನುತ್ತಿದೆ ವರದಿ.

ಮೊರ್ಕೆಲ್ ಅವರು ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ನಲ್ಲಿ ಪಾಕಿಸ್ತಾನ ತಂಡದ ತರಬೇತುದಾರರಾಗಿದ್ದರು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಯೊಂದಿಗಿನ ಒಪ್ಪಂದದ ಅವಧಿ ಮುಗಿಯುವ ಮೊದಲೇ ಅಲ್ಲಿ ಕೆಲಸ ತೊರೆದರು.

ಮೊರ್ಕೆಲ್ ಅವರು ದಕ್ಷಿಣ ಆಫ್ರಿಕಾ ಪರ 2006ರಿಂದ 2018ರವರೆಗೆ 86 ಟೆಸ್ಟ್, 117 ಏಕದಿನ ಮತ್ತು 44 ಟಿ20 ಪಂದ್ಯಗಳನ್ನಾಡಿದ್ದಾರೆ. ಗೌತಿ ಮೊರ್ಕೆಲ್ ಅವರ ಹೆಸರನ್ನು ಸೂಚಿಸಿದ್ದು, ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ವೇಗಿಯ ಜೊತೆ ಮಾತುಕತೆ ನಡೆದಿದೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಮಟ್ಟದಲ್ಲಿ ಪರಿಣಾಮಕಾರಿ ಕೋಚ್ ಎಂಬ ಹೆಗ್ಗಳಿಕೆಯ ಮೊರ್ಕೆಲ್ ಅವರು ಗಂಭೀರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಎಲ್ಎಸ್ ಜಿ ತಂಡದಲ್ಲಿ ಅವರು ಎರಡು ವರ್ಷ ಕೆಲಸ ಮಾಡಿದ್ದಾರೆ. ಹೀಗಾಗಿ ಗಂಭೀರ್ ಅವರು ಮೊರ್ಕೆಲ್ ಆಯ್ಕೆ ವಿಚಾರದಲ್ಲಿ ಉತ್ಸುಕರಾಗಿದ್ದಾರೆ ಎನ್ನುತ್ತಿದೆ ವರದಿ.

ಟಾಪ್ ನ್ಯೂಸ್

PSI Case; ಶಾಸಕ,ಪುತ್ರನನ್ನು ಬಂಧಿಸಿ ನಮ್ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ತಾಕೀತು

PSI Case; ಶಾಸಕ,ಪುತ್ರನನ್ನು ಬಂಧಿಸಿ ನಮ್ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ತಾಕೀತು

Vijayapura; ನಾಗಠಾಣದಲ್ಲಿ ಟ್ರ್ಯಾಕ್ಟರ್ ಜಗ್ಗಾಟದ ರೋಚಕ ಸ್ಪರ್ಧೆ

Vijayapura; ನಾಗಠಾಣದಲ್ಲಿ ಟ್ರ್ಯಾಕ್ಟರ್ ಜಗ್ಗಾಟದ ರೋಚಕ ಸ್ಪರ್ಧೆ

Mangaluru home stay attack case: All accused acquitted

Mangaluru ಹೋಂ ಸ್ಟೇ ದಾಳಿ ಪ್ರಕರಣ: ಎಲ್ಲಾ ಆರೋಪಿಗಳು ಖುಲಾಸೆ

Gadag; ಶಾಲಾ‌‌ ಮಕ್ಕಳ ಕೂದಲು ಕಟ್ ಮಾಡಿದ‌ ಶಿಕ್ಷಕನಿಗೆ ಬಿತ್ತು ಧರ್ಮದೇಟು!

Gadag; ಶಾಲಾ‌‌ ಮಕ್ಕಳ ಕೂದಲು ಕಟ್ ಮಾಡಿದ‌ ಶಿಕ್ಷಕನಿಗೆ ಬಿತ್ತು ಧರ್ಮದೇಟು!

Chikkamagaluru; Arrest of rowdy sheeter who made new sense  under the influence of ganja and alcohol

Chikkamagaluru; ಗಾಂಜಾ, ಕುಡಿತದ ಅಮಲಿನಲ್ಲಿ ಹೈಡ್ರಾಮಾ ನಡೆಸಿದ ರೌಡಿಶೀಟರ್‌ ಬಂಧನ

Iran – Israel ನಡುವಿನ ಸಂಘರ್ಷ ಮಹಾ ಯುದ್ಧಕ್ಕೆ ಕಾರಣವಾಗಬಹುದೇ? ಭಾರತದ ನಿಲುವು ಏನು?

Iran – Israel ನಡುವಿನ ಸಂಘರ್ಷ ಮಹಾ ಯುದ್ಧಕ್ಕೆ ಕಾರಣವಾಗಬಹುದೇ? ಭಾರತದ ನಿಲುವು ಏನು?

Paris 2024; ಕುಸ್ತಿಯಲ್ಲಿ ಮಿಂಚು ಹರಿಸಿದ ವಿನೀಶ್‌ ಫೋಗಟ್‌ ಸೆಮಿ ಫೈನಲ್‌ ಗೆ ಪ್ರವೇಶ

Paris 2024; ಕುಸ್ತಿಯಲ್ಲಿ ಮಿಂಚು ಹರಿಸಿದ ವಿನೀಶ್‌ ಫೋಗಟ್‌ ಸೆಮಿ ಫೈನಲ್‌ ಗೆ ಪ್ರವೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Paris 2024; ಕುಸ್ತಿಯಲ್ಲಿ ಮಿಂಚು ಹರಿಸಿದ ವಿನೀಶ್‌ ಫೋಗಟ್‌ ಸೆಮಿ ಫೈನಲ್‌ ಗೆ ಪ್ರವೇಶ

Paris 2024; ಕುಸ್ತಿಯಲ್ಲಿ ಮಿಂಚು ಹರಿಸಿದ ವಿನೀಶ್‌ ಫೋಗಟ್‌ ಸೆಮಿ ಫೈನಲ್‌ ಗೆ ಪ್ರವೇಶ

neParis; ಚಿನ್ನದ ಕನಸು ಬಿತ್ತಿದ್ದ ಗೋಲ್ಡನ್‌ ಬಾಯ್;‌ ಫೈನಲ್‌ ಪ್ರವೇಶಿಸಿದ ನೀರಜ್‌ ಚೋಪ್ರಾ

Paris; ಚಿನ್ನದ ಕನಸು ಬಿತ್ತಿದ ಗೋಲ್ಡನ್‌ ಬಾಯ್;‌ ಫೈನಲ್‌ ಪ್ರವೇಶಿಸಿದ ನೀರಜ್‌ ಚೋಪ್ರಾ

1-ppp

IPL ವೇಳೆಯಲ್ಲೇ ಪಿಎಸ್‌ಎಲ್‌ ಆಯೋಜನೆ?

ICC

Bangladesh ರಾಜಕೀಯ ಪರಿಸ್ಥಿತಿಗಳನ್ನು ಗಮನಿಸುತ್ತಿದ್ದೇವೆ: ಐಸಿಸಿ

1-DK

T20; ಸೌತ್‌ ಆಫ್ರಿಕಾಗೆ ಕಾರ್ತಿಕ್‌ ರಾಯಭಾರಿ

MUST WATCH

udayavani youtube

ಶಿರೂರಿಗೆ ಬಂದ ಈಶ್ವರ್‌ ಮಲ್ಪೆ ತಂಡಕ್ಕೆ ಕಾರ್ಯಾಚರಣೆಗೆ ಸಿಗದ ಅನುಮತಿ

udayavani youtube

ಸ್ಟ್ರೋಕ್ ಆದ ಮೇಲೆ ಜನರು ಯಾಕೆ ಸಕ್ರಿಯರಾಗಿರಬೇಕು?

udayavani youtube

ಪುಟ್ಟಣ್ಣ ಹೋಟೆಲ್ ಬೆಣ್ಣೆ ಸೆಟ್ ದೋಸೆಗೆ ಮನಸೋಲದವರಿಲ್ಲ! | ಶ್ರೀ ನಂಜುಂಡೇಶ್ವರ ಹೋಟೆಲ್ |

udayavani youtube

ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

udayavani youtube

ದೇಶವನ್ನೇ ಬೆಚ್ಚಿ ಬೀಳಿಸಿದ ಕರ್ನಾಟಕದ ವಿಕೃತ ಕಾಮಿ

ಹೊಸ ಸೇರ್ಪಡೆ

PSI Case; ಶಾಸಕ,ಪುತ್ರನನ್ನು ಬಂಧಿಸಿ ನಮ್ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ತಾಕೀತು

PSI Case; ಶಾಸಕ,ಪುತ್ರನನ್ನು ಬಂಧಿಸಿ ನಮ್ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ತಾಕೀತು

Screenshot (124)

Katpadi : ರಸ್ತೆ ಗುಂಡಿಗೆ ತೇಪೆ, ತಾತ್ಕಾಲಿಕ ಪರಿಹಾರ

Screenshot (122)

Malpe -ಕಲಾಡಿ: ರಸ್ತೆಯೇ ಮಾಯ, ಎಲ್ಲವೂ ಹೊಂಡಮಯ!

Screenshot (121)

Indrali: ರಸ್ತೆಯಲ್ಲೇ ನಿಲ್ಲುವ ಬಸ್‌, ಗುಂಡಿಗಳಿಂದ ಅಪಾಯಕ್ಕೆ ಆಹ್ವಾನ

Dharwad  University: ಧಾರವಾಡ ಕೃಷಿ ವಿವಿಯಿಂದ ಜೈವಿಕ ಗೊಬ್ಬರ!

Dharwad University: ಧಾರವಾಡ ಕೃಷಿ ವಿವಿಯಿಂದ ಜೈವಿಕ ಗೊಬ್ಬರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.