ಆಸೀಸ್ ವಿರುದ್ಧದ ಫಾರ್ಮ್: ರೋಹಿತ್ ವಿಶ್ವಾಸ
Team Udayavani, Oct 21, 2017, 11:51 AM IST
ಮುಂಬಯಿ: ಮುಂಬರುವ ನ್ಯೂಜಿಲ್ಯಾಂಡ್ ಎದುರಿನ ಸರಣಿಯ ವೇಳೆ ನಾವು ಆಸ್ಟೇಲಿಯ ವಿರುದ್ಧದ ಫಾರ್ಮನ್ನೇ ಮುಂದುವರಿಸಬೇಕಿದೆ, ಹಾಗೂ ಇದು ಮುಂದುವರಿಯಲಿದೆ ಎಂಬ ವಿಶ್ವಾಸ ಇದೆ ಎಂಬುದಾಗಿ ಟೀಮ್ ಇಂಡಿಯಾ ಆರಂಭಕಾರ ರೋಹಿತ್ ಶರ್ಮ ಹೇಳಿದ್ದಾರೆ. ಭಾರತ-ನ್ಯೂಜಿಲ್ಯಾಂಡ್ ನಡುವಿನ ಮೊದಲ ಏಕದಿನ ಪಂದ್ಯ ರವಿವಾರ ಮುಂಬಯಿಯಲ್ಲಿ ನಡೆಯಲಿದೆ.
“ನ್ಯೂಜಿಲ್ಯಾಂಡಿಗೆ ಎರಡು ಉತ್ತಮ ಅಭ್ಯಾಸ ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿದೆ. ಇವೆರಡೂ ಮುಂಬಯಿಯಲ್ಲೇ ನಡೆದಿವೆ. ಹೀಗಾಗಿ ಅವರು ಇಲ್ಲಿನ ವಾತಾವರಣದ ಲಾಭವನ್ನೆತ್ತುವುದರಲ್ಲಿ ಅನುಮಾನವಿಲ್ಲ. ಆದರೆ ನಾವು ಹೇಗೆ ಆರಂಭಿಸುತ್ತೇವೆ, ಒಂದು ತಂಡವಾಗಿ ನಾವು ಹೇಗೆ ಆಡುತ್ತೇವೆ ಎಂಬುದರ ಮೇಲೆ ಈ ಸರಣಿಯ ದಿಕ್ಕನ್ನು ಗಮನಿಸಬಹುದು. ನಾವು ಆಸ್ಟ್ರೇಲಿಯ ವಿರುದ್ಧದ ಆಟವನ್ನು ನಿಲ್ಲಿಸಿದ ಹಂತದಿಂದ ಈ ಸರಣಿಯನ್ನು ಮುಂದುವರಿಸಬೇಕಿದೆ. ಅದೇ ಫಾರ್ಮ್ ಇಲ್ಲಿಯೂ ಮುಂದುವರಿಯಬೇಕಿದೆ. ಆ ವಿಶ್ವಾಸದಲ್ಲಿ ನಾವಿದ್ದೇವೆ’ ಎಂದು ರೋಹಿತ್ ಶರ್ಮ ಹೇಳಿದರು.
“ಪ್ರತಿಯೊಂದು ಹೊಸ ಸರಣಿಯೂ ಅದರದೇ ಆದ ಸವಾಲನ್ನು ಹೊಂದಿರುತ್ತದೆ. ಪ್ರತಿಯೊಂದು ಎದುರಾಳಿಗೂ ಅದರದೇ ಆದ ಶಕ್ತಿ ಮತ್ತು ದೌರ್ಬಲ್ಯಗಳಿರುತ್ತವೆ. ಇದನ್ನು ಅರಿತು, ಹೊಂದಿಕೊಂಡು ಹೋಗುವುದು ಮುಖ್ಯ. ಆಸ್ಟ್ರೇಲಿಯ ಹಾಗೂ ನ್ಯೂಜಿಲ್ಯಾಂಡ್ ತಂಡಗಳು ವಿಭಿನ್ನ ಕಾರ್ಯತಂತ್ರಗಳನ್ನು ಹೊಂದಿವೆ’ ಎಂದು ಕಾಂಗರೂ ವಿರುದ್ಧ 296 ರನ್ ಬಾರಿಸಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡ ರೋಹಿತ್ ಅಭಿಪ್ರಾಯಪಟ್ಟರು.
“ನ್ಯೂಜಿಲ್ಯಾಂಡ್ ವಿರುದ್ಧ ನಾವು ಕಳೆದ ವರ್ಷ ಇಲ್ಲಿ ಆಡಿದ್ದೆವು. ಹೆಚ್ಚು ಕಡಿಮೆ ಅದೇ ಆಟಗಾರರನ್ನು ತಂಡ ಹೊಂದಿದೆ. ಹೀಗಾಗಿ ಅವರ ಕಾರ್ಯತಂತ್ರ, ಯೋಜನೆಗಳಲ್ಲಿ ಬದಲಾವಣೆಗಳಾಗುವ ಸಂಭವ ಕಡಿಮೆ’ ಎಂದ ರೋಹಿತ್ ಶರ್ಮ, ವೈಯಕ್ತಿಕ ಫಾರ್ಮ್ ಬಗ್ಗೆ ಸಂತಸ ವ್ಯಕ್ತಪಡಿಸಿದರು. ವೇಗಿ ಟ್ರೆಂಟ್ ಬೌಲ್ಟ್ ಅವರನ್ನು ಎದುರಿಸುವುದು ದೊಡ್ಡ ಸವಾಲು, ಉಪನಾಯಕನ ಜವಾಬ್ದಾರಿಯಿಂದ ವಿಶೇಷ ಬದಲಾವಣೆ ಏನೂ ಕಂಡುಬರದು ಎಂದೂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.