ಬಾಂಗ್ಲಾದ ಮಾಜಿ ಸ್ಪಿನ್ನರ್ ಮೊಶರ್ರಫ್ ಗೆ ಕೋವಿಡ್ 19 ಪಾಸಿಟಿವ್
Team Udayavani, Aug 10, 2020, 6:55 PM IST
ಢಾಕಾ: ಬಾಂಗ್ಲಾದೇಶದ ಮಾಜಿ ಎಡಗೈ ಸ್ಪಿನ್ನರ್ ಮೊಶರ್ರಫ್ ಹೊಸೇನ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ವರ್ಷ ಮೆದುಳಿನ ಗಡ್ಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 38 ವರ್ಷದ ಮೊಶರ್ರಫ್ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಅವರ ತಂದೆಗೆ ಕೋವಿಡ್ ಪಾಸಿಟಿವ್ ಕಂಡು ಬಂದಿತ್ತು. ಈಗ ಮೊಶರ್ರಫ್ ಸೆಲ್ಫ್ ಐಸೋಲೇಶನ್‌ನಲ್ಲಿದ್ದಾರೆ. ಅವರು ಬಾಂಗ್ಲಾ ಪರ 5 ಏಕದಿನ ಪಂದ್ಯಗಳನ್ನಾಡಿದ್ದಾರೆ.
“ನನ್ನ ತಂದೆಗೆ ಮೊದಲು ಕೊರೊನಾ ಸೋಂಕು ಅಂಟಿಕೊಂಡಿತ್ತು. ಅವರನ್ನು ಸಿಎಂಎಚ್ ಹಾಸ್ಪಿಟಲ್‌ನ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಬಳಿಕ ನನ್ನ ಆರೋಗ್ಯದಲ್ಲೂ ತುಸು ವ್ಯತ್ಯಯ ಕಂಡುಬಂತು. ಪರೀಕ್ಷಿಸಿದಾಗ ಕೋವಿಡ್ ಪಾಸಿಟಿವ್ ಪತ್ತೆಯಾಯಿತು. ಆದರೆ ಪತ್ನಿ ಮತ್ತು ಮಕ್ಕಳ ಫಲಿತಾಂಶ ನೆಗೆಟಿವ್ ಬಂದಿದೆ. ಸದ್ಯ ಅವರು ಬೇರೆ ಇದ್ದಾರೆ’ ಎಂಬುದಾಗಿ ಮೊಶರ್ರಫ್ ಹೇಳಿದರು.
ಇದಕ್ಕೂ ಮೊದಲು ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮಶ್ರಫೆ ಮೊರ್ತಜಾ, ನಜ್ಮುಲ್ ಇಸ್ಲಾಮ್ ಮತ್ತು ನಫೀಸ್ ಇಕ್ಬಾಲ್ ಅವರಿಗೂ ಕೊರೊನಾ ತಗುಲಿತ್ತು. ಇವರೆಲ್ಲ ಈಗ ಚೇತರಿಸಿಕೊಂಡಿದ್ದಾರೆ. ಕಳೆದ ವಾರ ಬಾಂಗ್ಲಾ ಫುಟ್‌ಬಾಲ್ ತಂಡದ 18 ಆಟಗಾರರಲ್ಲಿ ಏಕಕಾಲಕ್ಕೆ ಕೊರೊನಾ ಪಾಸಿಟಿವ್ ಕಂಡುಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.