ಮಾಜಿ ಕ್ರಿಕೆಟಿಗ ಗೋಪಾಲ್ ಬೋಸ್ ನಿಧನ
Team Udayavani, Aug 27, 2018, 3:31 PM IST
ಕೋಲ್ಕತಾ: ಭಾರತದ ಪರ ಏಕೈಕ ಏಕದಿನ ಪಂದ್ಯವನ್ನಾಡಿದ ಬಂಗಾಲದ ಮಾಜಿ ಕ್ರಿಕೆಟಿಗ ಗೋಪಾಲ್ ಬೋಸ್ ರವಿವಾರ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಗೋಪಾಲ್ ಬೋಸ್ 78 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 8 ಶತಕ ಹಾಗೂ 17 ಅರ್ಧ ಶತಕಗಳ ಸಹಿತ 3,757 ರನ್ ಪೇರಿಸಿದ್ದಾರೆ. ಆಫ್ಬ್ರೇಕ್ ಬೌಲರ್ ಕೂಡ ಆಗಿದ್ದ ಅವರು 78 ವಿಕೆಟ್ ಉರುಳಿಸಿದ್ದಾರೆ.
ಭಾರತದ ಪರ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದ ಬಂಗಾಲದ ಮೊದಲ ಕ್ರಿಕೆಟಿಗ ನೆಂಬುದು ಬೋಸ್ ಪಾಲಿನ ಹೆಗ್ಗಳಿಕೆ. ಅದು 1974ರ ಇಂಗ್ಲೆಂಡ್ ಎದುರಿನ ಪಂದ್ಯವಾಗಿತ್ತು ಹಾಗೂ ಭಾರತೀಯ ಏಕದಿನ ಇತಿಹಾಸದ ಕೇವಲ 2ನೇ ಪಂದ್ಯವಾಗಿತ್ತು.
ವಿರಾಟ್ ಕೊಹ್ಲಿ ನೇತೃತ್ವದ ಅಂಡರ್-19 ತಂಡ ಕೌಲಾಲಂಪುರ ದಲ್ಲಿ ನಡೆದ 2008ರ ವಿಶ್ವಕಪ್ ಕೂಟದಲ್ಲಿ ಚಾಂಪಿಯನ್ ಆಗಿ ಮೂಡಿಬಂದಾಗ ಗೋಪಾಲ್ ಬೋಸ್ ಅವರೇ ತಂಡದ ಮ್ಯಾನೇಜರ್ ಆಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.