ಹಾಂಕಾಂಗ್ ಮಾಜಿ ನಾಯಕನಿಗೆ ರಣಜಿ ಕ್ರಿಕೆಟ್ ಆಡುವ ಬಯಕೆ!
Team Udayavani, Sep 14, 2019, 5:49 AM IST
ಹೊಸದಿಲ್ಲಿ: ಇಂಗ್ಲೆಂಡಿನ ಮಾಜಿ ಸ್ಪಿನ್ನರ್ ಮಾಂಟಿ ಪನೆಸರ್ ಭಾರತಕ್ಕೆ ಬಂದು ರಣಜಿ ಕ್ರಿಕೆಟ್ ಆಡುವ ಬಯಕೆ ವ್ಯಕ್ತಪಡಿಸಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಈಗ ಹಾಂಕಾಂಗ್ ಕ್ರಿಕೆಟ್ ತಂಡದ ಮಾಜಿ ನಾಯಕ, ಭಾರತೀಯ ಮೂಲದ ಅಂಶುಮಾನ್ ರಥ್ ಸರದಿ. ಇವರು ಕೂಡ ರಣಜಿಯಲ್ಲಿ ಆಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಹಾಂಕಾಂಗ್ ತಂಡದ ನಾಯಕನೂ ಆಗಿದ್ದ ಅಂಶುಮಾನ್, ಭಾರತದಲ್ಲಿ ಇನ್ನುಳಿದ ಕ್ರಿಕೆಟ್ ಬಾಳ್ವೆ ಯನ್ನು ಮುಂದುವರಿಸಬೇಕೆಂಬ ಕಾರಣಕ್ಕಾಗಿ ಹಾಂಕಾಂಗ್ ಕ್ರಿಕೆಟಿಗೆ ಗುಡ್‌ಬೈ ಹೇಳಿದ್ದರು. ಪ್ರಸ್ತುತ ವಿದರ್ಭ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಪ್ರಶಾಂತ್ ವೈದ್ಯ ಜತೆ ಮಾತುಕತೆ ನಡೆಸುತ್ತಿದ್ದಾರೆ. ಅಂಶುಮಾನ್ ಕೋರಿಕೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ.
“ರಣಜಿ ಬಾಗಿಲು ತೆರೆಯುವ ನಂಬಿಕೆ ಇದೆ. ಕ್ಲಬ್ ಮತ್ತು ಲೀಗ್ ಪಂದ್ಯಗಳಲ್ಲಿ ನನ್ನ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿದೆ’ ಎಂದಿದ್ದಾರೆ ಅಂಶುಮಾನ್‌ವ ರಥ್.
“ಕ್ಲಬ್ ಮತ್ತು ಲೀಗ್ ಕ್ರಿಕೆಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅವರನ್ನು ಆಯ್ಕೆಗೆ ಪರಿ ಗಣಿಸಬಹುದು. ಆದರೆ ಇಲ್ಲಿ ತೀವ್ರ ಪೈಪೋಟಿ ಇದೆ. ಅಂಡರ್-23, ಅಂಡರ್-19 ಸಾಧಕರನೇಕರು ಬಾಗಿಲು ಬಡಿಯುತ್ತಿದ್ದಾರೆ’ ಎಂಬುದು ಪ್ರಶಾಂತ್ ವೈದ್ಯ ಅವರ ಹೇಳಿಕೆ.
21ರ ಹರೆಯದ ಪ್ರತಿಭಾನ್ವಿತ
ಮೂಲತಃ ಒಡಿಶಾದವರಾದ ಅಂಶುಮಾನ್ ರಥ್ ಅವರಿಗೆ 21 ವರ್ಷ ಮಾತ್ರ. ಎಡಗೈ ಬ್ಯಾಟ್ಸ್ ಮನ್, ವಿಕೆಟ್ ಕೀಪರ್, ಎಡಗೈ ಸ್ಪಿನ್ ಬೌಲಿಂಗ್ ಮೂಲಕ ಯಶಸ್ಸು ಕಂಡಿದ್ದಾರೆ. 18 ಏಕದಿನ ಪಂದ್ಯ ಗಳಿಂದ 828 ರನ್ ಬಾರಿಸಿದ್ದು, ಇದರಲ್ಲಿ ಒಂದು ಶತಕ ಹಾಗೂ 7 ಅರ್ಧ ಶತಕ ಸೇರಿದೆ. ಅಜೇಯ 143 ರನ್ ಸರ್ವಾಧಿಕ ಗಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.