Indian ಮಾಜಿ ಕ್ರಿಕೆಟಿಗ ಲಾಲ್‌ಚಂದ್ ರಜಪೂತ್ ಯುಎಇ ತಂಡದ ಕೋಚ್
Team Udayavani, Feb 21, 2024, 11:04 PM IST
ಮುಂಬಯಿ: ಭಾರತದ ಮಾಜಿ ಕ್ರಿಕೆಟಿಗ ಲಾಲ್‌ಚಂದ್ ರಜಪೂತ್ ಯುಎಇ ಪುರುಷರ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಮುದಸ್ಸರ್ ನಜರ್ ಅವರ ಮಧ್ಯಾಂತರ ಕೋಚಿಂಗ್ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ ಯುಎಇ ರಜಪೂತ್ ಅವರನ್ನು ಆಯ್ಕೆ ಮಾಡಿತು.
ಲಾಲ್‌ಚಂದ್ ರಜಪೂತ್ ಭಾರತದ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರು. ಟೀಮ್ ಇಂಡಿಯಾದ 2007ರ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ವೇಳೆ ರಜಪೂತ್ ಅವರೇ ಕೋಚ್ ಆಗಿದ್ದರು. ಅನಂತರ ಅಫ್ಘಾನಿಸ್ಥಾನ ತಂಡದ ಕೋಚ್ ಆಗಿ ಕರ್ತವ್ಯ ನಿಭಾಯಿಸಿದರು. ಇವರ ಕಾರ್ಯಾವಧಿಯಲ್ಲೇ, 2017ರಲ್ಲಿ ಅಫ್ಘಾನಿಸ್ಥಾನಕ್ಕೆ ಟೆಸ್ಟ್ ಮಾನ್ಯತೆ ಲಭಿಸಿದ್ದನ್ನು ಮರೆಯುವಂತಿಲ್ಲ. ಬಳಿಕ 2018-2022ರ ಅವಧಿಯಲ್ಲಿ ಜಿಂಬಾಬ್ವೆ ತರಬೇತುದಾರರಾಗಿಯೂ ದುಡಿದಿದ್ದರು.
ಕೆನಡಾ ಮತ್ತು ಸ್ಕಾಟ್ಲೆಂಡ್ ತಂಡಗಳನ್ನು ಒಳಗೊಂಡ ಐಸಿಸಿ ಲೀಗ್-2 ತ್ರಿಕೋನ ಸರಣಿ ಮೂಲಕ ರಜಪೂತ್ ಅವರ ಯುಎಇ ಕೋಚಿಂಗ್ ಅವಧಿ ಮೊದಲ್ಗೊಳ್ಳಲಿದೆ. 2027ರ ವಿಶ್ವಕಪ್ ಅರ್ಹತೆಯ ಹಿನ್ನೆಲೆ ಇದೊಂದು ಮಹತ್ವದ ಸರಣಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
IPL Mega Auction: ಹರಾಜು ಆರಂಭ; ಭರ್ಜರಿ ಬಿಡ್ ಗಳಿಸಿದ ವೇಗಿ ಅರ್ಶದೀಪ್ ಸಿಂಗ್
Perth test: ಜೈಸ್ವಾಲ್, ವಿರಾಟ್ ಶತಕ; ಆಸೀಸ್ ಗೆ ಭಾರೀ ಗುರಿ ನೀಡಿದ ಭಾರತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.