ಭಾರತದ ಮಾಜಿ ಫುಟ್ಬಾಲಿಗ ಸುರ್ಜೀತ್ ಸೇನ್‌ಗುಪ್ತ ನಿಧನ
Team Udayavani, Feb 17, 2022, 10:43 PM IST
ಕೋಲ್ಕತಾ: ಭಾರತೀಯ ಫುಟ್‌ಬಾಲ್‌ನ ಮಾಜಿ ಮಿಡ್ ಫೀಲ್ಡರ್, ಈಸ್ಟ್ ಬೆಂಗಾಲ್ ತಂಡದ ಲೆಜೆಂಡ್ರಿ ಆಟಗಾರ ಸುರ್ಜೀತ್ ಸೇನ್‌ಗುಪ್ತ (71) ಗುರುವಾರ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.
ಕೋವಿಡ್ ಫಲಿತಾಂಶ ಪಾಸಿಟಿವ್ ಬಂದುದರಿಂದ ಜ. 23ರಂದೇ ಸುರ್ಜೀತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವಾರದಿಂದ ವೆಂಟಿಲೇಟರ್‌ನಲ್ಲೇ ಇದ್ದರು.
ಸುರ್ಜೀತ್ ಈಸ್ಟ್ ಬೆಂಗಾಲ್‌ನ ಸುವರ್ಣ ಯುಗದ ಹರಿಕಾರರಲ್ಲೊಬ್ಬ ರಾಗಿದ್ದರು. 70ರ ದಶಕದಲ್ಲಿ ಸತತ 6 ಸಲ ಈ ತಂಡ “ಕಲ್ಕತ್ತ ಫುಟ್‌ಬಾಲ್ ಲೀಗ್’ ಪ್ರಶಸ್ತಿ ಜಯಿಸಿತ್ತು. ಇದು ಈಸ್ಟ್ ಬೆಂಗಾಲ್‌ಗೆ ಒಂದೇ ತಿಂಗಳಲ್ಲಿ ಎದುರಾದ ಎರಡನೇ ಆಘಾತವಾಗಿದೆ. ಜನವರಿಯಲ್ಲಿ ಮತ್ತೋರ್ವ ಲೆಜೆಂಡ್ರಿ ಆಟಗಾರ ಸುಭಾಷ್ ಭೌಮಿಕ್ ನಿಧನ ಹೊಂದಿದ್ದರು. ಸುರ್ಜೀತ್ “ಮೋಹನ್ ಬಗಾನ್’ ಪರ ಎರಡು ಋತುಗಳಲ್ಲಿ ಹಾಗೂ “ಮೊಹಮ್ಮದನ್ ನ್ಪೋರ್ಟಿಂಗ್’ ಪರ ಒಂದು ವರ್ಷ ಆಡಿದ್ದರು. 1970ರ ಏಶ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಭಾರತ ತಂಡದ ಸದಸ್ಯರೆಂಬುದು ಸುರ್ಜೀತ್ ಸೇನ್‌ಗುಪ್ತ ಪಾಲಿನ ಹೆಗ್ಗಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.