ಪಿಸಿಬಿಯ ಮಾಜಿ ಚೇರ್ಮನ್ ಇಜಾಸ್ ಬಟ್ ನಿಧನ
Team Udayavani, Aug 4, 2023, 12:31 AM IST
ಕರಾಚಿ: ಪಾಕಿಸ್ಥಾನ ತಂಡದ ಮಾಜಿ ವಿಕೆಟ್ ಕೀಪರ್ ಮತ್ತು ಪಾಕಿಸ್ಥಾನ ಕ್ರಿಕೆಟ್ ಮಂಡಳಿಯ ಮಾಜಿ ಚೇರ್ಮನ್ ಇಜಾಸ್ ಬಟ್ ಅವರು ಲಾಹೋರ್‌ನಲ್ಲಿ ನಿಧನ ಹೊಂದಿದರು.
2008ರಲ್ಲಿ ಇಜಾಸ್ ಬಟ್ ಅವರನ್ನು ಆಗಿನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಪಿಸಿಬಿ ಅಧ್ಯಕ್ಷರನ್ನಾಗ ನೇಮಿಸಿದ್ದರು. ಪಾಕಿಸ್ಥಾನ ಕ್ರಿಕೆಟ್ ಇತಿಹಾಸದ ಅತ್ಯಂತ ಅಸ್ತವ್ಯಸ್ತ ಮತೆತು ಪ್ರಕ್ಷುಬ್ಧ ಅವಧಿಯ ವೇಳೆ ಅವರು ಅಧ್ಯಕ್ಷರಾಗಿದ್ದರು. ಅವರು ಅಧ್ಯಕ್ಷರಾಗಿ ನೇಮಕವಾಗಿ ಐದು ತಿಂಗಳು ಕಳೆಯುವಷ್ಟರಲ್ಲಿ ಪಾಕಿಸ್ಥಾನ ಪ್ರವಾಸಗೈದ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಭಯೋತ್ಪಾದಕರ ದಾಳಿ ನಡೆದಿತ್ತು ಮತ್ತು ಈ ದಾಳಿಯಲ್ಲಿ ಎಂಟು ನಾಗರಿಕರು ಮೃತಪಟ್ಟಿದ್ದರು. ಇದರಿಂದಾಗಿ ಮುಂದಿನ 10 ವರ್ಷ ದವರೆಗೆ ಪಾಕಿಸ್ಥಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂತಿತ್ತು.
ಪಾಕಿಸ್ಥಾನ ಪರ ಅವರು ಎಂಟು ಟೆಸ್ಟ್ ಆಡಿದ್ದರು. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿದ್ದ ಅವರು 1959ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕರಾಚಿಯಲ್ಲಿ ನಡೆದ ಟೆಸ್ಟ್‌ನಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದರು. 1962ರಲ್ಲಿ ಓವಲ್‌ನಲ್ಲಿ ಅವರು ತನ್ನ ಕೊನೆಯ ಪಂದ್ಯ ಆಡಿದ್ದರು. 1982ರಲ್ಲಿ ಪಾಕಿಸ್ಥಾನದ ಆಸ್ಟ್ರೇಲಿಯ ಪ್ರವಾಸದ ವೇಳೆ ಅವರು ತಂಡದ ವ್ಯವಸ್ಥಾಪಕರಾಗಿದ್ದರು. 1984ರಿಂದ 88ರ ವರೆಗೆ ಅವರು ಪಿಸಿಬಿಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.