“ಗೇ” ಸಾಲಿಗೆ ಸೇರಿದ ಮತ್ತೊಬ್ಬ ಖ್ಯಾತ ಫುಟ್ಬಾಲಿಗ: ನನ್ನನ್ನು ಗೌರವಿಸಿ ನಾನು…
Team Udayavani, Oct 9, 2022, 8:39 PM IST
ನವದೆಹಲಿ: ಖ್ಯಾತ ಫುಟ್ಬಾಲ್ ತಂಡವಾದ ರಿಯಲ್ ಮ್ಯಾಡ್ರಿಡ್ ನ ಮಾಜಿ ನಾಯಕ ಇಕರ್ ಕ್ಯಾಸಿಲಾಸ್ ತಾವು ಮಾಡಿದ ನಿರ್ಧಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದಾಗಿದ್ದಾರೆ.
ಖ್ಯಾತ ಮಾಜಿ ಗೋಲ್ ಕೀಪರ್ ಗಳಲ್ಲಿ ಒಂದಾಗಿರುವ 41 ವರ್ಷದ ಇಕರ್ ಕ್ಯಾಸಿಲಾಸ್ ತಾನು “ಗೇ” ಆಗಲಿದ್ದೇನೆ ಎನ್ನುವ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿಕೊಂಡಿದ್ದಾರೆ.
ಟ್ವಟಿರ್ ನಲ್ಲಿ ಇಕರ್ ಕ್ಯಾಸಿಲಾಸ್ “ನೀವು ನನ್ನನ್ನು ಗೌರವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ, ನಾನು ಸಲಿಂಗಕಾಮಿ” ಎಂದು ಬರೆದುಕೊಂಡಿದ್ದಾರೆ. ಈ ನಿರ್ಣಯಕ್ಕೆ ಹಲವು ಮಂದಿ ಕಮೆಂಟ್ ಮಾಡಿದ್ದು, ಬಾರ್ಸಿಲೋನಾ ತಂಡದ ಮಾಜಿ ನಾಯಕ ಕಾರ್ಲೆಸ್ ಪುಯೋಲ್, ಇದು ನಮ್ಮ ಕಥೆಯನ್ನು ಹೇಳುವ ಸಮಯ ಎಂದು ಪೋಸ್ಟ್ ಮಾಡಿ, ಇಕರ್ ಕ್ಯಾಸಿಲಾಸ್ ಅವರ ಬೆನ್ನಿಗೆ ನಿಂತಿದ್ದಾರೆ.
ಸ್ಪೇನ್ ಮತ್ತು ರಿಯಲ್ ಮ್ಯಾಡ್ರಿಡ್ ಎರಡೂ ತಂಡಗಳೊಂದಿಗೆ ಆಡಿದ್ದು, ವಿಶ್ವಕಪ್, ಎರಡು ಯುರೋಪಿಯನ್ ಚಾಂಪಿಯನ್‌ಶಿಪ್‌ಗಳು, ಐದು ಲಾ ಲೀಗಾ ಚಾಂಪಿಯನ್‌ಶಿಪ್‌ಗಳು ಮತ್ತು ಮೂರು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 9 ವರ್ಷದವರಿದ್ದಾಗ ಫುಟ್ಬಾಲ್ ಆಡಲು ತಂಡಕ್ಕೆ ಸೇರಿಕೊಂಡಿದ್ದರು.
ಕ್ಯಾಸಿಲಾಸ್ ಕ್ರೀಡಾ ಪತ್ರಕರ್ತೆ ಸಾರಾ ಕಾರ್ಬೊನೆರೊ ಅವರನ್ನು ವಿವಾಹವಾಗಿದ್ದರು. ಕಳೆದ ವರ್ಷದ ಮಾರ್ಚ್‌ನಲ್ಲಿ ಇಬ್ಬರು ವಿಚ್ಚೇದನ ಪಡೆದಿದ್ದರು. ಇಬ್ಬರು ಪರಸ್ಪರ ದೂರವಿದ್ದರೂ, ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಹದಿಹರೆಯದ ವಯಸ್ಸಿನ ಫುಟ್ಬಾಲ್ ಆಟಗಾರ ಜೇಕ್ ಡೇನಿಯಲ್ಸ್, ಅಮೆರಿಕಾದ ಕೊಲಿನ್ ಮಾರ್ಟಿನ್, ಆಸ್ಟ್ರೇಲಿಯದ ಫುಟ್ಬಾಲ್ ಆಟಗಾರ ಜೋಶ್ ಕವಾಲ್ಲೊ ಸಲಿಂಗ ಕಾಮಿ( ಗೇ) ಆಗಿರುವುದನ್ನು ಹೇಳಿಕೊಂಡಿದ್ದರು.
Cuenta hackeada. Por suerte todo en orden. Disculpas a todos mis followers. Y por supuesto, más disculpas a la comunidad LGTB. ?
— Iker Casillas (@IkerCasillas) October 9, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.