ರಿಯಲ್ ಮ್ಯಾಡ್ರಿಡ್ ಮಾಜಿ ಅಧ್ಯಕ್ಷ ಲೊರೆಂಝೊ ಕೋವಿಡ್ 19 ವೈರಸ್‌ಗೆ ಬಲಿ
Team Udayavani, Mar 23, 2020, 12:00 AM IST
ಮ್ಯಾಡ್ರಿಡ್: ಕೋವಿಡ್ 19 ಮಾರಿ ಕ್ರೀಡಾಲೋಕಕ್ಕೆ ಬಂದಪ್ಪಳಿಸಿದೆ. ಸ್ಪೇನಿನ ದೈತ್ಯ ಫುಟ್‌ಬಾಲ್ ತಂಡವಾದ ರಿಯಲ್ ಮ್ಯಾಡ್ರಿಡ್‌ನ ಮಾಜಿ ಅಧ್ಯಕ್ಷ ಲೊರೆಂಝೊ ಸ್ಯಾಂಜ್ (76) ಕೋವಿಡ್ 19 ಕ್ಕೆ ಬಲಿಯಾಗಿದ್ದಾರೆ. ಅವರ ಪುತ್ರ, ಬಾಸ್ಕೆಟ್‌ಬಾಲ್ ಆಟಗಾರನೂ ಆಗಿರುವ ಸ್ಯಾಂಜ್ ಜೂನಿಯರ್ ಈ ವಿಷಯವನ್ನು ತಿಳಿಸಿದ್ದಾರೆ.
1995-2000ದ ಅವಧಿಯಲ್ಲಿ ಲೊರೆಂಝೊ ಸ್ಯಾಂಜ್ ರಿಯಲ್ ಮ್ಯಾಡ್ರಿಡ್ ತಂಡದ ಅಧ್ಯಕ್ಷ ಹುದ್ದೆಯಲ್ಲಿದ್ದರು. ಈ ಅವಧಿಯಲ್ಲಿ ಅವರ ತಂಡ 2 ಚಾಂಪಿಯನ್ಸ್ ಲೀಗ್‌ಗಳಲ್ಲಿ ಪ್ರಶಸ್ತಿ ಎತ್ತಿತ್ತು.ತನ್ನ ತಂದೆಯನ್ನು ಮ್ಯಾಡ್ರಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಕೋವಿಡ್ 19 ತಗಲಿರುವುದು ದೃಢಪಟ್ಟಿದೆ ಎಂದು ಜೂ. ಸ್ಯಾಂಜ್ 3 ದಿನಗಳ ಹಿಂದೆ ತಿಳಿಸಿದ್ದರು.
1995ರಲ್ಲಿ ಅಧ್ಯಕ್ಷಗಿರಿ
ಲೊರೆಂಝೊ ಸ್ಯಾಂಜ್ 1980ರ ನಡು ಅವಧಿಯಲ್ಲಿ ರಿಯಲ್ ಮ್ಯಾಡ್ರಿಡ್ ತಂಡವನ್ನು ಪ್ರವೇಶಿಸಿದ್ದರು. ಆಗ ರಮೋನ್ ಮೆಂಡೋಂಝ ಇದರ ಅಧ್ಯಕ್ಷರಾಗಿದ್ದರು. 1995ರಲ್ಲಿ ಇವರ ಉತ್ತರಾಧಿಕಾರಿಯಾಗಿ ನೇಮಕಗೊಂಡರು.
ಜುಪ್ ಹೆಂಕೆಸ್ ಕೋಚ್ ಆಗಿದ್ದ ಈ ತಂಡದಲ್ಲಿ ಡೇವರ್ ಸುಕರ್, ರಾಬರ್ಟೊ ಕಾರ್ಲೋಸ್, ಕ್ಲಾರೆನ್ಸ್ ಸೀಡಾಫ್ì, ಫೆರ್ನಾಂಡೊ ಹೀರೊ ಮತ್ತು ರಾಲ್ ಮೊದಲಾದ ಸ್ಟಾರ್ ಆಟಗಾರರಿದ್ದರು. 1998ರಲ್ಲಿ ಜುವೆಂಟಸ್ ತಂಡವನ್ನು ಸೋಲಿಸುವ ಮೂಲಕ ರಿಯಲ್ ಮ್ಯಾಡ್ರಿಡ್ “ಚಾಂಪಿಯನ್ಸ್ ಲೀಗ್’ ಚಾಂಪಿಯನ್ ಆಗಿತ್ತು. ಇದು ರಿಯಲ್ ಮಾಡ್ರಿಡ್ ತಂಡಕ್ಕೆ ಒಲಿದ 7ನೇ, ಆದರೆ 32 ವರ್ಷಗಳ ಬಳಿಕ ಒಲಿದ ಮೊದಲ ಯುರೋಪಿಯನ್ ಕಪ್ ಪ್ರಶಸ್ತಿ ಆಗಿತ್ತು. 2 ವರ್ಷಗಳ ಬಳಿಕ ಪ್ಯಾರಿಸ್‌ನಲ್ಲಿ ವೆಲೆನ್ಸಿಯಾ ತಂಡವನ್ನು ಪರಾಭವಗೊಳಿಸಿ 8ನೇ ಪ್ರಶಸ್ತಿಯನ್ನೆತ್ತಿತು.
ಮ್ಯಾಡ್ರಿಡ್ ನಾಯಕನ ಸಂತಾಪ
“ಇದು ರಿಯಲ್ ಮ್ಯಾಡ್ರಿಡ್ ತಂಡದ ಪಾಲಿಗೆ ಅತ್ಯಂತ ದುಃಖದ ದಿನ. ಲೊರೆಂಝೊ ಸ್ಯಾಂಜ್ ನಿನ್ನೆ ಹಾಗೂ ಇಂದಿನ ನಡು ವಿನ ಕೊಂಡಿಯಾಗಿದ್ದರು. ಅವರ ಕುಟುಂಬಕ್ಕೆ ದುಃಖ ವನ್ನು ಸಹಿಸುವ ಶಕ್ತಿ ಲಭಿಸಲಿ, ಸ್ಯಾಂಜೊ ಆತ್ಮಕ್ಕೆ ಶಾಂತಿ ಲಭಿ ಸಲಿ’ ಎಂದು ರಿಯಲ್ ಮ್ಯಾಡ್ರಿಡ್ ತಂಡದ ನಾಯಕ, ಸ್ಪೇನ್ ತಂಡದ ಆಟಗಾರ ಸರ್ಗಿಯೊ ರಮೋಸ್ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.