ಐಸಿಸಿ ಏಕದಿನ ರ್ಯಾಂಕಿಂಗ್: ಇನ್ನೂ ನಾಲ್ಕು ತಂಡಗಳ ಸೇರ್ಪಡೆ
Team Udayavani, Jun 2, 2018, 6:00 AM IST
ದುಬಾೖ: ಐಸಿಸಿ ಏಕದಿನ ರ್ಯಾಂಕಿಂಗ್ ವ್ಯಾಪ್ತಿಗೆ ಒಳಪಡುವ ತಂಡಗಳ ಸಂಖ್ಯೆಯನ್ನು 12ರಿಂದ 16ಕ್ಕೆ ಏರಿಸಲಾಗಿದೆ. ಇದು ಜೂನ್ ಒಂದರಿಂದಲೇ ಅನ್ವಯವಾಗಲಿದೆ ಎಂದು ಐಸಿಸಿ ತಿಳಿಸಿದೆ.
ಹೊಸದಾಗಿ ರ್ಯಾಂಕಿಂಗ್ ವ್ಯಾಪ್ತಿಗೆ ಒಳಪಡುವ ತಂಡಗಳೆಂದರೆ ನೇಪಾಲ, ಹಾಲೆಂಡ್, ಸ್ಕಾಟ್ಲೆಂಡ್ ಮತ್ತು ಯುಎಇ. ಹಾಲೆಂಡ್ ಕಳೆದ ವರ್ಷ ಐಸಿಸಿ ವರ್ಲ್ಡ್ ಕ್ರಿಕೆಟ್ ಲೀಗ್ ಚಾಂಪಿಯನ್ಶಿಪ್ ಗೆಲ್ಲುವ ಮೂಲಕ ಏಕದಿನ ಮಾನ್ಯತೆ ಪಡೆದಿತ್ತು. ಸ್ಕಾಟ್ಲೆಂಡ್, ನೇಪಾಲ, ಯುಎಇ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಮೊದಲ 3 ಸ್ಥಾನ ಅಲಂಕರಿಸಿ ಏಕದಿನ ಮಾನ್ಯತೆ ಸಂಪಾದಿಸಿದ್ದವು.
ಈ ತಂಡಗಳು ಮೇ 1, 2015 ಹಾಗೂ ಎ. 30, 2017ರ ಅವಧಿ ಯಲ್ಲಿ ಆಡಿದ ಪಂದ್ಯಗಳಿಗೆ ಶೇ. 50ರ ಲೆಕ್ಕಾಚಾರದಲ್ಲಿ, ಮೇ 1, 2017ರ ಬಳಿಕ ಆಡಿದ ಪಂದ್ಯಗಳಿಗೆ ಶೇ. 100ರ ಲೆಕ್ಕಾಚಾರದಲ್ಲಿ ಅಂಕ ನೀಡಲಾಗಿದೆ. ಅದರಂತೆ ಸ್ಕಾಟ್ಲೆಂಡ್ 28 ಅಂಕಗ ಳೊಂದಿಗೆ 13ನೇ ಸ್ಥಾನ, ಯುಎಇ 14ನೇ ಸ್ಥಾನದಲ್ಲಿದೆ (18 ಅಂಕ).
ನೇಪಾಲ ಮತ್ತು ಹಾಲೆಂಡ್ ಕನಿಷ್ಠ 4 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಬಳಿಕ ರ್ಯಾಂಕಿಂಗ್ ಯಾದಿಯಲ್ಲಿ ಕಾಣಿಸಿಕೊಳ್ಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್ಗೆ ವರ್ಷಾಂತ್ಯದ ನಂ.1 ರ್ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.