Doping: ಇಟಲಿ ಸಂಸ್ಥೆಯಿಂದ ಮಿಡ್‌ಫೀಲ್ಡರ್ ಪೋಗ್ಬಾಗೆ 4 ವರ್ಷ ನಿಷೇಧ!
ನಾನು ಯಾವುದೇ ತಪ್ಪನ್ನು ಮಾಡಿಲ್ಲ...ಸಿಡಿದೆದ್ದಿದ್ದ ಪೌಲ್
Team Udayavani, Mar 1, 2024, 6:45 AM IST
ಪ್ಯಾರಿಸ್: ಫ್ರಾನ್ಸ್ ಫುಟ್‌ಬಾಲ್ ತಂಡದ ಪ್ರಮುಖ ಆಟಗಾರ ಪೌಲ್ ಪೋಗ್ಬಾ ಅವರಿಗೆ ಆಘಾತಕಾರಿ ಸುದ್ದಿಯೊಂದು ಬಂದಪ್ಪಳಿಸಿದೆ. ಉದ್ದೀಪನ ಸೇವನೆ ಪರೀಕ್ಷೆಯಲ್ಲಿ ವಿಫಲವಾಗಿರುವ ಅವರನ್ನು ನಾಲ್ಕು ವರ್ಷಗಳ ಕಾಲ ಫುಟ್‌ಬಾಲ್‌ನಿಂದ ನಿಷೇಧಿಸಲಾಗಿದೆ. ಮಿಡ್‌ಫೀಲ್ಡರ್ ಆಗಿ ಹೆಸರು ಮಾಡಿರುವ ಪೋಗ್ಬಾ, ಇಟಲಿಯ ಜುವೆಂಟಸ್ ಕ್ಲಬ್ ಪರ ಆಡುತ್ತಿದ್ದಾಗ, ಉದ್ದೀಪನ ಸೇವನೆ ಪರೀಕ್ಷೆಯಲ್ಲಿ ವಿಫಲವಾಗಿದ್ದರು.
ಕಳೆದ ವರ್ಷ ಆ. 20ರಂದು ನಡೆದ ಉಡಿನೆಸ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಜುವೆಂಟಸ್ 3-0 ಗೋಲ್‌ಗಳಿಂದ ಗೆದ್ದಿತ್ತು. ಅನಂತರ ನಡೆದ ಪರೀಕ್ಷೆಯಲ್ಲಿ ಪೋಗ್ಬಾ ಟೆಸ್ಟೊಸ್ಟೆರೋನ್ ಎಂಬ ಉದ್ದೀಪನ ದ್ರವ್ಯ ಸೇವಿಸಿದ್ದು ಖಾತ್ರಿಯಾಗಿತ್ತು. ಅಕ್ಟೋಬರ್‌ನಲ್ಲಿ ಅವರ “ಬಿ’ ಸ್ಯಾಂಪಲ್‌ನಲ್ಲೂ ಉದ್ದೀಪನ ಸೇವಿಸಿದ್ದು ಖಚಿತವಾಗಿತ್ತು. ಇದೀಗ ಅಂತಿಮ ಫಲಿತಾಂಶ ಹೊರಬಿದ್ದಿದೆ. ಅದರ ಪ್ರಕಾರ ಅವರು ನಿಷೇಧಕ್ಕೊಳಗಾಗಿದ್ದಾರೆ. ಇಟಲಿಯ ಉದ್ದೀಪನ ನಿಗ್ರಹ ಸಂಸ್ಥೆ ಈ ನಿರ್ಧಾರ ಮಾಡಿದೆ.
ಇದರ ವಿರುದ್ಧ ಪೋಗ್ಬಾ ಸಿಡಿದೆದ್ದಿದ್ದಾರೆ. “ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಇದರ ವಿರುದ್ಧ ಕ್ರೀಡಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇನೆ. ಈ ಆದೇಶದಿಂದ ನನಗೆ ಬೇಸರವಾಗಿದೆ, ಆಘಾತವಾಗಿದೆ, ಹೃದಯ ಒಡೆದುಹೋಗಿದೆ. ಇದುವರೆಗೆ ವೃತ್ತಿಜೀವನದಲ್ಲಿ ಏನೇನು ಗಳಿಸಿದ್ದೆನೋ ಅವನ್ನೆಲ್ಲ ಕಿತ್ತುಕೊಂಡಂತಾಗಿದೆ. ಕಾನೂನು ಬಂಧನದಿಂದ ಹೊರಬಂದ ಮೇಲೆ ಎಲ್ಲವನ್ನೂ ಬಹಿರಂಗ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು
Success: ಯಶಸ್ವಿ ಜೀವನಕ್ಕೆ ಸೂತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.