ಆರ್ಭಟಿಸಿದ ಫ್ರಾನ್ಸ್‌ಗೆ ಸ್ಫೋಟಕ ಗೆಲುವು; ಆಸೀಸ್‌ಗೆ 1-4 ಗೋಲುಗಳಿಂದ ಹೀನಾಯ ಸೋಲು
ಥಿಯೆರಿ ಹೆನ್ರಿ ಅವರ ದಾಖಲೆ ಸಮಗಟ್ಟಿದ ಗಿರೌಡ್
Team Udayavani, Nov 23, 2022, 11:00 PM IST
ದೋಹಾ: ಒಲಿವರ್ ಗಿರೌಡ್ ಅವರ ಅವಳಿ ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವು ಮಂಗಳವಾರ ನಡೆದ “ಡಿ’ ಬಣದ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು 4-1 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿ ಶುಭಾರಂಭ ಮಾಡಿದೆ.
ಅವಳಿ ಗೋಲುಗಳ ಮೂಲಕ ಗಿರೌಡ್ ಫ್ರಾನ್ಸ್ ಪರ ಸಾರ್ವಕಾಲಿಕ ಗರಿಷ್ಠ ಗೋಲು ದಾಖಲಿಸಿದ್ದ ಥಿಯರಿ ಹೆನ್ರಿ ಅವರ ದಾಖಲೆಯನ್ನು ಸಮಗಟ್ಟಿದ್ದಾರೆ.
ಪಂದ್ಯದ ಮೊದಲ ಮತ್ತು ಎರಡನೇ ಅವಧಿಯ ಆಟದ ವೇಳೆ ಗೋಲು ದಾಖಲಿಸಿದ ಗಿರೌಡ್ ತನ್ನ ಗೋಲು ಗಳಿಕೆಯನ್ನು 51ಕ್ಕೇರಿಸಿದರು. ಥಿಯರಿ ಹೆನ್ರಿ ಕೂಡ 51 ಗೋಲು ಹೊಡೆದ ಸಾಧನೆ ಮಾಡಿದ್ದಾರೆ. 2006ರಲ್ಲಿ ಬ್ರೆಝಿಲ್ ಬಳಿಕ ಹಾಲಿ ಚಾಂಪಿಯನ್ ತಂಡವೊಂದು ತನ್ನ ಆರಂಭಿಕ ಪಂದ್ಯವನ್ನು ಗೆದ್ದಿರುವುದು ಇದೇ ಮೊದಲ ಸಲವಾಗಿದೆ.
ಮೊಣಕಾಲಿನ ಗಾಯದಿಂದಾಗಿ ತಂಡದ ಪ್ರಮುಖ ಆಟಗಾರ ಲುಕಾಸ್ ಹೆರ್ನಂಡೆಜ್ ಅವರ ಸೇವೆ ಲಭ್ಯವಿಲ್ಲದಿದ್ದರೂ ಫ್ರಾನ್ಸ್ ಅಮೋಘ ಆಟದ ಪ್ರದರ್ಶನ ನೀಡಿ ಮೂರಂಕ ಪಡೆಯಿತು. ಈ ಮೂಲಕ ಬಣದ ಅಗ್ರಸ್ಥಾನ ಪಡೆಯಿತು. ಟ್ಯುನೀಶಿಯ ಮತ್ತು ಡೆನ್ಮಾರ್ಕ್ ಗೋಲುರಹಿತ ಡ್ರಾ ಸಾಧಿಸಿದ್ದರಿಂದ ಫ್ರಾನ್ಸ್ ಅಗ್ರಸ್ಥಾನದಲ್ಲಿ ನಿಲ್ಲುವಂತಾಯಿತು. ಫ್ರಾನ್ಸ್ ಮುಂದಿನ ಪಂದ್ಯದಲ್ಲಿ ಶನಿವಾರ ಡೆನ್ಮಾರ್ಕ್ ತಂಡವನ್ನು ಎದುರಿಸಲಿದೆ.
ಕಳೆದ ಶನಿವಾರ ಗಾಯಗೊಂಡ ಪ್ರಮುಖ ಸ್ಟ್ರೈಕರ್ ಕರೀಮ್ ಬೆಂಜೆಮ ಅವರ ಅನುಪಸ್ಥಿತಿಯಲ್ಲಿ ದಿದಿಯೆರ್ ಡೆಸಾcಂಪ್ಸ್ ನೇತೃತ್ವದ ಫ್ರಾನ್ಸ್ ತಂಡ ಈ ಪಂದ್ಯದಲ್ಲಿ ಆಡಿತು. ಆರಂಭದಲ್ಲಿ ಚೆಂಡಿನ ಹಿಡಿತಕ್ಕಾಗಿ ಒದ್ದಾಟ ನಡೆಸಿತ್ತು. ಈ ನಡುವೆ ಆಸ್ಟ್ರೇಲಿಯದ ಕ್ರೆಗ್ ಗೂಡ್‌ವಿನ್ ಮೊದಲ ಗೋಲು ಹೊಡೆದು ತಂಡವನ್ನು ಉತ್ಸಾಹದಲ್ಲಿ ಮುಳುಗಿಸಿದರು. ಇದರಿಂದ ಹಾಲಿ ತಂಡಕ್ಕೆ ಆಘಾತವಾಗಿತ್ತು. ಹೆರ್ನಾಂಡೆಜ್ ಅವರ ಸಹೋದರ ಥಿಯೋ ಬದಲಿ ಆಟಗಾರರಾಗಿ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ.
ಪಂದ್ಯದ 27ನೇ ನಿಮಿಷದಲ್ಲಿ ಅಡ್ರಿಯೆನ್ ರಾಬಿಯೋಟ್ ಗೋಲು ಹೊಡೆದು ಸಮಬಲ ಸಾಧಿಸಿದರು. ಆಬಳಿಕ ಗಿರೌಡ್ ಅವರ ಅದ್ಭುತ ಸಾಧನೆಯಿಂದ ಫ್ರಾನ್ಸ್ ಮುನ್ನಡೆ ಸಾಧಿಸುವಂತಾಯಿತು. 68ನೇ ನಿಮಿಷದಲ್ಲಿ ಎಂಬಪೆ ಇನ್ನೊಂದು ಗೋಲು ಹೊಡೆದು ಆಸ್ಟ್ರೇಲಿಯ ಅಭಿಮಾನಿಗಳಿಗೆ ಆಘಾತವಿಕ್ಕಿದರು. ಮೂರು ನಿಮಿಷಗಳ ಬಳಿಕ ಗಿರೌಡ್ ಇನ್ನೊಂದು ಗೋಲು ಹೊಡೆದು ಮುನ್ನಡೆಯ ಅಂತರವನ್ನು 4-1ಕ್ಕೇರಿಸಿದರು. ಫ್ರಾನ್ಸ್‌ಗೆ ಇನ್ನೂ ಹೆಚ್ಚಿನ ಗೋಲು ಹೊಡೆಯುವ ಅವಕಾಶಗಳಿದ್ದವು. ಹೆರ್ನಾಂಡೆಜ್ ಮತ್ತು ಇಬ್ರಾಹಿಮ್ ಕೊನಟೆ ಗೋಲು ಹೊಡೆಯಲು ಬಹಳಷ್ಟು ಶ್ರಮ ವಹಿಸಿದ್ದರು. ಆದರೂ ಫ್ರಾನ್ಸ್‌ನ ಈ ಫಲಿತಾಂಶ ತೃಪ್ತಿ ನೀಡುವಂತಿದೆ.
51ನೋ ಗೋಲು ಬಾರಿಸಿದ ಗಿರೌಡ್: ಬೆಂಜೆಮ ಅವರ ಅನುಪಸ್ಥಿತಿಯಿಂದಾಗಿ ಆಟವಾಡುವ ಬಳಗದಲ್ಲಿ ಸ್ಥಾನ ಪಡೆದ ಗಿರೌಡ್ ತನ್ನ 51ನೇ ಗೋಲು ಹೊಡೆದು ಥಿಯರಿ ಹೆನ್ರಿ ಅವರ ಸಾಧನೆಯನ್ನು ಸಮಗಟ್ಟಿದರು. ಗಿರೌಡ್ 115 ಪಂದ್ಯಗಳಿಂದ ಈ ಸಾಧನೆ ಮಾಡಿದ್ದರೆ ಹೆನ್ರಿ 1997-2010ರ ಅವಧಿಯಲ್ಲಿ 123 ಪಂದ್ಯಗಳಲ್ಲಿ ಆಡಿ 51 ಗೋಲು ಹೊಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?