ಇಂದು ರಾತ್ರಿ 2ನೇ ಸೆಮಿಫೈನಲ್: ಮೊರೊಕ್ಕೊ ವರ್ಸಸ್ ಫ್ರಾನ್ಸ್ ಯಾರಿಗೆ ಚಾನ್ಸ್?
Team Udayavani, Dec 14, 2022, 7:40 AM IST
ದೋಹಾ: ಅನೇಕ ದೊಡ್ಡ ಹಾಗೂ ನೆಚ್ಚಿನ ತಂಡಗಳ ನಿರ್ಗಮನಕ್ಕೆ, ಸ್ಟಾರ್ ಆಟಗಾರರ ಕಣ್ಣೀರಿಗೆ ಕಾರಣವಾದ ಕತಾರ್ ವಿಶ್ವಕಪ್ ಕೊನೆಯ ಹಂತದಲ್ಲಿದೆ.
ಬುಧವಾರ ರಾತ್ರಿ ಹಾಲಿ ಚಾಂಪಿಯನ್ ಫ್ರಾನ್ಸ್ ಮತ್ತು ಇದೇ ಮೊದಲ ಸಲ ಉಪಾಂತ್ಯ ಕಾಣುತ್ತಿರುವ ಆಫ್ರಿಕನ್-ಅರಬ್ ದೇಶವೆಂಬ ಹೆಗ್ಗಳಿಕೆಯ ಮೊರೊಕ್ಕೊ ತಂಡಗಳು ದ್ವಿತೀಯ ಸೆಮಿಫೈನಲ್‌ನಲ್ಲಿ ಸೆಣಸಲಿವೆ. ಫೈನಲ್ ಚಾನ್ಸ್ ಯಾರಿಗಿದೆ ಎಂಬುದನ್ನು ಅರಿಯಲು ಇಡೀ ಫುಟ್‌ಬಾಲ್ ಲೋಕವೇ ಕಣ್ತೆರೆದು ಕೂತಿದೆ.
ಫ್ರಾನ್ಸ್-ಮೊರೊಕ್ಕೊ ಈವರೆಗೆ 5 ಸಲ ಎದುರಾದರೂ ವಿಶ್ವಕಪ್‌ನಲ್ಲಿ ಮುಖಾಮುಖಿ ಆಗುತ್ತಿರುವುದು ಇದೇ ಮೊದಲು ಎಂಬ ಕಾರಣಕ್ಕಾಗಿಯೂ ಸೆಮಿಫೈನಲ್ ಕುತೂಹಲ ಮೇರೆ ಮೀರಿದೆ. ಈ ತಂಡಗಳೆರಡೂ 15 ವರ್ಷಗಳ ಬಳಿಕ ಮುಖಾಮುಖಿ ಆಗುತ್ತಿರುವುದು ಕೂಡ ಕೌತುಕಕ್ಕೆ ಮತ್ತೂಂದು ಕಾರಣ.
ಸೋಲನ್ನೇ ಕಾಣದ ಮೊರೊಕ್ಕೊ
ಮೊರೊಕ್ಕೊ ಹೆಗ್ಗಳಿಕೆಯೆಂದರೆ, ಅದು ಈ ಕೂಟದಲ್ಲಿ ಸೋಲನ್ನೇ ಕಾಣದ ಎರಡು ತಂಡಗಳಲ್ಲೊಂದು. ಮೊದಲನೆಯದು ಕ್ರೊವೇಶಿಯ (ಈ ಸಾಲನ್ನು ಓದುವಾಗ ಕ್ರೊವೇಶಿಯದ ಭವಿಷ್ಯ ನಿರ್ಧಾರವಾಗಿರುತ್ತದೆ). ಗ್ರೂಪ್ ಹಂತದಲ್ಲಿ ಮೊರೊಕ್ಕೊಗೆ ಶರಣಾದ ತಂಡಗಳೆಂದರೆ ಬೆಲ್ಜಿಯಂ ಮತ್ತು ಕೆನಡಾ.
ಹಾಗೆಯೇ ಕ್ರೊವೇಶಿಯ ವಿರುದ್ಧ ಡ್ರಾ ಸಾಧಿಸಿತ್ತು. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ 2010ರ ಚಾಂಪಿಯನ್ ಸ್ಪೇನ್‌ಗೆ ನೀರು ಕುಡಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಪೋರ್ಚುಗಲ್‌ಗೆ ಆಘಾತವಿಕ್ಕಿ ದೊಡ್ಡ ಬೇಟೆಯಾಡಿತು.
ಮೊರೊಕ್ಕೊ ಪಡೆ ಇದೇ ರಭಸದಲ್ಲಿ ಸಾಗಿದರೆ ಫ್ರಾನ್ಸ್ ಮುಂದಿರುವ ಸವಾಲು ಸುಲಭದ್ದಲ್ಲ ಎಂದೇ ಭಾವಿಸಬೇಕಾಗುತ್ತದೆ. ಒಂದು ಕಾಲದಲ್ಲಿ ಫ್ರಾನ್ಸ್‌ನ ವಸಾಹತು ಆಗಿದ್ದ ಮೊರೊಕ್ಕೊಗೆ ಫ್ರೆಂಚ್ ಸೇನೆಯನ್ನು ಸದೆಬಡಿಯಲು ಇದಕ್ಕಿಂತ ಉತ್ತಮ ಅವಕಾಶ ಇಲ್ಲವೆಂದೇ ಹೇಳಬೇಕು.
ಈ ಕೂಟದಲ್ಲಿ ಒಂದೇ ಒಂದು ಗೋಲು ಬಿಟ್ಟುಕೊಟ್ಟಿರುವುದು ಮೊರೊಕ್ಕೊ ಪಾಲಿನ ಹೆಗ್ಗಳಿಕೆ. ಇದನ್ನು ಬಾರಿಸಿದ್ದು ಕೆನಡಾ. ಉಳಿದ ಯಾವ ಬಲಿಷ್ಠ ತಂಡಗಳಿಗೂ ಮೊರೊಕ್ಕೊ ರಕ್ಷಣಾ ಕೋಟೆಯನ್ನು ಭೇದಿಸಲಾಗಲಿಲ್ಲ ಎಂಬುದನ್ನು ಗಮನಿಸಬೇಕು.
ಯೂಸೆಪ್ ಎನ್-ನೆಸಿರಿ, ಹಕೀಂ ಝಿಯೆಕ್, ಸೋಫಿಯಾನ್ ಬೌಫೆಲ್ ಮೊರೊಕ್ಕೊದ ಸ್ಟಾರ್ ಆಟಗಾರರು. ಜತೆಗೆ ಗಾಯಾಳು ಆಟಗಾರರ ಯಾದಿಯೂ ದೊಡ್ಡದಿದೆ. ಸೆಂಟರ್-ಬ್ಯಾಕ್ ನಯೆಫ್ ಅಗ್ಯುರ್ಡ್ ಸ್ನಾಯು ಸೆಳೆತದಿಂದ ಪೋರ್ಚುಗಲ್ ವಿರುದ್ಧ ಆಡಿರಲಿಲ್ಲ. ಬದಲಿ ಆಟಗಾರನಾಗಿ ಕಣಕ್ಕಿಳಿದ ರೊಮೇನ್ ಸೇಸ್ ಕೂಡ ಫಿಟ್‌ನೆಸ್ ಸಮಸ್ಯೆಗೆ ಸಿಲುಕಿದರು.
ಫ್ರೆಶ್ ಆಗಿದೆ ಫ್ರೆಂಚ್ ಪಡೆ
2018ರ ರಷ್ಯಾ ವಿಶ್ವಕಪ್ ಕೂಟದಲ್ಲಿ ಕ್ರೊವೇಶಿಯಾವನ್ನು ಮಣಿಸಿ ಪ್ರಶಸ್ತಿ ಗೆದ್ದ ಫ್ರಾನ್ಸ್, ಚಾಂಪಿಯನ್ನರ ಆಟವನ್ನೇನೂ ಪ್ರದರ್ಶಿಸಿಲ್ಲ. ಚಾಂಪಿಯನ್ನರನ್ನೂ ಸೋಲಿಸಲು ಸಾಧ್ಯ ಎಂಬುದನ್ನು ಸಾಮಾನ್ಯ ತಂಡವಾದ ಟ್ಯುನೀಶಿಯ ಲೀಗ್ ಹಂತದಲ್ಲೇ ತೋರಿಸಿ ಕೊಟ್ಟಿದೆ. ಉಳಿದಂತೆ ಅದು ಲೀಗ್‌ನಲ್ಲಿ ಆಸ್ಟ್ರೇಲಿಯ, ಡೆನ್ಮಾರ್ಕ್; ನಾಕೌಟ್‌ನಲ್ಲಿ ಪೋಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದೆ.
ಕೈಲಿಯನ್ ಎಂಬಪೆ ಫ್ರೆಂಚ್ ಪಡೆಯ ಅಪಾಯಕಾರಿ ಆಟಗಾರ. ಜೂಲ್ಸ್ ಕೌಂಡ್, ಥಿಯೊ ಹೆರ್ನಾಂಡೆಝ್, ಡಯಟ್ ಅಪ್‌ಮೆಕಾನೊ ಇಂಗ್ಲೆಂಡ್ ವಿರುದ್ಧ ತುಸು ಅಧೀರರಾಗಿದ್ದರು. ಆದರೆ ಫ್ರಾನ್ಸ್‌ನ ನಾಕೌಟ್ ಪಂದ್ಯಗಳಾವುವೂ ಹೆಚ್ಚುವರಿ ಅವಧಿಗೆ ವಿಸ್ತರಿಸದೇ ಇದ್ದುದರಿಂದ ಆಟಗಾರೆಲ್ಲ ಹೆಚ್ಚು ಫ್ರೆಶ್ ಆಗಿದ್ದಾರೆ ಎನ್ನಲಡ್ಡಿಯಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.