ಫ್ರೆಂಚ್ ಓಪನ್ಗೆ 1200 ಭದ್ರತಾ ಸಿಬ್ಬಂದಿ
Team Udayavani, May 25, 2017, 11:30 AM IST
ಪ್ಯಾರಿಸ್: ಮ್ಯಾಂಚೆಸ್ಟರ್ನಲ್ಲಿ ಆತ್ಮಾಹುತಿ ದಾಳಿ ನಡೆದು 22 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಬೆನ್ನಲ್ಲೇ ಮುಂಬರುವ ಫ್ರೆಂಚ್ ಓಪನ್ ಟೆನಿಸ್ ಕೂಟಕ್ಕೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಒಟ್ಟು 1,200 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುತ್ತಿರುವುದಾಗಿ ಕೂಟದ ಭದ್ರತಾ ಮುಖ್ಯಸ್ಥ ಜಾಕ್ವೆಸ್ ಲೆ ಮೆನ್ ತಿಳಿಸಿದ್ದಾರೆ. ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಬಗ್ಗೆ ನಾವು ಎಚ್ಚರಿಕೆಯಿಂದ ಇದ್ದೀವಿ. ನಮ್ಮಲ್ಲಿ ನುರಿತ ಭದ್ರತಾ ಸಿಬ್ಬಂದಿಗಳು ಇದ್ದಾರೆ. ಕಳೆದ ವರ್ಷ ನಾವು ಕೂಟಕ್ಕೆ ಭದ್ರತೆ ನೀಡಿ ಯಶಸ್ವಿಯಾಗಿದ್ದೇವೆ. ಅದೇ ಸ್ಫೂರ್ತಿಯನ್ನು ಪಡೆದು ಕರ್ತವ್ಯ ನಿರ್ವಹಿಸಲಿದ್ದೇವೆ ಎಂದು ಜಾಕ್ವೆಸ್ ತಿಳಿಸಿದ್ದಾರೆ.
ಫೆಡರರ್, ಸೆರನಾ ಅನುಪಸ್ಥಿತಿ: ಈ ವರ್ಷದ ಫ್ರೆಂಚ್ ಓಪನ್ನಲ್ಲಿ ವಿಶ್ವಶ್ರೇಷ್ಠ ಟೆನಿಸ್ ಆಟಗಾರರಾದ ರೋಜರ್ ಫೆಡರರ್, ಸೆರೆನಾ ವಿಲಿಯಮ್ಸ್ ಆಡುವುದಿಲ್ಲ. ಜೊತೆಗೆ ವೈಲ್ಡ್ ಕಾರ್ಡ್ ಸಿಗದಿರುವುದರಿಂದ ಮರಿಯಾ ಶರಪೋವಾ ಏನು ಮಾಡುತ್ತಾರೆನ್ನುವುದು ಇನ್ನೂ ಖಚಿತವಾಗಿಲ್ಲ. ಫ್ರೆಂಚ್ ಓಪನ್ ಟೆನಿಸ್ ಭಾನುವಾರದಿಂದ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.