ಶರಪೋವಾ, ಮುಗುರುಜಾ ಗೆಲುವು
Team Udayavani, May 30, 2018, 6:00 AM IST
ಪ್ಯಾರಿಸ್: ಎರಡು ಬಾರಿಯ ಚಾಂಪಿಯನ್ ಮರಿಯಾ ಶರಪೋವಾ, ವೋಜ್ನಿ ಯಾಕಿ, ಮುಗುರುಜಾ ಅವರು ತಮ್ಮ ಎದುರಾಳಿಯೆದುರು ಗೆಲುವು ಸಾಧಿಸಿ ಮುನ್ನಡೆ ಸಾಧಿಸಿದ್ದಾರೆ. ಶರಪೋವಾ ಅವರ ಪಂದ್ಯ ಸೋಮವಾರ ನಡೆಯಬೇಕಿತ್ತು. ಆದರೆ ಭಾರೀ ಮಳೆಯಿಂದ ಮಂಗಳವಾರಕ್ಕೆ ಮುಂದೂಡಲಾಗಿತ್ತು. ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆದ್ದ ಶರಪೋವಾ ಎರಡನೇ ಸೆಟ್ ಕಳೆದುಕೊಂಡರು. ನಿರ್ಣಾಯಕ ಸೆಟ್‌ನಲ್ಲಿ ಮತ್ತೆ ಭರ್ಜರಿ ಆಡಿದ ಶರಪೋವಾ ಅವರು ಹಾಲೆಂಡಿನ ರಿಚೆಲ್ ಹೊಗೆನ್‌ಕ್ಯಾಂಪ್ ಅವರನ್ನು 6-1, 4-6, 6-3 ಸೆಟ್‌ಗಳಿಂದ ಉರುಳಿಸಿದರು.
ಮುಗುರುಜಾ ಮುನ್ನಡೆ
ಮಳೆಯಿಂದ ತೊಂದರೆಗೊಳ ಗಾದ ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ ಗಾರ್ಬಿನ್ ಮುಗುರುಜಾ ಮಾಜಿ ಚಾಂಪಿಯನ್ ಸ್ವೆತ್ಲಾನಾ ಕುಜ್ನೆತ್ಸೋವಾ ಅವರನ್ನು 7-6 (7-0), 6-2 ಸೆಟ್‌ಗಳಿಂದ ಮಣಿಸಿ ಮುನ್ನಡೆದರು. ದ್ವಿತೀಯ ಸುತ್ತಿನಲ್ಲಿ ಮುಗು ರುಜಾ ಫ್ರಾನ್ಸ್‌ನ ವೈಲ್ಡ್ ಕಾರ್ಡ್ ಫಿಯೊನಾ ಫೆರೊ ಅವರನ್ನು ಎದುರಿಸಲಿದ್ದಾರೆ. ಮಾಜಿ ಚಾಂಪಿಯನ್‌ಗಳ ನಡುವಣ ಈ ಸಮರದಲ್ಲಿ ಕುಜ್ನೆತ್ಸೋವಾ ನೀರಸವಾಗಿ ಆಡಿದರು. 2009ರ ಚಾಂಪಿಯನ್ ಕುಜ್ನೆತ್ಸೋವಾ ಕೈಯ ಗಾಯದಿಂದಾಗಿ ಕಳೆದ ಮಾರ್ಜ್‌ನಲ್ಲಿ ಟೆನಿಸ್ ಕಣಕ್ಕೆ ಮರಳಿದ್ದರು. ಆದರೆ ಮುಗುರುಜಾ ಅವರ ಹೊಡೆತಕ್ಕೆ ಉತ್ತರಿಸಲು ಅವರು ವಿಫಲರಾದರು.
ವೋಜ್ನಿಯಾಕಿಗೆ ಗೆಲುವಿನ ನಗೆ
ದ್ವಿತೀಯ ಶ್ರೇಯಾಂಕದ ಕ್ಯಾರೋಲಿನ್ ವೋಜ್ನಿಯಾಕಿ ಅವರು ಅಮೆರಿಕದ ಡೇನಿಯಲ್ ಕಾಲಿನ್ಸ್ ಅವರ ಕಠಿನ ಸವಾಲನ್ನು ದಿಟ್ಟವಾಗಿ ಎದುರಿಸಿ ಗೆಲುವಿನ ನಗೆ ಚೆಲ್ಲಲು ಸಮರ್ಥರಾದರು. ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ವೋಜ್ನಿಯಾಕಿ ಇಲ್ಲಿ ಒಮ್ಮೆಯೂ ಸೆಮಿಫೈನಲ್ ತಲುಪಿಲ್ಲ. ಮೊದಲ ಸೆಟ್‌ನಲ್ಲಿ ಇಬ್ಬರೂ ಪ್ರಬಲ ಹೋರಾಟ ಸಂಘಟಿಸಿದ್ದರು. 7-6 (7-2) ಅಂತರದಿಂದ ಗೆದ್ದ ವೋಜ್ನಿಯಾಕಿ ದ್ವಿತೀಯ ಸೆಟ್‌ನಲ್ಲಿ 6-1ರಿಂದ ಸುಲಭವಾಗಿ ಗೆಲುವು ಪಡೆದರು.
ವೋಜ್ನಿಯಾಕಿ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ ಅರ್ಹತಾ ಆಟಗಾರ್ತಿ ಜಾರ್ಜಿನಾ ಗಾರ್ಸಿಯಾ ಪೆರೆಜ್ ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಇಲ್ಲಿ ವೋಜ್ನಿಯಾಕಿ ಪ್ರಶಸ್ತಿ ಗೆದ್ದರೆ ಅವರು ಸಿಮೋನಾ ಹಾಲೆಪ್ ಅವರಿಂದ ವಿಶ್ವದ ನಂಬರ್ ವನ್ ಪಟ್ಟವನ್ನು ಕಸಿದುಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.