French Open-2024 ; ಬೋಪಣ್ಣ ಜೋಡಿಗೆ ಗೆಲುವು
ಕ್ವಾರ್ಟರ್ ಫೈನಲ್‌ಗೆ ಸ್ವಿಯಾಟೆಕ್, ಕೊಕೊ ಗಾಫ್
Team Udayavani, Jun 3, 2024, 12:23 AM IST
ಪ್ಯಾರಿಸ್: ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಅಮೆರಿಕದ ಕೊಕೊ ಗಾಫ್ ಮತ್ತು ಜೆಕ್ ಆಟಗಾರ್ತಿ ಮಾರ್ಕೆಟಾ ವೊಂಡ್ರೂಸೋವಾ ಕೂಡ ಇದೇ ಹಂತಕ್ಕೇರಿದ್ದಾರೆ.
ವನಿತಾ ಸಿಂಗಲ್ಸ್‌ನಲ್ಲಿ ಇಗಾ ಸ್ವಿಯಾಟೆಕ್ ರಷ್ಯಾದ ಅನಾಸ್ತಾಸಿಯ ಪೊಟಪೋವಾ ಅವರಿಗೆ ಒಂದೂ ಅಂಕ ಬಿಟ್ಟುಕೊಡದೆ ಗೆಲುವು ಸಾಧಿಸಿದರು. ಅಂತರ 6-0, 6-0. ಮೊದಲ ಸೆಟ್ ಗೆಲ್ಲಲು ಸ್ವಿಯಾಟೆಕ್ ತೆಗೆದುಕೊಂಡದ್ದು ಬರೀ 19 ನಿಮಿಷ.
ಕೊಕೊ ಗಾಫ್ ಇಟಲಿಯ ಎಲಿಸಾಬೆಟ್ಟಾ ಕೋಕ್ಸಿಯರೆಟ್ಟೊ ವಿರುದ್ಧ 6-1, 6-2 ಅಂತರದ ಮೇಲುಗೈ ಸಾಧಿಸಿದರು. 2015ರ ಬಳಿಕ ಮೊದಲ ಫ್ರೆಂಚ್ ಓಪನ್ ಗೆಲ್ಲುವ ಅಮೆರಿಕನ್ ಆಟಗಾರ್ತಿ ಎನಿಸಿಕೊಳ್ಳುವ ಗುರಿ ಗಾಫ್ ಅವರದು. ಅಂದು ಸೆರೆನಾ ವಿಲಿಯಮ್ಸ್ ಚಾಂಪಿಯನ್ ಆಗಿದ್ದರು. ಓನ್ಸ್ ಜೆಬ್ಯೂರ್-ಡೇನ್ ಕ್ಲಾರಾ ಟೌಸನ್ ನಡುವಿನ ವಿಜೇತರನ್ನು ಕೊಕೊ ಗಾಫ್ ಎದುರಿಸಲಿದ್ದಾರೆ.
ಮಾರ್ಕೆಟಾ ವೊಂಡ್ರೂಸೋವಾ ಸರ್ಬಿ ಯಾದ ಓಲ್ಗಾ ಡ್ಯಾನಿಲೋವಿಕ್ ಅವರನ್ನು 6-4, 6-2ರಿಂದ ಪರಾಭವಗೊಳಿಸಿದರು.
ಜೊಕೋ 5 ಸೆಟ್ ಹೋರಾಟ
3ನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಎದುರಾಳಿ ಲೊರೆಂಜೊ ಮುಸೆಟ್ಟಿ ವಿರುದ್ಧ ಜೊಕೋವಿಕ್ ಭಾರೀ ಬೆವರಿಳಿಸಿಕೊಂಡರು. ಮುಸೆಟ್ಟಿ ಇದನ್ನು 5 ಸೆಟ್ ತನಕ ಎಳೆದು ತಂದರು. ಜೊಕೋ ಗೆಲುವಿನ ಅಂತರ 7-5, 6-7 (6-8), 2-6, 6-3, 6-0. ಇವರ ಕ್ವಾರ್ಟರ್ ಫೈನಲ್ ಎದು ರಾಳಿ ಆರ್ಜೆಂಟೀನಾದ ಫ್ರಾನ್ಸಿಸ್ಕೊ ಸೆರುಂ ಡೋಲೊ. ಇನ್ನೊಂದು ಪಂದ್ಯದಲ್ಲಿ ಇವರು ಅಮೆರಿಕದ ಟಾಮಿ ಪೌಲ್ ಆಟವನ್ನು 3-6, 6-3, 6-3, 6-2ರಿಂದ ಮುಗಿಸಿದರು.
ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಕೂಡ 5 ಸೆಟ್‌ಗಳ ಹೋರಾಟವೊಂದರಲ್ಲಿ ನೆದರ್ಲೆಂಡ್ಸ್‌ನ ಟ್ಯಾಲನ್ ಗ್ರೀಕ್ಸ್‌ಪೂರ್ ಅವರನ್ನು ಮಣಿಸಿ 4ನೇ ಸುತ್ತು ತಲುಪಿದರು. ಗೆಲುವಿನ ಅಂತರ 3-6, 6-4, 6-2, 4-6, 7-6 (10-3).
ಬೋಪಣ್ಣ ಜೋಡಿಗೆ ಗೆಲುವು
ಪುರುಷರ ಡಬಲ್ಸ್‌ನಲ್ಲಿ ದ್ವಿತೀಯ ಶ್ರೇಯಾಂಕದ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬೆxನ್ ಕಠಿನ ಹೋರಾಟದ ಬಳಿಕ ಮೊದಲ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ಬ್ರಝಿಲ್‌ನ ಓರ್ಲಾಂಡೊ ಲುಝ್ ಮತ್ತು ಮಾರ್ಸೆಲೊ ಝೋರ್ಮಾನ್ ವಿರುದ್ಧದ ಪಂದ್ಯವನ್ನು ಇಂಡೋ-ಆಸ್ಟ್ರೇಲಿಯನ್ ಟೆನಿಸಿಗರು 7-5, 4-6, 6-4 ಅಂತರದಿಂದ ಗೆದ್ದರು.
ದ್ವಿತೀಯ ಸುತ್ತಿನಲ್ಲಿ ಇವರು ಸೆಬಾಸ್ಟಿಯನ್ ಬೇಝ್ (ಆರ್ಜೆಂಟೀನಾ)-ಥಿಯಾಗೊ ಸೆಬೋತ್ ವೈಲ್ಡ್ (ಬ್ರಝಿಲ್) ವಿರುದ್ಧ ಆಡಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.