ಫ್ರೆಂಚ್ ಓಪನ್-2020; ಮುಗುರುಜಾ 3 ಗಂಟೆ ಹೋರಾಟ
Team Udayavani, Sep 29, 2020, 11:07 PM IST
ಪ್ಯಾರಿಸ್: ಸ್ಪೇನಿನ ಮಾಜಿ ಚಾಂಪಿಯನ್ ಗಾರ್ಬಿನ್ ಮುಗುರುಜಾ 3 ಗಂಟೆಗಳ ಕಾಲ ಹೋರಾಟ ನಡೆಸಿ ಫ್ರೆಂಚ್ ಓಪನ್ ಗ್ರ್ಯಾಸ್ಲಾಮ್ ಮೊದಲ ಸುತ್ತಿನ ಆಘಾತದಿಂದ ಪಾರಾಗಿದ್ದಾರೆ. ವನಿತಾ ಸಿಂಗಲ್ಸ್‌ನಲ್ಲಿ ಸ್ಲೊವೇನಿಯಾದ ಟಮರಾ ಜಿದಾನ್ಸೆಕ್ ವಿರುದ್ಧದ ಪಂದ್ಯವನ್ನು ಅವರು 7-5, 4-6, 8-6 ಅಂತರದಿಂದ ಗೆದ್ದು ನಿಟ್ಟುಸಿರೆಳೆದರು. 2016ರಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದ ಮಾಜಿ ನಂ.1 ಆಟಗಾರ್ತಿ ಮುಗುರುಜಾ ಇನ್ನು ಜೆಕ್ ಆಟಗಾರ್ತಿ ಕ್ರಿಸ್ಟಿನಾ ಪ್ಲಿಸ್ಕೋವಾ ವಿರುದ್ಧ ಆಡಲಿದ್ದಾರೆ. ಅವರು ಸ್ಲೊವಾಕಿಯಾದ ವಿಕ್ಟೋರಿಯಾ ಕುಜೊವಾ ವಿರುದ್ಧ 6-1, 6-2ರಿಂದ ಗೆದ್ದು ಬಂದರು.
ಸೆರೆನಾ ಗೆಲುವು
ಕೂಟದ ನೆಚ್ಚಿನ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಸೆರೆನಾ ವಿಲಿಯಮ್ಸ್ ಮೊದಲ ಸುತ್ತಿನಲ್ಲಿ ಅಮೆರಿಕದವರೇ ಆದ ಕ್ರಿಸ್ಟಿ ಆ್ಯನ್ ವಿರುದ್ಧ 7-6 (2), 6-0 ಅಂತರದ ಜಯ ಸಾಧಿಸಿದರು. ಇವರ ಮುಂದಿನ ಎದುರಾಳಿ ಬಲ್ಗೇರಿಯಾದ ಸ್ವೆತಾನಾ ಪಿರೊಂಕೋವಾ. ಅವರು ಜರ್ಮನಿಯ ಆ್ಯಂಡ್ರಿಯಾ ಪೆಟ್ಕೊವಿಕ್ ವಿರುದ್ಧ 6-3, 6-3 ಅಂತರದ ಮೇಲುಗೈ ಸಾಧಿಸಿದರು.
ನಡಾಲ್ ಗೆಲುವು
“ಕ್ಲೇ ಕೋರ್ಟ್ ಮಾಸ್ಟರ್’ ರಫೆಲ್ ನಡಾಲ್ ಕೂಡ ಗೆಲುವಿನ ಓಟ ಆರಂಭಿಸಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ಬೆಲರೂಸ್‌ನ ಈಗರ್ ಗೆರಸಿಮೋವ್ ವಿರುದ್ಧ 6-4, 6-4, 6-2 ನೇರ ಸೆಟ್ ಜಯ ಸಾಧಿಸಿದರು. ದ್ವಿತೀಯ ಸುತ್ತಿನಲ್ಲಿ ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್ ವಿರುದ್ಧ ಆಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.