ಫ್ರೆಂಚ್ ಓಪನ್: ಜೊಹಾನ್ನಾ ಕೊಂಟಾ ಸೆಮಿಗೆ
Team Udayavani, Jun 5, 2019, 6:06 AM IST
ಪ್ಯಾರಿಸ್: ಕಳೆದ ವರ್ಷದ ರನ್ನರ್ ಅಪ್ ಬ್ರಿಟನ್ನ ಜೊಹಾನ್ನಾ ಕೊಂಟಾ ಅವರು ಅಮೆರಿಕದ ಸಲೋನೆ ಸ್ಟೀಫನ್ಸ್ ಅವರನ್ನು ನೇರ ಸೆಟ್ಗಳಿಂದ ಉರುಳಿಸಿ ಫ್ರೆಂಚ್ ಓಪನ್ ಟೆನಿಸ್ ಕೂಟದ ಸೆಮಿಫೈನಲ್ ತಲುಪಿದರು.
26ನೇ ಶ್ರೇಯಾಂಕದ ಕೊಂಟಾ 6-1, 6-4 ಸೆಟ್ಗಳಿಂದ ಉರುಳಿಸಿ ಅಂತಿಮ ನಾಲ್ಕರ ಸುತ್ತಿಗೇರಿದರು. ಅಲ್ಲಿ ಅವರು ಜೆಕ್ನ ಹದಿಹರೆಯದ ಮಾರ್ಕೆಟಾ ವಂಡ್ರೋಸೋವಾ ಅಥವಾ ಪೆಟ್ರಾ ಮಾರ್ಟಿಕ್ ಅವರನ್ನು ಎದುರಿಸಲಿದ್ದಾರೆ.
28ರ ಹರೆಯದ ಕೊಂಟಾ ಈ ಹಿಂದೆ ರೋಲ್ಯಾಂಡ್ ಗ್ಯಾರೋಸ್ನಲ್ಲಿ ನಾಲ್ಕು ಬಾರಿ ಆಡಿದ್ದರೂ ಒಂದೇ ಒಂದು ಪಂದ್ಯ ಗೆದ್ದಿರಲಿಲ್ಲ. ಈ ಬಾರಿ ಸೆಮಿಫೈನಲ್ ತಲುಪಿದ ಅವರು 36 ವರ್ಷಗಳ ಬಳಿಕ ಈ ಸಾಧನೆಗೈದ ಬ್ರಿಟನ್ನ ಮೊದಲ ವನಿತೆ ಎಂದೆನಿಸಿಕೊಂಡರು. 1983ರಲ್ಲಿ ಬ್ರಿಟನ್ನ ಜೋ ದುರೀ ಫ್ರೆಂಚ್ ಓವನ್ನ ಸೆಮಿಫೈನಲ್ ತಲುಪಿದ್ದರು.
ಹಾಲೆಪ್ ಕ್ವಾರ್ಟರ್ಗೆ
ಹಾಲಿ ಚಾಂಪಿಯನ್ ಸಿಮೋನಾ ಹಾಲೆಪ್ ನಾಲ್ಕನೇ ಬಾರಿ ಕ್ವಾರ್ಟರ್ಫೈನಲ್ ತಲುಪಿದ್ದಾರೆ. ನಾಲ್ಕನೇ ಸುತ್ತಿನ ಹೋರಾಟದಲ್ಲಿ ಅವರು ಪೋಲೆಂಡಿನ ಹದಿಹರೆಯದ ಇಗಾ ಸ್ವೀಟೆಕ್ ಅವರನ್ನು 45 ನಿಮಿಷಗಳ ಹೋರಾಟದಲ್ಲಿ 6-1, 6-0 ಸೆಟ್ಗಳಿಂದ ಸೋಲಿಸಿದರು.
ಪುರುಷರ ವಿಭಾಗದಲ್ಲಿ ಜರ್ಮನಿಯ ಐದನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೇವ್ ನಾಲ್ಕು ಸೆಟ್ಗಳ (3-6, 6-2, 6-2, 7-6 (7-5) ಕಠಿನ ಸೆಣಸಾಟದಲ್ಲಿ ಇಟಲಿಯ ಫ್ಯಾಬಿಯೊ ಫಾಗ್ನಿನಿ ಅವರನ್ನು ಸೋಲಿಸಿ ಕ್ವಾರ್ಟರ್ಫೈನಲ್ ತಲುಪಿದರು. ಅಂತಿಮ ಎಂಟರ ಸುತ್ತಿನಲ್ಲಿ ಅವರು ವಿಶ್ವದ ನಂಬರ್ ವನ್ ನೊವಾಕ್ ಜೊಕೋವಿಕ್ ಅವರನ್ನು ಎದುರಿಸುವವರಿದ್ದಾರೆ.
ಜೊಕೋವಿಕ್ ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ಜಾನ್ ಲೆನಾರ್ಡ್ ಸ್ಟ್ರಫ್ ಅವರನ್ನು 6-3, 6-2, 6-2 ಸೆಟ್ಗಳಿಂದ ಉರುಳಿಸಿ ಅಂತಿಮ ಎಂಟರ ಸುತ್ತಿಗೆ ತಲುಪಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.