ಫ್ರೆಂಚ್ ಓಪನ್: ನೋವಾಕ್ ಜೊಕೋವಿಕ್ ಕ್ವಾರ್ಟರ್ ಫೈನಲಿಗೆ
Team Udayavani, May 30, 2022, 12:17 AM IST
ಪ್ಯಾರಿಸ್: ವಿಶ್ವದ ನಂಬರ್ ವನ್ ಆಟಗಾರ ನೋವಾಕ್ ಜೊಕೋವಿಕ್ ಫ್ರೆಂಚ್ ಓಪನ್‌ನಲ್ಲಿ ತನ್ನ ಗೆಲುವಿನ ಅಭಿಯಾನವನ್ನು ಮುಂದುವರಿಸಿದ್ದಾರೆ.
15ನೇ ಶ್ರೇಯಾಂಕದ ಡೀಗೊ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿದ ಜೊಕೋವಿಕ್ ಕ್ವಾರ್ಟರ್‌ಫೈನಲಿಗೇರಿದರು.
2022ರಲ್ಲಿ ಮೊದಲ ಗ್ರ್ಯಾನ್ ಸ್ಲಾಮ್‌ನಲ್ಲಿ ಆಡುತ್ತಿರುವ ಜೊಕೋವಿಕ್ 6-1, 6-3, 6-3 ಸೆಟ್‌ಗಳಿಂದ ಗೆದ್ದು ಬಂದರು. ಅವರು ಸತತ 13ನೇ ಬಾರಿ ಇಲ್ಲಿ ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿದ್ದಾರೆ.
ಫೆರ್ನಾಂಡೆಸ್ ಕ್ವಾರ್ಟರ್‌ಫೈನಲಿಗೆ
ಯುಎಸ್ ಓಪನ್ ಫೈನಲಿಸ್ಟ್ ಲೇಲಾ ಫೆರ್ನಾಂಡೆಸ್ ಅವರು ಬೇಸ್‌ಲೈನ್ ಸೆಣಸಾಟದಲ್ಲಿ ಅಮೆರಿಕದ ಅಮಂಡಾ ಅನಿಸಿಮೋವಾ ಅವರನ್ನು ಮೂರು ಸೆಟ್‌ಗಳಿಂದ ಕೆಡಹಿ ಇದೇ ಮೊದಲ ಬಾರಿಗೆ ಕ್ವಾರ್ಟರ್‌ಫೈನಲ್ ಹಂತಕ್ಕೇರಿದರು.
ಕೆನಡದ 19ರ ಹರೆಯದ ಫೆರ್ನಾಂಡೆಸ್ 6-3, 4-6, 6-3 ಸೆಟ್‌ಗಳಿಂದ ಗೆಲುವು ಸಾಧಿಸಿ ಅಂತಿಮ 8ರ ಸುತ್ತಿಗೇರಿದರು. ಅವರು ಈ ಹಿಂದೆ 2021ರ ಯುಎಸ್ ಓಪನ್‌ನಲ್ಲಿ ಮೊದಲ ಬಾರಿಗೆ ಫೈನಲಿಗೇರಿದ್ದರು. ಆದರೆ ಫೈನಲ್‌ನಲ್ಲಿ ಎಮ್ಮಾ ರಾಡುಕಾನು ಅವರಿಗೆ ಶರಣಾಗಿದ್ದರು.
ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೆರ್ನಾಂಡೆಸ್ ಇಟೆಲಿಯ ಮಾರ್ಟಿನಾ ಟ್ರೆವಿಸನ್ ಅವರನ್ನು ಎದುರಿಸಲಿದ್ದಾರೆ. ಟ್ರೆವಿಸನ್ ಇನ್ನೊಂದು ಪಂದ್ಯದಲ್ಲಿ ಬೆಲಾರೂಸ್‌ನ ಅಲಿಯಾಕ್ಸಾಂಡ್ರಾ ಸ್ಯಾಸ್ನೊವಿಚ್ ಅವರನ್ನು 7-6 (10), 7-5 ಸೆಟ್‌ಗಳಿಂದ ಕೆಡಹಿದ್ದರು.
ಕೊಕೊ ಗಾಫ್ ಮುನ್ನಡೆ
ಅಮೆರಿಕದ ಹದಿಹರೆಯದ ಕೊಕೊ ಗಾಫ್ ಸತತ ಎರಡನೇ ವರ್ಷ ಕ್ವಾರ್ಟರ್‌ಫೈನಲಿಗೇರಿದ್ದಾರೆ. 18ರ ಹರೆಯದ ಗಾಫ್ ಬೆಲ್ಜಿಯಂನ ಎಲಿಸೆ ಮಾರ್ಟೆನ್ಸ್ ಅವರನ್ನು 6-4, 6-0 ಸೆಟ್‌ಗಳಿಂದ ಸೋಲಿಸಿ ಮುನ್ನಡೆದಿದ್ದಾರೆ. ಕಳೆದ ವರ್ಷ ಇಲ್ಲಿ ಅವರು ಮೊದಲ ಬಾರಿ ಗ್ರ್ಯಾನ್ ಸ್ಲಾಮ್ ಕೂಟದ ಕ್ವಾರ್ಟರ್‌ಫೈನಲ್ ತಲುಪಿದ್ದರು. ಆದರೆ ಬಾಬೊìರಾ ಕ್ರೆಜಿಕೋವಾ ಕೈಯಲ್ಲಿ ಸೋತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.