ಆ್ಯಶ್ಲಿ ಬಾರ್ಟಿ, ಮ್ಯಾಡಿಸನ್ ಕೀಸ್ ಕ್ವಾರ್ಟರ್ ಫೈನಲ್ ಮುಖಾಮುಖೀ
ಫ್ರೆಂಚ್ ಓಪನ್ ಟೆನಿಸ್
Team Udayavani, Jun 4, 2019, 6:00 AM IST
ಪ್ಯಾರಿಸ್: ಆಸ್ಟ್ರೇಲಿಯದ 8ನೇ ಶ್ರೇಯಾಂಕದ ಆಟಗಾರ್ತಿ ಆ್ಯಶ್ಲಿ ಬಾರ್ಟಿ ಮತ್ತು ಅಮೆರಿಕದ 14ನೇ ಶ್ರೇಯಾಂಕಿತೆ ಮ್ಯಾಡಿಸನ್ ಕೀಸ್ ಫ್ರೆಂಚ್ ಓಪನ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖೀಯಾಗಲಿದ್ದಾರೆ.
ಆ್ಯಶ್ಲಿ ಬಾರ್ಟಿ ಸೋಮವಾರದ ಪಂದ್ಯದಲ್ಲಿ ಅಮೆರಿಕದ ಸೋಫಿಯಾ ಕೆನಿನ್ ಅವರನ್ನು 6-3, 3-8, 6-0 ಅಂತರದಿಂದ ಪರಾಭವಗೊಳಿಸಿದರು. ಕೆನಿನ್ ನೆಚ್ಚಿನ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ಗೆ ಸೋಲುಣಿಸಿ ಸುದ್ದಿಯಾಗಿದ್ದರು.
“ಈ ವಾರ ನಾನು ಈ ಸುಂದರವಾದ ಕೋರ್ಟ್‌ನಲ್ಲಿ ಆಡಿದ್ದು ಇದೇ ಮೊದಲು. ಇಲ್ಲಿ ಇನ್ನಷ್ಟು ಪಂದ್ಯಗಳನ್ನು ಆಡಬೇಕೆಂಬುದು ನನ್ನ ಆಸೆ’ ಎಂಬುದಾಗಿ 23ರ ಹರೆಯದ, ಮಾಜಿ ಕ್ರಿಕೆಟ್ ಆಟಗಾರ್ತಿಯೂ ಆಗಿರುವ ಬಾರ್ಟಿ ಹೇಳಿದರು.
ಮ್ಯಾಡಿಸನ್ ಕೀಸ್ ಜೆಕ್ ಆಟಗಾರ್ತಿ ಕ್ಯಾಥರಿನಾ ಸಿನಿಯಕೋವಾಗೆ 6-2, 6-4 ಅಂತರದಿಂದ ಆಘಾತವಿಕ್ಕಿದರು. ಇವರು ನಂ.1 ಆಟಗಾರ್ತಿ ನವೋಮಿ ಒಸಾಕಾ ಓಟಕ್ಕೆ ಬ್ರೇಕ್ ಹಾಕಿದ್ದರು. ಕೀಸ್ ಕಳೆದ ವರ್ಷ ಇಲ್ಲಿ ಸೆಮಿಫೈನಲ್ ತನಕ ಸಾಗಿದ್ದರು.
ಪುರುಷರ
ಕ್ವಾರ್ಟರ್ ಫೈನಲ್ಸ್
ಮಂಗಳವಾರ ನಡೆಯಲಿರುವ ಪುರುಷರ “ಆಲ್ ಸ್ವಿಸ್’ ಕ್ಟಾರ್ಟರ್ ಫೈನಲ್‌ನಲ್ಲಿ ರೋಜರ್ ಫೆಡರರ್-ಸ್ಟಾನಿಸ್ಲಾಸ್ ವಾವ್ರಿಂಕ ಪರಸ್ಪರ ಎದುರಾಗಲಿದ್ದಾರೆ. ಫೆಡರರ್ ಆರ್ಜೆಂಟೀನಾದ ಲಿಯೋನಾರ್ಡೊ ಮೇಯರ್ ಅವರನ್ನು 6-2, 6-3, 6-3ರಿಂದ ಮಣಿಸಿದರೆ, ಸ್ಟಾನಿಸ್ಲಾಸ್ ವಾವ್ರಿಂಕ ಗ್ರೀಕ್‌ನ ಅಪಾಯಕಾರಿ ಆಟಗಾರ ಸ್ಟೆಫನಸ್ ಸಿಸಿಪಸ್ ವಿರುದ್ಧ 5 ಸೆಟ್‌ಗಳ ಕಾದಾಟ ನಡೆಸಿ 7-6 (8-6), 5-7, 6-4, 3-6, 8-6 ಅಂತರದಿಂದ ಗೆದ್ದು ಬಂದರು.ಮಂಗಳವಾರದ ಇನ್ನೊಂದು ಕ್ವಾರ್ಟರ್ ಫೈನಲ್ ರಫೆಲ್ ನಡಾಲ್-ಕೀ ನಿಶಿಕೊರಿ ನಡುಬೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.