ಇಂದಿನಿಂದ ರಣಜಿ ಫೈನಲ್‌


Team Udayavani, Jan 10, 2017, 3:45 AM IST

09-SP-3.jpg

ಇಂದೋರ್‌: ಒಂದೆಡೆ, ರಣಜಿ ಟ್ರೋಫಿ ಅಂದರೆ ಅದು ತನ್ನ ಸ್ವಂತ ಆಸ್ತಿ ಎಂಬ ರೀತಿಯಲ್ಲಿ ಬೀಗುತ್ತಿರುವ ಮುಂಬಯಿ; ಇನ್ನೊಂದೆಡೆ, ಒಮ್ಮೆಯೂ ರಣಜಿ ಟ್ರೋಫಿ ಗೆಲ್ಲದ ಗುಜರಾತ್‌… ಈ 2 ತಂಡಗಳ ನಡುವೆ 2016-17ನೇ ಸಾಲಿನ ರಣಜಿ ಪ್ರಶಸ್ತಿ ಹಣಾಹಣಿ ಮಂಗಳವಾರದಿಂದ ತಟಸ್ಥ ತಾಣ ಇಂದೋರ್‌ನ “ಹೋಳ್ಕರ್‌ ಸ್ಟೇಡಿಯಂ’ನಲ್ಲಿ ಆರಂಭವಾಗಲಿದೆ. ಇತಿಹಾಸ ಹೇಗೇ ಇದ್ದರೂ ಎರಡೂ ತಂಡಗಳು “ಹೈ ಸ್ಪಿರಿಟ್‌’ನಲ್ಲಿರುವುದು ಸುಳ್ಳಲ್ಲ.

ಇದು ಪ್ರಸಕ್ತ ರಣಜಿ ಋತುವಿನಲ್ಲಿ ಮುಂಬಯಿ-ಗುಜರಾತ್‌ ನಡುವಿನ 2ನೇ ಮುಖಾಮುಖೀ ಎಂಬುದು ಗಮನಾರ್ಹ. ಇದಕ್ಕೂ ಮುನ್ನ “ಎ’ ವಿಭಾಗದ ಲೀಗ್‌ ಪಂದ್ಯ ದಲ್ಲಿ ಇತ್ತಂಡಗಳು ಹುಬ್ಬಳ್ಳಿಯಲ್ಲಿ ಮುಖಾ ಮುಖೀಯಾಗಿದ್ದವು. ಇಲ್ಲಿ ಗುಜರಾತ್‌ನ 437ಕ್ಕೆ ಉತ್ತರವಾಗಿ ಮುಂಬಯಿ 422ಕ್ಕೆ ಆಲೌಟ್‌ ಆಗಿತ್ತು. ಆಂದಿನ ಈ ಮೊದಲ ಇನ್ನಿಂಗ್ಸ್‌ ಮುನ್ನಡೆ ಎನ್ನುವುದು ಫೈನಲ್‌ನಲ್ಲಿ ಪಾರ್ಥಿವ್‌ ಪಟೇಲ್‌ ಬಳಗದ ಮನೋಬಲವನ್ನು ಸ್ವಲ್ಪ ಮಟ್ಟಿಗಾದರೂ ಹೆಚ್ಚಿಸಬಹುದು.

ಪಾಂಚಾಲ್‌, ಗೋಹಿಲ್‌: ಪ್ರಚಂಡ ಜೋಡಿ
ಮುಂಬಯಿ ಎದುರಿನ ಲೀಗ್‌ ಪಂದ್ಯದಲ್ಲಿ ಆರಂಭಕಾರ ಪ್ರಿಯಾಂಕ್‌ ಪಾಂಚಾಲ್‌ 232 ರನ್‌ ಬಾರಿಸಿ ಮಿಂಚಿದ್ದರು. ಮುಂದಿನ ಪಂದ್ಯ ದಲ್ಲೇ ಪಂಜಾಬ್‌ ವಿರುದ್ಧ 314 ರನ್‌ ಸೂರೆಗೈದ ಪಾಂಚಾಲ್‌ ಗುಜರಾತ್‌ನ ಪ್ರಮುಖ ಬ್ಯಾಟ್ಸ್‌ ಮನ್‌ ಆಗಿದ್ದಾರೆ. ಪ್ರಸಕ್ತ ಋತುವಿನಲ್ಲಿ 97.69ರ ಸರಾಸರಿಯಲ್ಲಿ 1,270 ರನ್‌ ಪೇರಿಸಿದ ಹೆಗ್ಗಳಿಕೆ ಪಾಂಚಾಲ್‌ ಅವರದು. ಇದೇ ಲಯದಲ್ಲಿ ಸಾಗಿದರೆ ಮುಂಬಯಿಗೆ ಪಾಂಚಾಲ್‌ ಕಬ್ಬಿಣದ ಕಡಲೆಯಾಗಬಹುದು. ಒಡಿಶಾ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ 359 ರನ್‌ ಬಾರಿಸಿ ಕೊನೆಯ ವರೆಗೂ ನಾಟೌಟ್‌ ಆಗಿ ಉಳಿದು ಪ್ರಥಮ ದರ್ಜೆಯಲ್ಲಿ ವಿಶ್ವದಾಖಲೆ ಸ್ಥಾಪಿಸಿರುವ ಸಮಿತ್‌ ಗೋಹಿಲ್‌ ಕೂಡ ಗುಜರಾತ್‌ ತಂಡದ ಬ್ಯಾಟಿಂಗ್‌ ಆಸ್ತಿ. ಗೋಹಿಲ್‌ ಈಗಾಗಲೇ 68.38ರ ಸರಾಸರಿಯಲ್ಲಿ ರನ್‌ ಗಳಿಸುತ್ತ 900ರ ಗಡಿಯಲ್ಲಿ ನಿಂತಿದ್ದಾರೆ. 

ಮನ್‌ಪ್ರೀತ್‌ ಜುನೇಜ ಗುಜರಾತ್‌ ತಂಡದ ಮತ್ತೂಬ್ಬ ಸ್ಟಾರ್‌ ಬ್ಯಾಟ್ಸ್‌ಮನ್‌. 9 ಪಂದ್ಯ ಗಳಿಂದ ಅವರು 628 ರನ್‌ ಗಳಿಸಿದ್ದಾರೆ. 
ನಾಯಕ ಪಾರ್ಥಿವ್‌ ಪಟೇಲ್‌, ರುಜುಲ್‌ ಭಟ್‌, ಆಲ್‌ರೌಂಡರ್‌ಗಳಾದ ಅಕ್ಷರ್‌ ಪಟೇಲ್‌, ರುಷ್‌ ಕಲಾರಿಯ ಕೂಡ ಬ್ಯಾಟಿಂಗ್‌ ವಿಭಾಗದ ಆಧಾರ ಸ್ತಂಭಗಳಾಗಿದ್ದಾರೆ. ಆದರೆ ಫ್ರಂಟ್‌ಲೆçನ್‌ ಪೇಸರ್‌ ಬುಮ್ರಾ ಟೀಮ್‌ ಇಂಡಿಯಾ ಡ್ನೂಟಿಗೆ ಹೋಗಿರುವುದು ಗುಜರಾತ್‌ ಬೌಲಿಂಗ್‌ ವಿಭಾಗಕ್ಕೆ ಬಿದ್ದಿರುವ ದೊಡ್ಡ ಹೊಡೆತ. ಹಿರಿಯ ಬೌಲರ್‌ ಆರ್‌ಪಿ ಸಿಂಗ್‌ ಸೆಮಿಫೈನಲ್‌ನಲ್ಲಿ ಅಪಾಯಕಾರಿಯಾಗಿ ಗೋಚರಿಸಿದ್ದೊಂದು ಶುಭ ಸಮಾಚಾರ.

ಮುಂಬಯಿ ಮುಂಬಯಿಯೇ!
ಪ್ರಸಕ್ತ ರಣಜಿ ಋತುವಿನಲ್ಲಿ ಮುಂಬಯಿಯ ಬಹಳಷ್ಟು ಆಟಗಾರರು ಗಾಯಾಳಾಗಿ ಹೊರ ಗುಳಿದಿದ್ದಾರೆ. ಆದರೆ ಇವರ ಸ್ಥಾನಕ್ಕೆ ಬಂದ ಎಳೆಯರೆಲ್ಲ ಅವಕಾಶವನ್ನು ಎರಡೂ ಕೈಗಳಿಂದ ಬಾಚಿ ತಂಡದ ಓಟಕ್ಕೆ ನೆರವಾಗಿದ್ದನ್ನು ಮರೆಯು ವಂತಿಲ್ಲ. ಉದಾಹರಣೆಗೆ ಆರಂಭಕಾರ ಪೃಥ್ವಿ ಶಾ. ತಮಿಳುನಾಡು ವಿರುದ್ಧದ ಸೆಮಿಫೈನಲ್‌ ಚೇಸಿಂಗ್‌ ವೇಳೆ ಶತಕ ಬಾರಿಸುವ ಮೂಲಕ ಶಾ ಆಪದಾºಂಧವರಾಗಿ ಮೂಡಿಬಂದಿದ್ದರು.

ಮುಂಬಯಿಯ ಬ್ಯಾಟಿಂಗ್‌ ಭಾರವನ್ನು ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಮತ್ತು ನಾಯಕ ಆದಿತ್ಯ ತಾರೆ ಸೇರಿ ಹೊತ್ತುಕೊಂಡು ಬಂದಿದ್ದಾರೆ. ನಾಯರ್‌ ಆಲ್‌ರೌಂಡ್‌ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. 

ಬೌಲಿಂಗ್‌ ವಿಭಾಗದಲ್ಲಿ 27 ವಿಕೆಟ್‌ ಕಿತ್ತ ಎಡಗೈ ಸ್ಪಿನ್ನರ್‌ ವಿಜಯ್‌ ಗೋಹಿಲ್‌ ಘಾತಕ ವಾಗಿ ಪರಿಣಮಿಸಿದ್ದಾರೆ. ಶಾದೂìಲ್‌ ಠಾಕೂರ್‌, ಸಂಧು ವೇಗದ ವಿಭಾಗದ ಹುರಿಯಾಳುಗಳು.

ಇತ್ತಂಡಗಳ ಬಲಾಬಲ, ಈ ವರ್ಷದ ಸಾಧನೆಯನ್ನೆಲ್ಲ ಗಮನಿಸಿದಾಗ ಗುಜರಾತ್‌ ಮೇಲುಗೈ ಹೊಂದಿದಂತೆ ಭಾಸವಾಗುತ್ತದೆ. ಆದರೆ ಯಾರೇ ಇರಲಿ, ಇಲ್ಲದಿರಲಿ… ಮುಂಬಯಿ ಮುಂಬಯಿಯೇ!

66 ವರ್ಷಗಳ ಬಳಿಕ ಫೈನಲ್‌ ಆಡುತ್ತಿರುವ ಗುಜರಾತ್‌ !
ರಣಜಿ ಟ್ರೋಫಿ ಕ್ರಿಕೆಟ್‌ ಅಂದರೆ ಅಲ್ಲಿ ಮುಂಬಯಿಯದೇ ಚಕ್ರಾಧಿಪತ್ಯ. ಅದು ಈವರೆಗೆ 45 ಫೈನಲ್‌ಗ‌ಳಲ್ಲಿ ಕಾಣಿಸಿಕೊಂಡು, 41 ಸಲ ಕಿರೀಟ ಧರಿಸಿದೆ. ಆಗಾಗ ಬೇರೆ ಕೆಲವು ತಂಡಗಳು ಚಾಂಪಿಯನ್‌ ಆದರೂ ದೇಶಿ ಕ್ರಿಕೆಟ್‌ನಲ್ಲಿ ಮುಂಬಯಿಯ ಪ್ರಾಬಲ್ಯ ಪ್ರಶ್ನಾತೀತ.

ಈ ಸಲ ಮುಂಬಯಿ ಎದುರಾಳಿಯಾಗಿ ಕಾಣಿಸಿಕೊಂಡಿರುವ ಗುಜರಾತ್‌ ಪಾಲಿಗೆ ಇದು ಕೇವಲ 2ನೇ ರಣಜಿ ಫೈನಲ್‌. ಮೊದಲ ಸಲ ಅದು ಪ್ರಶಸ್ತಿ ಸುತ್ತು ತಲುಪಿದ್ದು 1950-51ರ ಋತುವಿನಲ್ಲಿ, 66 ವರ್ಷ ಗಳಷ್ಟು ಹಿಂದೆ! ಅಂದಿನ ಎದುರಾಳಿ ಹೋಳ್ಕರ್‌. ಕಾಕತಾಳೀಯವೆಂದರೆ, ಗುಜ ರಾತ್‌ ಈ ಫೈನಲ್‌ ಆಡಿದ್ದೂ ಇಂದೋರ್‌ನಲ್ಲೇ. ಅಂದು ಗುಜರಾತ್‌ 189 ರನ್ನುಗಳ ಸೋಲಿಗೆ ತುತ್ತಾಯಿತು. 

ಅಂದು ಮೊದಲ ಸಲ ರಣಜಿ ಫೈನಲ್‌ ಆಡಿದ ಗುಜರಾತ್‌ ಮತ್ತೆ ಪ್ರಶಸ್ತಿ ಸುತ್ತಿನಲ್ಲಿ ಕಾಣಿಸಿಕೊಂಡದ್ದು ಇದೇ ಮೊದಲು. ಗುಜರಾತ್‌ ಮೊದಲ ಸಲ ರಣಜಿ ಟ್ರೋಫಿಗೆ ಮುತ್ತಿಕ್ಕೀತೇ ಎಂಬುದು ಕ್ರಿಕೆಟ್‌ ಅಭಿಮಾನಿ ಗಳ ಕೌತುಕ. ಆದರೆ ಮುಂಬಯಿಯನ್ನು ಫೈನಲ್‌ನಲ್ಲಿ ಮಗುಚುವುದು ಸುಲಭವಲ್ಲ ಎಂದು ಇತಿಹಾಸವೇ ಸಾರುತ್ತ ಬಂದಿದೆ.

ಮುಂಬಯಿ ಕೊನೆಯ ಸಲ ರಣಜಿ ಫೈನಲ್‌ನಲ್ಲಿ ಸೋತದ್ದು 1990-91ರಷ್ಟು ಹಿಂದೆ, ಎದುರಾಳಿ ಹರಿಯಾಣ. ಸೋಲಿನ ಅಂತರ ಎಷ್ಟು ಗೊತ್ತೇ? ಕೇವಲ 2 ರನ್‌! ಅನಂತರ 9 ಸಲ ಫೈನಲಿಗೆ ನೆಗೆದಿರುವ ಮುಂಬಯಿ ಪ್ರಶಸ್ತಿಯನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ. ಈಗ ಇತಿಹಾಸ ನಿರ್ಮಿಸುವ ಅವಕಾಶವೊಂದು ಗುಜರಾತ್‌ ಮುಂದೆ ತೆರೆದುಕೊಂಡಿದೆ.

ರಣಜಿ: ಸಂಭಾವ್ಯ ತಂಡಗಳು
ಮುಂಬಯಿ: ಆದಿತ್ಯ ತಾರೆ (ನಾಯಕ), ಅಖೀಲ್‌ ಹೆರ್ವಾಡ್ಕರ್‌, ಪೃಥ್ವಿ ಶಾ, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ಅಭಿಷೇಕ್‌ ನಾಯರ್‌, ಸಿದ್ದೇಶ್‌ ಲಾಡ್‌, ತುಷಾರ್‌ ದೇಶಪಾಂಡೆ/ಅಕ್ಷಯ್‌ ಗಿರಾಪ್‌, ವಿಜಯ್‌ ಗೋಹಿಲ್‌, ಶಾದೂìಲ್‌ ಠಾಕೂರ್‌, ಬಲ್ವಿಂದರ್‌ ಸಂಧು.

ಗುಜರಾತ್‌: ಪಾರ್ಥಿವ್‌ ಪಟೇಲ್‌ (ನಾಯಕ), ಸಮಿತ್‌ ಗೋಹೆಲ್‌, ಪ್ರಿಯಾಂಕ್‌ ಪಾಂಚಾಲ್‌, ಭಾರ್ಗವ್‌ ಮಿರೈ, ಮನ್‌ಪ್ರೀತ್‌ ಜುನೇಜ, ರುಜುಲ್‌ ಭಟ್‌, ಚಿರಾಗ್‌ ಗಾಂಧಿ, ರುಶ್‌ ಕಲಾರಿಯ, ರುದ್ರಪ್ರತಾಪ್‌ ಸಿಂಗ್‌, ಮೆಹುಲ್‌ ಪಟೇಲ್‌/ಚಿಂತನ್‌ ಗಾಜ, ಹಾರ್ದಿಕ್‌ ಪಟೇಲ್‌.

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

1-man

Gael Monfils;  35ನೇ ಎಟಿಪಿ ಫೈನಲ್‌

1-a-manga

ಸೌತ್‌ ಏಷ್ಯಾ ಮಾಸ್ಟರ್  ಆ್ಯತ್ಲೆಟಿಕ್ಸ್‌  ಆರಂಭ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.