‘ತೂಕ ಹೆಚ್ಚಿಸಿಕೊ…’: ಚಹಲ್‌ಗೆ ಯುವಿ ಬರ್ತ್‌ಡೇ ವಿಶ್
Team Udayavani, Jul 24, 2020, 6:51 AM IST
ಹೊಸದಿಲ್ಲಿ: ಟೀಮ್ ಇಂಡಿಯಾದ ಹಾಸ್ಯ ಸ್ವಭಾವದ ಆಟಗಾರರಲ್ಲಿ ಯಜುವೇಂದ್ರ
ಚಹಲ್‌ಗೆ ಅಗ್ರಸ್ಥಾನ.
ಲಘು ಧಾಟಿಯ ಜೋಕ್ ವೀಡಿಯೊಗಳ ಮೂಲಕವೂ ಚಹಲ್ ಸದಾ ಸುದ್ದಿಯಲ್ಲಿರುತ್ತಾರೆ.
ಯಾರೇನೇ ಹೇಳಿದರೂ ನಗುತ್ತಲೇ ಸ್ವೀಕರಿಸುವುದು ಈ ಲೆಗ್‌ಸ್ಪಿನ್ನರ್‌ನ ಸ್ವಭಾವ. ಆದ್ದರಿಂದಲೇ ಇರಬೇಕು, ಗುರುವಾರದ ಅವರ 30ನೇ ಹುಟ್ಟುಹಬ್ಬಕ್ಕೆ ಎಲ್ಲರೂ ಕಾಲೆಳೆಯುತ್ತಲೇ ಶುಭ ಹಾರೈಸಿದ್ದಾರೆ!
ಇವರಲ್ಲಿ ಯುವರಾಜ್ ಸಿಂಗ್ ಮತ್ತು ರೋಹಿತ್ ಶರ್ಮ ಅವರ ಟ್ವೀಟ್ ಬಹಳ ತಮಾಷೆಯಿಂದ ಕೂಡಿದೆ.
ಯುವರಾಜ್ ಅವರಂತೂ ಚಹಲ್ ಅವರನ್ನು ‘ಚೂಹಾ’ (ಇಲಿ) ಎಂದು ಅಣಕಿಸಿದ್ದಾರೆ. ಸ್ವಲ್ಪ ತೂಕ ಹೆಚ್ಚಿಸಿಕೊಂಡು ದಪ್ಪಗಾಗು ಎಂಬ ಸಲಹೆಯನ್ನೂ ನೀಡಿದ್ದಾರೆ.
‘ನಿಮ್ಮನ್ನು ಯುಝಿ ಚಹಲ್ ಅಥವಾ ಮಿಸ್ಟರ್ ಚೂಹಾ ಎಂದು ಕರೆಯಬಹುದೇ? ನಿಮಗೆ ಜನ್ಮದಿನದ ವಿಶೇಷ ಶುಭಾಶಯಗಳು. ದಯವಿಟ್ಟು ಸ್ವಲ್ಪ ತೂಕ ಹೆಚ್ಚಿಸಿಕೊಂಡು ನಮ್ಮನ್ನೆಲ್ಲ ಫನ್ನಿ ವೀಡಿಯೋಗಳ ಮೂಲಕ ಮನರಂಜಿಸುತ್ತ ಇರಿ…’ ಎಂದು ಯುವಿ ಶುಭ ಹಾರೈಸಿದ್ದಾರೆ.
ರೋಹಿತ್ ಶರ್ಮ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಹಲ್ ಅವರನ್ನು ‘ಗೋಟ್’ (ಮೇಕೆ ಅಲ್ಲ, ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’!) ಎಂದು ಪ್ರಶಂಸಿಸಿ ಶುಭ ಕೋರಿದ್ದಾರೆ. ಕುಲದೀಪ್ ಪಾಲಿಗೆ ಚಹಲ್ ‘ಕ್ರೈಂ ಪಾರ್ಟ್ನರ್’ ಆಗಿದ್ದಾರೆ!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.