ಗಾಲೆ ಕ್ರಿಕೆಟ್ ಸ್ಟೇಡಿಯಂ ನೆಲಸಮ?
Team Udayavani, Jul 23, 2018, 11:44 AM IST
ಗಾಲೆ: ನೂರಾರು ಕ್ರಿಕೆಟ್ ಪಂದ್ಯಗಳಿಗೆ ಸಾಕ್ಷಿಯಾಗಿರುವ ಶ್ರೀಲಂಕಾದ ಸುಂದರ ಗಾಲೆ ಕ್ರಿಕೆಟ್ ಸ್ಟೇಡಿಯಂ ನೆಲಸಮವಾಗುವ ದಟ್ಟ ಸಾಧ್ಯತೆಯಿದೆ. ಈ ಮೈದಾನದಲ್ಲಿ ಅನಧಿಕೃತ 500 ಆಸನಗಳ ಪೆವಿಲಿ ಯನ್ ಸ್ಟಾಂಡ್ ನಿರ್ಮಾಣ ಮಾಡಲಾಗಿದೆ. ಇದರಿಂದ 17ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಡಚ್ ಕೋಟೆಯೊಂದರ ನೋಟಕ್ಕೆ ಸಮಸ್ಯೆಯಾಗಲಿದೆ. ಇದೇ ಈಗ ಗಾಲೆ ಮೈದಾನಕ್ಕೆ ಕಂಟಕವಾಗಿರುವುದು!
ಶ್ರೀಲಂಕಾ ರಾಜಧಾನಿ ಕೊಲಂಬೊ ದಿಂದ 119 ಕಿ.ಮೀ. ದೂರದಲ್ಲಿ ಗಾಲೆ ನಗರವಿದೆ. ಇಲ್ಲಿ ನಿರ್ಮಾಣವಾಗಿರುವ ಕ್ರಿಕೆಟ್ ಸ್ಟೇಡಿಯಂ ಹಿಂದೂ ಮಹಾ ಸಾಗರದ ಸನಿಹದಲ್ಲಿದೆ. ಇದೇ ನಗರದಲ್ಲಿ ಡಚ್ ನಿರ್ಮಾಣದ ಕೋಟೆಯಿದೆ. ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಯುನೆಸ್ಕೊ ಘೋಷಿಸಿದೆ. ಕ್ರಿಕೆಟ್ ಮೈದಾನದಲ್ಲಿ ಪೆವಿಲಿಯನ್ ಸ್ಟಾಂಡ್ ನಿರ್ಮಾಣ ಗೊಂಡಿರುವುದರಿಂದ ಡಚ್ ಕೋಟೆಯನ್ನು ನೋಡಲು ಅಡ್ಡಿಯಾಗಿದೆ. ಆದ್ದರಿಂದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಿಂದ ಡಚ್ ಕೋಟೆಯನ್ನು ಕೈಬಿಡುವುದಾಗಿ ಯುನೆಸ್ಕೊ ಹೇಳಿದೆ. ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಬೇಕೆನಿಸಿದರೆ ಕ್ರಿಕೆಟ್ ಸ್ಟೇಡಿಯಂ ನೆಲಸಮವಾಗಬೇಕು, ಇಲ್ಲವಾ ದರೆ ಮಾನ್ಯತೆಯನ್ನು ಬಿಟ್ಟುಬಿಡಬೇಕು ಎನ್ನುವ ಸ್ಥಿತಿ ಶ್ರೀಲಂಕಾ ಸರಕಾರದ್ದು.
ನೂತನ ಸ್ಟೇಡಿಯಂ?
ಈ ಸ್ಥಿತಿಯನ್ನು ಶ್ರೀಲಂಕಾ ಸರಕಾರ ಪರಿಶೀಲಿಸುತ್ತಿದೆ. ವಿಶ್ವ ಪಾರಂಪರಿಕ ಸ್ಥಾನವನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿರುವುದರಿಂದ ಸುಂದರ ಗಾಲೆ ಕ್ರಿಕೆಟ್ ಸ್ಟೇಡಿಯಂ ನೆಲಕ್ಕುರುಳಲಿದೆ. ಇದರರ್ಥ ನ. 6ರಿಂದ 10ವರೆಗೆ ನಡೆಯುವ ಟೆಸ್ಟ್ ಪಂದ್ಯವೇ ಗಾಲೆಗೆ ಕೊನೆಯೆನಿಸಲಿದೆ. ಇದರ ಬದಲು ನೂತನ ಸ್ಟೇಡಿಯಂನಿರ್ಮಾಣ ಮಾಡುವ ಉದ್ದೇಶವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.