ಗಾಲೆ ಟೆಸ್ಟ್ : ಶ್ರೀಲಂಕಾ 494 ಆಲೌಟ್
Team Udayavani, Mar 9, 2017, 12:11 PM IST
ಗಾಲೆ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡ 494 ರನ್ ಗಳಿಸಿ ಆಲೌಟಾಗಿದೆ.
ಇದಕ್ಕುತ್ತರವಾಗಿ ಬಾಂಗ್ಲಾದೇಶ 2ನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ಕಳೆದು ಕೊಂಡಿದ್ದು 133 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿ ಸಲು ಬಾಂಗ್ಲಾದೇಶ ಇನ್ನುಳಿದ 8 ವಿಕೆಟ್ ನೆರವಿನಿಂದ 361 ರನ್ ಗಳಿಸಬೇಕಾಗಿದೆ.
ಬಾಂಗ್ಲಾದ ಆರಂಭ ಉತ್ತಮ ವಾಗಿತ್ತು. ಆರಂಭಿಕರಾದ ತಮಿಮ್ ಇಕ್ಬಾಲ್ ಮತ್ತು ಸೌಮ್ಯ ಸರ್ಕಾರ್ ಮೊದಲ ವಿಕೆಟಿಗೆ 118 ರನ್ ಪೇರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ ದಿನ ದಾಟದ ಅಂತಿಮ ಅವಧಿಯಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ತಮಿಮ್ ಇಕ್ಬಾಲ್ ರನೌಟ್ ಆದರೆ ಮೊಮಿನುಲ್ ಹಕ್ ಎಲ್‌ಬಿ ಬಲೆಗೆ ಬಿದ್ದರು. 66 ರನ್ ಗಳಿಸಿದ ಸೌಮ್ಯ ಸರ್ಕಾರ್ ಆಡುತ್ತಿದ್ದಾರೆ.
4 ವಿಕೆಟಿಗೆ 321 ರನ್ನುಗಳಿಂದ ದಿನ ದಾಟ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಕುಸಲ್ ಮೆಂಡಿಸ್, ನಿರೋಶಾನ್‌ಡಿಕ್ವೆಲ್ಲ
ಮತ್ತು ದಿಲುವಾನ್ ಪೆರೆರ ಆಸರೆಯಾಗಿ ನಿಂತರು. ಈ ಮೂವರ ಉತ್ತಮ ಆಟ ದಿಂದಾಗಿ ಶ್ರೀಲಂಕಾ ಬೃಹತ್ ಮೊತ್ತ ಪೇರಿಸುವಂತಾಯಿತು.
166 ರನ್ನಿನಿಂದ ದಿನದಾಟ ಮುಂದು ವರಿಸಿದ ಮೆಂಡಿಸ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ 194 ರನ್ ಗಳಿಸಿ ಔಟಾದರು. ಆರು ರನ್ನಿ ನಿಂದ ದ್ವಿಶತಕ ಬಾರಿಸಲು ಅವರು ವಿಫಲ ರಾದರು. ಆದರೆ ತನ್ನ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯನ್ನು ಉತ್ತಮ ಪಡಿಸಿ ಕೊಳ್ಳಲು ಅವರು ಯಶಸ್ವಿಯಾದರು. ಹಿಂದಿನ ಅವರ ಶ್ರೇಷ್ಠ ನಿರ್ವಹಣೆ 176 ರನ್ ಆಗಿತ್ತು. 285 ಎಸೆತ ಎದುರಿಸಿದ ಅವರು 19 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿದ್ದರು. ಮೆಂಡಿಸ್ ಅವರಿಗೆ ಉಪಯುಕ್ತ ಬೆಂಬಲ ನೀಡಿದ ಡಿಕ್ವೆಲ್ಲ 75 ರನ್ ಹೊಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.