ಗಾಲೆ ಟೆಸ್ಟ್: ಲಂಕೆಗೆ 462 ರನ್ ಸವಾಲು
Team Udayavani, Nov 9, 2018, 1:11 PM IST
ಗಾಲೆ: ರಂಗನ ಹೆರಾತ್ ಅವರ ವಿದಾಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಗೆಲುವಿಗಾಗಿ 462 ರನ್ನುಗಳ ಕಠಿನ ಗುರಿ ಪಡೆದಿದೆ. ಪ್ರವಾಸಿ ಇಂಗ್ಲೆಂಡ್ ಎದುರಿನ ಈ ಮುಖಾಮುಖೀ ಇನ್ನೂ 2 ದಿನ ಕಾಣಲಿಕ್ಕಿದ್ದು, ಹೆರಾತ್ ಅವರಿಗೆ ಲಂಕಾ ಗೆಲುವಿನ ಉಡುಗೊರೆ ನೀಡೀತೇ ಎಂಬುದೊಂದು ಕುತೂಹಲ.
ಆರಂಭಕಾರ ಕೀಟನ್ ಜೆನ್ನಿಂಗ್ಸ್ ಅವರ ಜೀವನಶ್ರೇಷ್ಠ ಬ್ಯಾಟಿಂಗ್ ಸಾಹಸದಿಂದ ಇಂಗ್ಲೆಂಡ್ 6ಕ್ಕೆ 322 ರನ್ ಗಳಿಸಿ ದ್ವಿತೀಯ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಗುರುವಾರದ ಕೊನೆಯ ಅವಧಿಯಲ್ಲಿ 7 ಓವರ್‌ಗಳ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ವಿಕೆಟ್ ನಷ್ಟವಿಲ್ಲದೆ 15 ರನ್ ಮಾಡಿದೆ.
ಜೆನ್ನಿಂಗ್ಸ್ ಅಜೇಯ 146
13ನೇ ಟೆಸ್ಟ್ ಆಡುತ್ತಿರುವ ಎಡಗೈ ಆರಂಭಕಾರ ಕೀಟನ್ ಜೆನ್ನಿಂಗ್ಸ್ ಅಜೇಯ 146 ರನ್ ಬಾರಿಸಿದರು. ಇದು ಅವರ 2ನೇ ಶತಕ ಹಾಗೂ ಅತ್ಯುತ್ತಮ ಬ್ಯಾಟಿಂಗ್ ಸಾಧನೆ. 280 ಎಸೆತ ಎದುರಿಸಿದ ಜೆನ್ನಿಂಗ್ಸ್ 9 ಬೌಂಡರಿ ಹೊಡೆದರು. ಬೆನ್ ಸ್ಟೋಕ್ಸ್ 62, ಜಾಸ್ ಬಟ್ಲರ್ 35 ಹಾಗೂ ಬೆನ್ ಫೋಕ್ಸ್ 37 ರನ್ ಹೊಡೆದರು. ಜೆನ್ನಿಂಗ್ಸ್- ಸ್ಟೋಕ್ಸ್ 4ನೇ ವಿಕೆಟ್ ಜತೆಯಾಟದಲ್ಲಿ 107 ರನ್ ಒಟ್ಟುಗೂಡಿಸಿದರು.
ವಿಕೆಟ್ ನಷ್ಟವಿಲ್ಲದೆ 38 ರನ್ ಮಾಡಿದಲ್ಲಿಂದ ಇಂಗ್ಲೆಂಡ್ 3ನೇ ದಿನನಾಟ ಮುಂದುವರಿಸಿತ್ತು. ಮೊಯಿನ್ ಅಲಿ ಮತ್ತು ನಾಯಕ ಜೋ ರೂಟ್ ತಲಾ 3 ರನ್ ಗಳಿಸಿ ಬೇಗನೇ ಪೆವಿಲಿಯನ್ ಸೇರಿಕೊಂಡ ಬಳಿಕ ಕ್ರೀಸಿಗೆ ಅಂಟಿಕೊಂಡ ಜೆನ್ನಿಂಗ್ಸ್ ಜಬರ್ದಸ್ತ್ ಬ್ಯಾಟಿಂಗ್ ಪ್ರದರ್ಶನವಿತ್ತರು. 231 ಎಸೆತಗಳಲ್ಲಿ ಅವರ ಶತಕ ಪೂರ್ತಿಗೊಂಡಿತು. ಶ್ರೀಲಂಕಾ ಪರ ದಿಲ್ರುವಾನ್ ಪೆರೆರ ಮತ್ತು ರಂಗನ ಹೆರಾತ್ ತಲಾ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್-342 ಮತ್ತು 6 ವಿಕೆಟಿಗೆ ಡಿಕ್ಲೇರ್ 322 (ಜೆನ್ನಿಂಗ್ಸ್ ಔಟಾಗದೆ 146, ಸ್ಟೋಕ್ಸ್ 62, ಫೋಕ್ಸ್ 37, ಬಟ್ಲರ್ 35, ಹೆರಾತ್ 59ಕ್ಕೆ 2, ಪೆರೆರ 94ಕ್ಕೆ 2). ಶ್ರೀಲಂಕಾ-203 ಮತ್ತು ವಿಕೆಟ್ ನಷ್ಟವಿಲ್ಲದೆ 15 ರನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.