ನ್ಯೂಜಿಲ್ಯಾಂಡ್ ಕುಸಿತ
Team Udayavani, Aug 17, 2019, 5:09 AM IST
ಗಾಲೆ: ಗಾಲೆ ಟೆಸ್ಟ್ ಪಂದ್ಯದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸುತ್ತಿದ್ದು, ಪ್ರವಾಸಿ ನ್ಯೂಜಿಲ್ಯಾಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ತೀವ್ರ ಕುಸಿತ ಅನುಭವಿಸಿದೆ.
18 ರನ್ನುಗಳ ಅಲ್ಪ ಹಿನ್ನಡೆಗೆ ಸಿಲುಕಿದ ನ್ಯೂಜಿಲ್ಯಾಂಡ್, 3ನೇ ದಿನದಾಟದ ಕೊನೆಗೆ 7 ವಿಕೆಟ್ ಕಳೆದುಕೊಂಡು 195 ರನ್ ಮಾಡಿತ್ತು. ಸದ್ಯದ ಲೀಡ್ 177 ರನ್. ಈ ಮುನ್ನಡೆಯನ್ನು 250ರ ತನಕ ವಿಸ್ತರಿಸಲು ಯಶಸ್ವಿಯಾದರೆ ವಿಲಿಯಮ್ಸನ್ ಪಡೆ ಗೆಲುವಿನ ನಿರೀಕ್ಷೆಯಲ್ಲಿರಬಹುದು. ಸದ್ಯ 63 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿರುವ ವಿಕೆಟ್ ಕೀಪರ್ ಬ್ರಾಡ್ಲಿ ವಾಟಿÉಂಗ್ ಕಿವೀಸ್‌ಗೆ ಆಸರೆಯಾಗಿ ನಿಂತಿದ್ದಾರೆ.
ನ್ಯೂಜಿಲ್ಯಾಂಡಿನ 249 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ಶ್ರೀಲಂಕಾ 267 ರನ್ ಮಾಡಿತು. ನಿರೋಷನ್ ಡಿಕ್ವೆಲ್ಲ (61) ಮತ್ತು ಸುರಂಗ ಲಕ್ಮಲ್ (40) ಕೊನೆಯ ಹಂತದಲ್ಲಿ ಉತ್ತಮ ಜತೆಯಾಟವೊಂದನ್ನು ನಡೆಸಿ ಲಂಕೆಗೆ ಲೀಡ್ ಕೊಡಿಸುವಲ್ಲಿ ಯಶಸ್ವಿಯಾದರು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎಡಗೈ ಸ್ಪಿನ್ನರ್ ಲಸಿತ್ ಎಂಬುಲೆªàನಿಯ ಪ್ರವಾಸಿಗರಿಗೆ ಬಿಸಿ ಮುಟ್ಟಿಸಿದ್ದಾರೆ. ಲಸಿತ್ ಸಾಧನೆ 71ಕ್ಕೆ 4 ವಿಕೆಟ್.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲ್ಯಾಂಡ್-249 ಮತ್ತು 7 ವಿಕೆಟಿಗೆ 195 (ಬಾಟಿÉಂಗ್ ಬ್ಯಾಟಿಂಗ್ 63, ಲ್ಯಾಥಂ 45, ನಿಕೋಲ್ಸ್ 26, ಸೌಥಿ 23, ಎಂಬುಲೆನಿಯ 71ಕ್ಕೆ 4, ಧನಂಜಯ 16ಕ್ಕೆ 2). ಶ್ರೀಲಂಕಾ-267 (ಡಿಕ್ವೆಲ್ಲ 61, ಮೆಂಡಿಸ್ 53, ಮ್ಯಾಥ್ಯೂಸ್ 50, ಲಕ್ಮಲ್ 40, ಅಜಾಜ್ ಪಟೇಲ್ 89ಕ್ಕೆ 5, ಸೋಮರ್‌ವಿಲ್ಲೆ 83ಕ್ಕೆ 3,
ಬೌಲ್ಟ್ 45ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australian Open: ಹಿಂದೆ ಸರಿದ ಸಿಮೋನಾ ಹಾಲೆಪ್
South Africa vs Pakistan 2nd Test: ಬಾಶ್ ದಾಖಲೆ: ದ. ಆಫ್ರಿಕಾ ಮುನ್ನಡೆ
Melbourne Cricket Club; ಸಚಿನ್ ತೆಂಡುಲ್ಕರ್ಗೆ ಗೌರವ ಸದಸ್ಯತ್ವ
Boxing: ವಿಶ್ವ ಬಾಕ್ಸಿಂಗ್ ಸಂಸ್ಥೆಯಿಂದ ಮಧ್ಯಂತರ ಏಷ್ಯನ್ ಮಂಡಳಿ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್ಸ್ವೀಪ್ ಮಾಡಿದ ವನಿತೆಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.