ಸೈನಿ”ವಿರೋಧಿ’ಗಳನ್ನು ಬೆಂಡೆತ್ತಿದ ಗಂಭೀರ್!
Team Udayavani, Aug 5, 2019, 5:51 AM IST
ಹೊಸದಿಲ್ಲಿ: ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, ಅದ್ಭುತ ಯಶಸ್ಸು ಪಡೆದ ಭಾರತ ತಂಡದ ನೂತನ ವೇಗದ ಬೌಲರ್ ನವದೀಪ್ ಸೈನಿ ಬಗ್ಗೆ ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆ ಜೋರಾಗಿದೆ. ಇವೆಲ್ಲದರ ನಡುವೆ ಗೌತಮ್ ಗಂಭೀರ್ ಮಾಜಿ ಕ್ರಿಕೆಟಿಗರಾದ ಬಿಷನ್ ಸಿಂಗ್ ಬೇಡಿ, ಚೇತನ್ ಚೌಹಾಣ್ ಅವರನ್ನು ಕಟುವಾಗಿ ಟೀಕಿಸಿದ್ದು ಭರ್ಜರಿ ಸುದ್ದಿಯಾಗಿದೆ.
2013ರವರೆಗೆ ನವದೀಪ್ ಸೈನಿ ಒಬ್ಬ ಟೆನಿಸ್ ಚೆಂಡಿನ ಕ್ರಿಕೆಟಿಗ. ಆ ಸಂದರ್ಭದಲ್ಲಿ ಅವರು ಗಂಭೀರ್ ಗಮನಕ್ಕೆ ಬಂದರು. ಕೆಲವೇ ತಿಂಗಳಲ್ಲಿ ದಿಢೀರನೆ ದಿಲ್ಲಿ ರಣಜಿ ತಂಡಕ್ಕೆ ಆಯ್ಕೆಯಾದರು. ಆಗ ದಿಲ್ಲಿ ಕ್ರಿಕೆಟ್ ಮಂಡಳಿ ಸದಸ್ಯರಾಗಿದ್ದ ಬೇಡಿ ಮತ್ತು ಚೌಹಾಣ್ ಈ ಕ್ರಮವನ್ನು ವಿರೋಧಿಸಿದ್ದರು. ಸೈನಿ ಬೆಂಬಲಕ್ಕೆ ಗಂಭೀರ್ ಬಲವಾಗಿ ನಿಂತ ಪರಿಣಾಮ ಅವರು ಈಗ ಭಾರತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮಾತ್ರವಲ್ಲ ಮೊದಲನೇ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸಿದ್ದಾರೆ.
ಗೌತಮ್ ಗಂಭೀರ್ ಟ್ವೀಟ್: “ಸೈನಿಗೆ ಅಭಿನಂದನೆಗಳು. ನೀವು ಬೌಲಿಂಗ್ ಮಾಡುವ ಮುನ್ನವೇ ಬಿಷನ್ ಸಿಂಗ್ ಬೇಡಿ, ಚೇತನ್ ಚೌಹಾಣ್ ಅವರನ್ನು ಬೌಲ್ಡ್ ಮಾಡಿ 2 ವಿಕೆಟ್ ಕಿತ್ತಾಗಿತ್ತು. ನಿಮ್ಮ ಅಂತಾರಾಷ್ಟ್ರೀಯ ಪ್ರವೇಶ ನೋಡಿ ಅವರ ಮಿಡ್ಲ್ ವಿಕೆಟ್‌ಗಳು ಹಾರಿ ಹೋಗಿವೆ. ಇವರೆಲ್ಲ, ನೀವು ಮೈದಾನ ಪ್ರವೇಶಿಸುವ ಮುನ್ನವೇ ನಿಮ್ಮ ಚರಮಗೀತೆ ಬರೆದಿದ್ದರು. ಅವರಿಗೆ ನಾಚಿಕೆಯಾಗಬೇಕು’ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ಬೇಡಿ ಮರುತ್ತರ
ಗಂಭೀರ್ ಟ್ವೀಟ್‌ಗೆ ಬೇಡಿ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ಗೆಲ್ಲಬೇಕೆಂದರೆ ತೀರಾ ಕೀಳು ಮಟ್ಟಕ್ಕಿಳಿಯ ಬೇಕೆನ್ನುವುದರಲ್ಲಿ ನನಗೆ ನಂಬಿಕೆಯಿಲ್ಲ. ಟ್ವಿಟರ್ ಟೀಕೆಗಳಿಗೆ ಪ್ರತಿಕ್ರಿಯಿಸದಿರುವುದೇ ಮೇಲು. ನವದೀಪ್ ಸೈನಿ ಬಗ್ಗೆ ನಾನು ನಕಾರಾತ್ಮಕವಾಗಿ ಏನನ್ನೂ ಹೇಳಿಲ್ಲ. ಯಾರಾದರೂ ಏನಾದರೂ ಸಾಧಿಸಿದ್ದರೆ ಅದು ಅವರ ಸಾಧನೆಯೇ ಹೊರತು ಯಾರೋ ಎಂಕ, ಸೀನ, ನಾಣಿಯದ್ದಲ್ಲ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.