ಗೇಮ್ಸ್ ಟೇಬಲ್ ಟೆನಿಸ್: ಭಾರತ ಭರ್ಜರಿ ಆರಂಭ
Team Udayavani, Jul 29, 2022, 11:00 PM IST
ಬರ್ಮಿಂಗ್‌ಹ್ಯಾಮ್: ಗೇಮ್ಸ್ ಟೇಬಲ್ ಟೆನಿಸ್‌ನಲ್ಲಿ ಭಾರತದ ವನಿತಾ ಮತ್ತು ಪುರುಷರ ತಂಡಗಳೆರಡೂ ಭರ್ಜರಿ ಆರಂಭ ಪಡೆದಿವೆ. ವನಿತೆಯರ ಲೀಗ್ ಹಂತದ ತಂಡ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ಭಾರತ 2ನೇ ವಿಭಾಗದ ಮೊದಲ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾವನ್ನು 3-0 ಅಂತರದಿಂದ ಕೆಡವಿತು. ಬಳಿಕ ಫಿಜಿ ವಿರುದ್ಧ ಹೋರಾಟ ನಡೆಸಲಿದೆ.
ಡಬಲ್ಸ್ ಪಂದ್ಯದಲ್ಲಿ ಶ್ರೀಜಾ ಅಕುಲಾ-ರೀತ್ ಟೆನ್ನಿಸನ್ ಸೇರಿಕೊಂಡು ಲೈಲಾ ಎಡ್ವರ್ಡ್ಸ್-ದಾನಿಶಾ ಪಟೇಲ್ ವಿರುದ್ಧ 11-7, 11-7, 11-5 ಅಂತರದ ಗೆಲುವು ಸಾಧಿಸಿತು.
ಸಿಂಗಲ್ಸ್‌ನಲ್ಲಿ ಮಣಿಕಾ ಬಾತ್ರಾ 11-5, 11-3, 11-2ರಿಂದ ಮುಶ್ಫಿಕ್ ಕಲಾಂ ಅವರಿಗೆ ಸೋಲುಣಿಸಿದರು. ಬಳಿಕ ದಾನಿಶಾ ಪಟೇಲ್ ವಿರುದ್ಧ ಶ್ರೀಜಾ ಅಕುಲ್ ಕೂಡ 3-0 ಜಯ ಸಾಧಿಸಿದರು (11-5, 11-3, 11-6).
ಪುರುಷರಿಗೆ 3-0 ಜಯ
ಪುರುಷರ ಗ್ರೂಪ್ 3 ಸ್ಪರ್ಧೆಯಲ್ಲಿ ಭಾರತ 3-0 ಅಂತರದಿಂದ ಬಾರ್ಬಡಾಸ್ ತಂಡವನ್ನು ಮಗುಚಿತು. ಡಬಲ್ಸ್‌ನಲ್ಲಿ ಹರ್ಮೀತ್ ದೇಸಾಯಿ-ಜಿ. ಸಥಿಯನ್ ಸೇರಿಕೊಂಡು ಕೆವಿನ್ ಫಾರ್ಲಿ-ಟೈಯರ್ ನೈಟ್ ಅವರನ್ನು 11-9, 11-9, 11-4 ಅಂತರದಿಂದ ಪರಾಭವಗೊಳಿಸಿದರು. ಬಳಿಕ ಅಚಂತ ಶರತ್ ಕಮಲ್ ಮತ್ತು ಜಿ. ಸಥಿಯನ್ ಅವರು ಕ್ರಮವಾಗಿ ರಮೋನ್ ಮ್ಯಾಕ್ಸ್‌ವೆಲ್ ಮತ್ತು ಟೈಯರ್ ನೈಟ್ ಅವರನ್ನು 3-0 ಅಂತರದಿಂದ ಕೆಡವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.