Team India ಫುಟ್‌ಬಾಲ್ ಕೋಚ್ ಸ್ಟಿಮ್ಯಾಕ್‌ಗೆ ಗೇಟ್‌ಪಾಸ್
Team Udayavani, Jun 17, 2024, 11:40 PM IST
ಹೊಸದಿಲ್ಲಿ: ಭಾರತೀಯ ಪುರುಷರ ಫುಟ್‌ಬಾಲ್ ತಂಡದ ಮುಖ್ಯ ಕೋಚ್ ಐಗರ್ ಸ್ಟಿಮ್ಯಾಕ್ ಅವರನ್ನು ಅಖೀಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್ಎಫ್) ಈ ಸ್ಥಾನದಿಂದ ಕೆಳಗಿಳಿಸಿದೆ. ಕಳೆದ ಸೋಮವಾರ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕತಾರ್ ವಿರುದ್ಧ ಭಾರತ 2-1 ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಇದರ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದೆ.
ಸ್ಟಿಮ್ಯಾಕ್ ಮುಂದಾಳತ್ವದಲ್ಲಿ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ನಮ್ಮವರ ಪ್ರದರ್ಶನ ಭಾರತೀಯ ಫುಟ್‌ಬಾಲ್ ಫೆಡರೇಶನ್‌ಗೆ ತೃಪ್ತಿ ನೀಡಿಲ್ಲ. ಈ ಕಾರಣಕ್ಕೆ ಕ್ರೊವೇಶಿಯಾದ ಮಾಜಿ ಫುಟ್ಬಾಲಿಗನನ್ನು ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.