ಇಂಡಿಯನ್ ನ್ಯಾಷನಲ್ ರ್ಯಾಲಿ: ಗಿಲ್ಗೆ ದಿನದ ಗೌರವ
Team Udayavani, Dec 21, 2019, 11:34 PM IST
ಕೊಟ್ಟಾಯಂ: ಭಾರತದ ಖ್ಯಾತ ಕಾರ್ ರೇಸ್ ಚಾಲಕ ಜೆಕೆ ಟಯರ್ ತಂಡದ ಗೌರವ್ ಗಿಲ್ ಶುಕ್ರವಾರ ಇಂಡಿಯನ್ ನ್ಯಾಷನಲ್ ಕಾರ್ ರ್ಯಾಲಿ ಚಾಂಪಿಯನ್ಶಿಪ್ನಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದ್ದಾರೆ. ಮೊದಲ ದಿನ ಮೊದಲ ಸ್ಥಾನ ಪಡೆದು ದಿನದ ಗೌರವ ಪಡೆದಿದ್ದಾರೆ.
ಶನಿವಾರದ ಸ್ಪರ್ಧೆಯಲ್ಲಿ ಗಿಲ್ ಅವರು ನ್ಯಾವಿಗೇಟರ್ ಮೂಸಾ ಶೆರಿಫ್ ಜತೆಗೂಡಿ ಅಪ್ರತಿಮ ಚಾಲನೆ ನಡೆಸಿದರು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ ಸಾಹಸ ಮೆರೆದ ಗಿಲ್ ಮೊದಲ 4 ಸುತ್ತಿನಲ್ಲಿ ಮೊದಲಿಗರಾಗಿ ಸ್ಪರ್ಧೆ ಮುಗಿಸುವಲ್ಲಿ ಯಶಸ್ವಿಯಾದರು. ಗಿಲ್ -ಮೂಸಾ ತಂಡ 1 ಗಂಟೆ 2 ನಿಮಿಷ 49.8 ಸೆಕೆಂಡ್ಸ್ನಲ್ಲಿ ಸವಾಲನ್ನು ಪೂರೈಸಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಜೆಕೆ ಟಯರ್ ತಂಡದ ಮತ್ತೋರ್ವ ಚಾಲಕ ಯೂನಸ್ ಇಲಿಯಾಸ್ ಹಾಗೂ ನ್ಯಾವಿಗೇಟರ್ ಹರೀಶ್ ಗೌಡ ಒಳಗೊಂಡ ತಂಡ ದ್ವಿತೀಯ ಸ್ಥಾನ ಪಡೆಯಿತು. ಅವರ ತಂಡ ಒಟ್ಟಾರೆ 1 ಗಂಟೆ 3 ನಿಮಿಷ 44.8 ಸೆಕೆಂಡ್ಸ್ನಲ್ಲಿ ಗುರಿ ಪೂರೈಸಿತು. ಸದ್ಯ 2ನೇ ಸ್ಥಾನಕ್ಕೆ ಸಮಾಧಾನಪಟ್ಟರು. ಡಾ.ಬಿಕ್ಕು ಬಾಬು ಹಾಗೂ ನ್ಯಾವಿಗೇಟರ್ ಮಿಲನ್ ಜಾರ್ಜ್ ತಂಡವು ತೃತೀಯ ಸ್ಥಾನದಲ್ಲಿದೆ. 1 ಗಂಟೆ 5 ನಿಮಿಷ 37.9 ಸೆಕೆಂಡ್ಸ್ನಲ್ಲಿ ಈ ಜೋಡಿ ಸ್ಪರ್ಧೆ ಮುಗಿಸಿತು. ಒಟ್ಟಾರೆ ಭಾನುವಾರದ ಸ್ಪರ್ಧೆಗಳು ಕುತೂಹಲ ಕೆರಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ
Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ
Thalapathy 69: ರಿಲೀಸ್ ಗೂ ಮುನ್ನ ಕೋಟಿ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ
Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.