ಫೆಲಿಕ್ಸ್ ಸ್ಟಾಮ್ ಬಾಕ್ಸಿಂಗ್: ಗೌರವ್, ಮನೀಷ್‌ಗೆ ಚಿನ್ನ
Team Udayavani, May 6, 2019, 9:56 AM IST
ವಾರ್ಸ (ಪೋಲೆಂಡ್): ಗೌರವ್ ಸೋಲಂಕಿ ಮತ್ತು ಮನೀಷ್ ಕೌಶಿಕ್ ಅವರ ಚಿನ್ನದ ಪದಕದೊಂದಿಗೆ ಭಾರತ “ಫೆಲಿಕ್ಸ್ ಸ್ಟಾಮ್ ಅಂತಾರಾಷ್ಟ್ರೀಯ ಬಾಕ್ಸಿಂಗ್’ ಕೂಟವನ್ನು 6 ಪದಕಗಳೊಂದಿಗೆ ಮುಗಿಸಿದೆ.
ಭಾರತದ ಬಾಕ್ಸರ್‌ಗಳು ಎರಡು ಚಿನ್ನ ಸಹಿತ ಒಂದು ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. 22 ವರ್ಷದ ಸೋಲಂಕಿ 52 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಇಂಗ್ಲೆಂಡ್‌ನ ವಿಲಿಯಮ್ಸ್ ಕ್ಯಾಲೆ ವಿರುದ್ಧ 5-0 ಅಂಕಗಳಿಂದ ಗೆದ್ದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
60 ಕೆ.ಜಿ. ಸ್ಪರ್ಧೆಯ ಫೈನಲ್‌ನಲ್ಲಿ ಮನೀಷ್ ಕೌಶಿಕ್ ಮೊರೊಕ್ಕೊದ ಮೊಹಮ್ಮದ್ ಹ್ಯಾಮ್‌ಔಟ್ ಅವರನ್ನು 4-1 ಅಂಕಗಳಿಂದ ಸೋಲಿಸಿ ಚಿನ್ನದ ಪದಕ ಜಯಿಸಿದರು. 56 ಕೆ.ಜಿ. ವಿಭಾಗದ ಬಾಟಮ್‌ವೇಟ್ ಸ್ಪರ್ಧೆಯ ಫೈನಲ್ ಪ್ರವೇಶಿಸಿದ್ದ ಮೊಹ್ಮಮ್ಮದ್ ಹುಸ್ಸಮುದ್ದೀನ್ 1-4 ಅಂಕಗಳ ಹಿನ್ನಡೆಯಿಂದ ರಶ್ಯದ ಮುಖಮ್ಮದ್ ಶೆಖೊವ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
3 ಕಂಚು: ಉಳಿದ ಮೂವರು ಬಾಕ್ಸರ್‌ಗಳು ತಮ್ಮ ವಿಭಾಗದ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಸೋತು ಕಂಚು ಗೆದ್ದರು. 69 ಕೆ.ಜಿ. ವಿಭಾಗದಲ್ಲಿ ಮನ್‌ದೀಪ್ ಜಂಗ್ರಾ ರಶ್ಯದ ವಡೀಮ್ ಮುಸೇವ್ ವಿರುದ್ಧ 0-5 ಅಂಕಗಳಿಂದ ಪರಾಭವಗೊಂಡರು. 91 ಕೆ.ಜಿ. ವಿಭಾಗದಲ್ಲಿ ಸಂಜೀತ್ ನ್ಯೂಜಿಲ್ಯಾಂಡ್‌ನ ಡೇವಿಡ್ ನೈಕಾ ಅವರ ಕೈಯಲ್ಲಿ ಸೋತರು. 64 ಕೆ.ಜಿ. ವಿಭಾಗದಲ್ಲಿ ಅಂಕಿತ್ ಖತಾನ್ ಭಾರೀ ಫೈಪೋಟಿ ನೀಡಿಯೂ 2-3 ಅಂತರದಿಂದ ಆತಿಥೇಯ ನಾಡಿನ ಡಾಮಿಯನ್ ಡರ್ಕಾಕ್ ವಿರುದ್ಧ ಮುಗ್ಗರಿಸಿ ಕಂಚಿನ ಪದಕ ಜಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.