ರೋಹಿತ್ ಜತೆಗೆ ಈ ಆಟಗಾರನೇ ಇನ್ನಿಂಗ್ಸ್ ಆರಂಭಿಸಲಿ: ರಾಹುಲ್ ಗೆ ಅವಕಾಶ ನೀಡದ ಗಂಭೀರ್
Team Udayavani, Dec 31, 2022, 6:06 PM IST
ಮುಂಬೈ: ಮುಂಬರುವ ವರ್ಷಗಳಲ್ಲಿ ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ಜೊತೆಗೆ ಇಶಾನ್ ಕಿಶನ್ ಭಾರತದ ಮೊದಲ ಆಯ್ಕೆಯ ಆರಂಭಿಕ ಆಟಗಾರನಾಗಬೇಕು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.
ಚಟ್ಟೋಗ್ರಾಮ್ ನಲ್ಲಿ ಬಾಂಗ್ಲಾದೇಶದ ವಿರುದ್ಧದ ತನ್ನ ಇತ್ತೀಚಿನ ಪಂದ್ಯದಲ್ಲಿ, ಕಿಶನ್ ತನ್ನ ಮೊದಲ ಏಕಿದನ ಶತಕವನ್ನೇ ದ್ವಿಶತಕವಾಗಿ ಪರಿವರ್ತಿಸಿದ್ದರು. ವಿಕೆಟ್ ಕೀಪರ್ ಬ್ಯಾಟರ್ ತನ್ನ ಏಕದಿನ ಇತಿಹಾಸದಲ್ಲಿ ಅತ್ಯಂತ ವೇಗದ ದ್ವಿಶತಕ ಬಾರಿಸಿದ್ದಾರೆ. ಈಗ ಶಿಖರ್ ಧವನ್ ಅವರನ್ನು ಏಕದಿನಗಳಲ್ಲಿ ಪರಿಗಣಿಸುತ್ತಿಲ್ಲ. ಹೀಗಾಗಿ ಇಶಾನ್ ಕಿಶನ್ ಓಪನರ್ ರೂಪದಲ್ಲಿ ಮುಂದುವರಿಸಬೇಕು ಎಂದು ಗಂಭೀರ್ ಭಾವಿಸಿದ್ದಾರೆ.
” ಚರ್ಚೆ ಮುಗಿದಿದೆ. ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಬೇಕು. ಉತ್ತಮ ಬೌಲಿಂಗ್ ದಾಳಿಯ ವಿರುದ್ಧ ಆ ಪರಿಸ್ಥಿತಿಗಳಲ್ಲಿ ದ್ವಿಶತಕ ಗಳಿಸಿದ ಆತ ಆಡಬೇಕು” ಎಂದು ಕೇಳಿದಾಗ ಗಂಭೀರ್ ಹೇಳಿದ್ದಾರೆ.
ಜನವರಿ 3 ರಿಂದ ಜನವರಿ 15 ರವರೆಗೆ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಗೆ ಕಿಶನ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:ಚಿನ್ನ, ಬೆಳ್ಳಿಯ ಆಡಂಬರದ ಹರಕೆ ಈ ದೇವರಿಗೆ ಬೇಕಾಗಿಲ್ಲ… ಭಕ್ತರಿಂದ ಬಯಸುವುದು ಮಣ್ಣಿನ ಮೂರ್ತಿಗಳನ್ನು ಮಾತ್ರ
ಸೂರ್ಯಕುಮಾರ್ ಯಾದವ್ ಅವರ 50 ಓವರ್ ಗಳ ಬ್ಯಾಟಿಂಗ್ ಅವರ T20 ಪ್ರದರ್ಶನಗಳಂತೆ ಗಮನಾರ್ಹವಲ್ಲದಿದ್ದರೂ ಸಹ, ಅವರು ಏಕದಿನದಲ್ಲಿ ನಂ. 4 ರಲ್ಲಿಆಡಬೇಕು ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ. ಸೂರ್ಯಕುಮಾರ್ 16 ಏಕದಿನಗಳಲ್ಲಿ ಕೇವಲ ಎರಡು ಅರ್ಧ ಶತಕಗಳೊಂದಿಗೆ 384 ರನ್ ಗಳಿಸಿದ್ದಾರೆ.
” ರೋಹಿತ್ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ, ವಿರಾಟ್ ಮೂರರಲ್ಲಿ, ಸೂರ್ಯ ನಾಲ್ಕರಲ್ಲಿ, ಐದರಲ್ಲಿ ಶ್ರೇಯಸ್ ಅಯ್ಯರ್ ಆಡಬೇಕು. ಅವರನ್ನು ಮೀರಿ ನೋಡುವುದು ತುಂಬಾ ಕಷ್ಟ, ಏಕೆಂದರೆ ಕಳೆದ ಒಂದೂವರೆ ವರ್ಷಗಳಲ್ಲಿ ಅವರು ನಂಬಲಾಗದಂತಹ ಫಾರ್ಮ್ ನಲ್ಲಿದ್ದಾರೆ. ಅವರಿಗೆ ಶಾರ್ಟ್ ಬಾಲ್ ಸಮಸ್ಯೆಗಳಿದ್ದರೂ, ಅವರು ಅದನ್ನು ನಿರ್ವಹಿಸಲು ಸಮರ್ಥರಾಗಿದ್ದಾರೆ. ಹಾರ್ದಿಕ್ ಪಾಂಡ್ಯ 6 ನೇ ಕ್ರಮಾಂಕದಲ್ಲಿ ಆಡಬೇಕು ಎಂದು” ಗಂಭೀರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.