ಗಂಭೀರ್ ಭಾರತ ತಂಡದಿಂದ ಹೊರಬೀಳಲು ಸಿಟ್ಟು ಕಾರಣ
Team Udayavani, Apr 29, 2018, 6:50 AM IST
ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಯೋಗ್ಯತೆಗೆ ತಕ್ಕಷ್ಟು ಮರ್ಯಾದೆ ಗಳಿಸದ ಕ್ರಿಕೆಟಿಗನೆಂದರೆ ಗೌತಮ್ ಗಂಭೀರ್ ಎಂದು ಹೇಳಲಾಗುತ್ತದೆ.
2011, 2007ರ ವಿಶ್ವಕಪ್‌ನಲ್ಲಿ ತಂಡ ಗೆಲ್ಲಲು ಗಂಭೀರ್ ಕೊಡುಗೆ ನಿರ್ಣಾಯಕವಾಗಿತ್ತು.ಆದರೂ ಅವರು ಭಾರತ ತಂಡದಿಂದ ಹೊರ ಬೀಳಲು ಕಾರಣ ಅವರ ಸ್ವಭಾವ ಎಂದು ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಆಂಗ್ಲ ಮಾಧ್ಯಮ ವೊಂದರಲ್ಲಿ ಬರೆದು ಕೊಂಡಿದ್ದಾರೆ.
ಅವರು ಭಾರತ ತಂಡದಿಂದ ಹೊರಬೀಳಲು ಮುಖ್ಯ ಕಾರಣ ಅವರಲ್ಲಿ ಹೆಚ್ಚುತ್ತಿದ್ದ ಸಿಟ್ಟು. ಅದೇ ಕಾರಣಕ್ಕೆ ನಾನವರನ್ನು ಭಾರತ ತಂಡದ ಅಮಿತಾಭ್ ಬಚ್ಚನ್ ಎಂದು ಕರೆದಿದ್ದೆ. 2011ರಲ್ಲಿ ಅವರು ಇಂಗ್ಲೆಂಡ್‌ನಲ್ಲಿ ಗಾಯಗೊಂಡಿದ್ದರು. ಅವರ ಗಾಯ ಗಂಭೀರವಲ್ಲ ಎಂದು ಸ್ಕ್ಯಾನಿಂಗ್ ವರದಿಗಳು ಹೇಳಿದ್ದವು. ಆದರೂ ಗಂಭೀರ್ ಆಡದಿರಲು ನಿರ್ಧರಿಸಿದರು. ಅದು ಅವರಿಗೆ ಋಣಾತ್ಮಕವಾಗಿ ಪರಿಣಮಿಸಿತು. ಅವರ ಜಾಗಕ್ಕೆ ಬಂದ ಶಿಖರ್ ಧವನ್ ಅತ್ಯುತ್ತಮವಾಗಿ ಆಡಿದ ನಂತರ ಗಂಭೀರ್ ಶಾಶ್ವತವಾಗಿ ಸ್ಥಾನ ಕಳೆದುಕೊಂಡರು ಎಂದು ಪಾಟೀಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.