ಕೊಹ್ಲಿ ನಾಯಕತ್ವಕ್ಕೆ ಗಾವಸ್ಕರ್ ಕಟು ಟೀಕೆ
Team Udayavani, Jul 30, 2019, 5:12 AM IST
ಮುಂಬಯಿ: ಒಂದು ಸಭೆ ಕೂಡ ನಡೆಸದೆ ಕೊಹ್ಲಿಯನ್ನೇ ನಾಯಕನನ್ನಾಗಿ ಮುಂದುವರಿಸಿದ್ದನ್ನು ಮಾಜಿ ಆಟಗಾರ ಸುನೀಲ್ ಗಾವಸ್ಕರ್ ಟೀಕಿಸಿದ್ದಾರೆ.
“ನನಗೆ ಗೊತ್ತಿರುವ ಪ್ರಕಾರ, ಕೊಹ್ಲಿ ನಾಯಕತ್ವದ ಅವಧಿ ವಿಶ್ವಕಪ್ ವರೆಗೆ ಮಾತ್ರ ಇತ್ತು. ಅನಂತರ ಆಯ್ಕೆ ಸಮಿತಿ ಒಂದು ಸಭೆ ನಡೆಸಬೇಕಿತ್ತು. ಕನಿಷ್ಠ ಐದು ನಿಮಿಷದ ಸಭೆ ನಡೆಸಿಯಾದರೂ ಪುನರಾಯ್ಕೆ ಮಾಡಬಹುದಿತ್ತು’ ಎಂದು ಗಾವಸ್ಕರ್ ಕುಟುಕಿದ್ದಾರೆ.
ಕೊಹ್ಲಿ-ರೋಹಿತ್ ನಡುವೆ ತೇಪೆಗೆ ಬಿಸಿಸಿಐ ಯತ್ನ
ಒಂದು ಕಡೆ ಕೊಹ್ಲಿ, ತನ್ನ ಮತ್ತು ರೋಹಿತ್ ನಡುವೆ ಯಾವುದೇ ಭಿನ್ನಮತವಿಲ್ಲ ಎಂದು ಹೇಳಿಕೊಂಡಿದ್ದಾರೆ. ಮತ್ತೂಂದು ಕಡೆ ಬಿಸಿಸಿಐ ಅವರಿಬ್ಬರ ನಡುವೆ ಉದ್ಭವಿಸಿದೆ ಎಂದು ಹೇಳಲಾಗಿರುವ ಭಿನ್ನಮತಕ್ಕೆ ತೇಪೆ ಹಾಕಲು ಹೊರಟಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ, ಈಗಿನ ಕಾಲದಲ್ಲಿ ಬೆಂಬಲಿಗರು ಕಣಕ್ಕೆ ಪ್ರವೇಶ ಮಾಡುವುದರಿಂದ ವಿಷಯ ವಿಷಮ ಸ್ಥಿತಿಗೆ ಹೋಗುತ್ತಿದೆ. ಇಬ್ಬರೂ ಪ್ರಬುದ್ಧರು. ಅವರಿಬ್ಬರೊಂದಿಗೆ ಮಾತುಕತೆ ನಡೆಸಿದ ಬಳಿಕ ವಿಷಯ ಹದಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malaysia Super 1000; ಸಾತ್ವಿಕ್-ಚಿರಾಗ್ ಕ್ವಾರ್ಟರ್‌ಫೈನಲಿಗೆ
Australian Open ಗ್ರ್ಯಾನ್ ಸ್ಲಾಮ್ ಟೆನಿಸ್ ಡ್ರಾ
Vijay Hazare Trophy; ರಾಜಸ್ಥಾನ, ಹರಿಯಾಣ ಕ್ವಾರ್ಟರ್ ಫೈನಲ್‌ಗೆ
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.