ವಿಶ್ವಕಪ್‌ನಲ್ಲಿ ಗೋಲು: ಸ್ಪೇನ್‌ನ ಗವಿ ಎರಡನೇ ಅತೀ ಕಿರಿಯ ಆಟಗಾರ
Team Udayavani, Nov 25, 2022, 6:38 AM IST
ದೋಹಾ: ಸ್ಪೇನ್‌ನ ಮಿಡ್ ಫೀಲ್ಡರ್ ಗವಿ ಅವರು ಕೋಸ್ಟಾರಿಕಾ ತಂಡದೆದುರಿನ “ಇ’ ಬಣದ ಪಂದ್ಯದಲ್ಲಿ ತನ್ನ ತಂಡದ ಪರ ಐದನೇ ಗೋಲು ಸಿಡಿಸಿ ಸಂಭ್ರಮಿಸಿದರಲ್ಲದೇ ವಿಶ್ವಕಪ್‌ನಲ್ಲಿ ಗೋಲು ದಾಖಲಿಸಿದ ಎರಡನೇ ಅತೀ ಕಿರಿಯ ಆಟಗಾರರೆಂಬ ಹಿರಿಮೆಗೆ ಪಾತ್ರರಾದರು. ಈ ಮೊದಲು ಬ್ರಝಿಲ್‌ಗೆ ದಿಗ್ಗಜ ಪೀಲೆ 1958ರಲ್ಲಿ ವಿಶ್ವಕಪ್‌ನಲ್ಲಿ ಗೋಲು ದಾಖಲಿಸಿದ ಅತೀ ಕಿರಿಯ ಆಟಗಾರರೆಂಬ ಗೌರವ ಸಂಪಾದಿಸಿದ್ದರು.
17ರ ಹರೆಯದ ಪೀಲೆ ಸ್ವೀಡನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಬ್ರಝಿಲ್ ತಂಡವನ್ನು ಮುನ್ನಡೆಸಿದ್ದರು. ಮಾತ್ರವಲ್ಲದೇ ವೈಯಕ್ತಿಕವಾಗಿ ಆರು ಗೋಲು ದಾಖಲಿಸಿ ಬ್ರಝಿಲ್ ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು.
18ರ ಹರೆಯದ ಗವಿ ಈ ಪಂದ್ಯದಲ್ಲಿ ಅತ್ಯಂತ ಉಪಯುಕ್ತ ಆಟಗಾರ ಗೌರವಕ್ಕೂ ಪಾತ್ರರಾಗಿದ್ದರು. ಮಾತ್ರವಲ್ಲದೇ ಅವರು ವಿಶ್ವಕಪ್‌ನಲ್ಲಿ ಗೋಲು ಹೊಡೆದ ಸ್ಪೇನ್‌ನ ಅತೀ ಕಿರಿಯ ಆಟಗಾರ ಎಂದೆನಿಸಿಕೊಂಡರು. ಈ ಮೊದಲು ಸ್ಪೇನ್‌ನ ಸೆಸ್ಕ್ ಫ್ಯಾಬ್ರಿಗಸ್ ತನ್ನ 19ರ ಹರೆಯದಲ್ಲಿ 2006ರ ಕೂಟದಲ್ಲಿ ಉಕ್ರೇನ್ ವಿರುದ್ಧ ಗೋಲು ಹೊಡೆದಿದ್ದರು.
2021ರ ನವೆಂಬರ್‌ನಲ್ಲಿ ಗವಿ ಸ್ಪೇನ್ ತಂಡವನ್ನು ಪ್ರತಿನಿಧಿಸಿದ್ದರು. ಈ ಮೂಲಕ ದೇಶವನ್ನು ಪ್ರತಿನಿಧಿಸಿದ ಅತೀ ಕಿರಿಯ ಆಟಗಾರ ಎಂದೆನಿಸಿಕೊಂಡರು. ತನ್ನ 17ನೇ ಹುಟ್ಟುಹಬ್ಬದ ಎರಡು ತಿಂಗಳ ಬಳಿಕ ಅವರು ದೇಶವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದರು. ಸ್ವಲ್ವ ತಿಂಗಳ ಬಳಿಕ ಅವರು ತನ್ನ ದೇಶದ ಪರ ಗೋಲು ಹೊಡೆದ ಅತೀ ಕಿರಿಯ ಆಟಗಾರ ಎಂಬ ಗೌರವಕ್ಕೂ ಪಾತ್ರರಾಗಿದ್ದರು.
ಸ್ಪೇನ್‌ಗೆ 7-0 ಭರ್ಜರಿ ಗೆಲುವು :
ದೋಹಾ: ಮಾಜಿ ಚಾಂಪಿ ಯನ್ ಸ್ಪೇನ್ ತಂಡವು ವಿಶ್ವಕಪ್ ಫುಟ್ ಬಾಲ್ ಕೂಟದ ಆರಂಭಿಕ ಪಂದ್ಯ ದಲ್ಲಿ ಭರ್ಜರಿ ಗೆಲುವು ದಾಖಲಿಸಿ ಶುಭಾ ರಂಭಗೈದಿದೆ. ಬುಧವಾರ ನಡೆದ “ಇ’ ಬಣದ ಪಂದ್ಯದಲ್ಲಿ ಫೆರಾನ್ ಟೊರೆಸ್ ಅವರ ಅವಳಿ ಗೋಲುಗಳ ನೆರವಿನಿಂದ ಸ್ಪೇನ್ ತಂಡವು ಕೋಸ್ಟಾರಿಕಾ ತಂಡವನ್ನು 7-0 ಗೋಲುಗಳಿಂದ ಸೋಲಿಸಿ ಸಂಭ್ರಮಿಸಿದೆ. ಈ ಮೂಲಕ ಸ್ಪೇನ್ ವಿಶ್ವಕಪ್‌ನಲ್ಲಿ 100 ಗೋಲು ಪೂರ್ತಿಗೊಳಿಸಿದ ಸಾಧನೆ ಮಾಡಿದೆ.
ಫೆರಾನ್ ಟೊರೆಸ್ ಅವರ ಅವಳಿ ಗೋಲುಗಳ ಸಹಿತ ಡ್ಯಾನಿ ಒಲ್ಮೊ, ಗವಿ, ಮಾರ್ಕೊ ಅಸೆನ್ಸಿಯೊ, ಕಾರ್ಲೋಸ್ ಸೊಲೆರ್, ಅಲ್ವಾರೊ ಮೊರಾಟ ಅವರು ದಾಖಲಿಸಿದ ಗೋಲುಗಳಿಂದ ಸ್ಪೇನ್ ಭರ್ಜರಿ ಜಯ ಕಾಣುವಂತಾಯಿತು. ಮಾತ್ರವ್ಲದೇ ವಿಶ್ವಕಪ್‌ನಲ್ಲಿ 100 ಗೋಲುಗಳ ಕ್ಲಬ್‌ಗ ಸೇರ್ಪಡೆಗೊಂಡಿತು. ಇದು ವಿಶ್ವಕಪ್‌ಗೆ 16ನೇ ಬಾರಿ ಪ್ರವೇಶ ಪಡೆದಿರುವ ಸ್ಪೇನ್ ತಂಡದ ಅತೀ ದೊಡ್ಡ ಅಂತರದ ಗೆಲುವು ಆಗಿದೆ.
ಕೋಸ್ಟಾರಿಕಾ ಕಳಪೆ ತಂಡವೆಂದು ನಾವು ಆಲೋಚಿಸುವುದಿಲ್ಲ. ನಮ್ಮ ಸಾಮರ್ಥ್ಯದಿಂದಲೇ ಈ ಗೆಲುವು ದಾಖ ಲಾಗಿದೆ. ನಾವು ಗೆಲುವಿಗೆ ಅರ್ಹರು ಕೂಡ ಎಂದು ಒಲ್ಮೊ ಹೇಳಿದ್ದಾರೆ. ನಮ್ಮ ತಂಡವು ಬಲಿಷ್ಠವಾಗಿದೆ ಮತ್ತು ಇದೇ ರೀತಿಯ ನಿರ್ವಹಣೆಯೊಂದಿಗೆ ನಾವು ಮುಂದುವರಿಯುವುದು ಅಗತ್ಯವಾಗಿದೆ ಆದರೆ ಈ ಭರ್ಜರಿ ಗೆಲುವು ನಮ್ಮ ಉತ್ಸಾಹವನ್ನು ಹೆಚ್ಚಿಸಿದೆ ಎಂದವರು ಹೇಳಿದರು.
ಸ್ಪೇನ್ ನಿಯಂತ್ರಣ:
ಪಂದ್ಯದ ಆರಂಭದಿಂದಲೇ ಸ್ಪೇನ್ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತ್ತು. ಪೆಡ್ರಿ, ಒಲ್ಮೊ, ಗವಿ ಮತ್ತು ಅಸೆನ್ಸಿಯೊ ಅವರ ಅಮೋಘ ಆಟದೆದುರು ಕೋಸ್ಟಾರಿಕಾ ಯಾವುದೇ ಹಂತದಲ್ಲೂ ಮೇಲುಗೈ ಸಾಧಿಸಲು ವಿಫಲವಾಯಿತು. ಐದನೇ ನಿಮಿಷದಲ್ಲಿ ಸ್ಪೇನ್ ಗೋಲು ಖಾತೆ ತೆರೆಯಿತು. ಪೆಡ್ರಿ ನೀಡಿದ ಉತ್ತಮ ಪಾಸನ್ನು ಒಲ್ಮೊ ಉತ್ತಮವಾಗಿ ಹೊಡೆದು ಗೋಲು ಖಾತೆ ತೆರೆದರು. ಸ್ವಲ್ಪ ಹೊತ್ತಿನಲ್ಲಿಯೇ ಅಸೆನ್ಸಿಯೊ ಅವರಿಗೆ ಗೋಲು ಹೊಡೆಯುವ ಉತ್ತಮ ಅವಕಾಶ ಸಿಕ್ಕಿತ್ತು. ಆದರೆ ಗೋಲು ಹೊಡೆಯಲು ವಿಫಲರಾದರು. ಪೆಡ್ರಿ ಈ ಪಂದ್ಯದುದ್ದಕ್ಕೂ ಅಮೋಘವಾಗಿ ಆಡಿ ಗಮನ ಸೆಳೆದರು. ಸ್ಪೇನ್‌ನ ಪ್ರತಿಯೊಂದು ದಾಳಿ ವೇಳೆ ಪೆಡ್ರಿ ಅವರ ಕೊಡುಗೆಯಿತ್ತು.
18ರ ಹರೆಯದ ಗವಿ ಕೂಡ ಈ ಪಂದ್ಯದಲ್ಲಿ ಗೋಲು ಹೊಡೆದ ಸಾಧನೆ ಮಾಡಿದರಲ್ಲದೇ ವಿಶ್ವಕಪ್‌ನಲ್ಲಿ ಗೋಲು ಹೊಡೆದ ಸ್ಪೇನ್‌ನ ಅತೀ ಕಿರಿಯ ಆಟಗಾರ ಎಂದೆನಿಸಿಕೊಂಡರು.
ಸೋಲಿನಿಂದ ತೀವ್ರ ನೋವು:
ಈ ಸೋಲಿನಿಂದ ತೀವ್ರ ನೋವಾಗಿದೆ ಎಂದು ಕೋಸ್ಟಾರಿಕಾ ತಂಡದ ಡಿಫೆಂಡರ್ ಕೆಂಡಲ್ ವಾಟ್ಸನ್ ಹೇಳಿದ್ದಾರೆ. ಇಂತಹ ಫಲಿತಾಂಶವನ್ನು ಯಾರೂ ಕೂಡ ಅನುಭವಿಸಲು ಸಾಧ್ಯವಿಲ್ಲ. ವಿಶ್ವಕಪ್‌ನಲ್ಲಿ 0-7 ಅಂತರದ ಸೋಲು ಆಘಾತವನ್ನುಂಟು ಮಾಡಿದೆ ಎಂದರು. ನಾವು ಮುಂದಿನ ಎರಡು ಪಂದ್ಯಗಳಲ್ಲಿ ಪ್ರಬಲ ಹೋರಾಟ ನೀಡಿ ಗೆಲ್ಲಲು ಪ್ರಯತ್ನಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.