ಗಿಲ್ OUT or NOT OUT? ಟಿವಿ ಅಂಪೈರ್ ವಿವಾದಾತ್ಮಕ ನಿರ್ಧಾರ; ಐಸಿಸಿ ನಿಯಮದಲ್ಲಿ ಏನಿದೆ?
Team Udayavani, Jun 11, 2023, 12:18 PM IST
ಲಂಡನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವು ಇದೀಗ ರಂಗೇರಿದೆ. ಪಂದ್ಯ ಐದನೇ ದಿನಕ್ಕೆ ಕಾಲಿಟ್ಟಿದ್ದು, ರಿಯಲ್ ಟೆಸ್ಟ್ ನಲ್ಲಿ ಗೆದ್ದು ಯಾರು ವಿಜಯ ಮಾಲೆ ತೊಡುತ್ತಾರೆ ಎನ್ನುವ ಕುತೂಹಲ ಸಮಸ್ತ ಕ್ರಿಕೆಟ್ ಅಭಿಮಾನಿಗಳಿಗೆ ಇದೆ.
ನಾಲ್ಕನೇ ದಿನದಾಟದಲ್ಲಿ ಭಾರತ ತಂಡವು 444 ರನ್ ಗಳ ಬೃಹತ್ ಗುರಿಯನ್ನು ಬೆಂಬತ್ತಿ ಭಾರತ ತಂಡ ಬ್ಯಾಟಿಂಗ್ ಆರಂಭಿಸಿತ್ತು. ತಂಡದ ಮೊತ್ತ 44 ರನ್ ಆಗಿದ್ದಾಗ ಗಿಲ್ ಬ್ಯಾಟ್ ಸವರಿದ ಬೊಲ್ಯಾಂಡ್ ಎಸೆದ ಚೆಂಡನ್ನು ಫೋರ್ತ್ ಸ್ಲಿಪ್ ನಲ್ಲಿದ್ದ ಕ್ಯಾಮರೂನ್ ಗ್ರೀನ್ ಡೈವ್ ಹೊಡೆದು ಹಿಡಿದಿದ್ದರು. ಇದೀಗ ಈ ವಿಚಾರ ದೊಡ್ಡ ವಿವಾದವಾಗಿದೆ.
ಕ್ಯಾಚ್ ಹಿಡಿದ ಗ್ರೀನ್ ಉಳಿದ ಆಟಗಾರರೊಂದಿಗೆ ಸಂಭ್ರಮಾಚರಣೆ ಮಾಡಿದರು. ಕ್ಯಾಚ್ ಹಿಡಿದ ರೀತಿ ಸ್ಪಷ್ಟವಾಗಿಲ್ಲದ ಕಾರಣ ಫೀಲ್ಡ್ ಅಂಪೈರ್ ಟಿವಿ ಅಂಪೈರ್ ಮೊರೆ ಹೋದರು. ಹಲವು ಫ್ರೇಮ್ ಗಳಲ್ಲಿ ಗ್ರೀನ್ ಕ್ಯಾಚನ್ನು ಪರಿಶೀಲಿಸಿ ನೋಡಲಾಯಿತು. ಕೆಲವು ಫ್ರೇಮ್ ಗಳಲ್ಲಿ ಗ್ರೀನ್ ಕೈಯಲ್ಲಿದ್ದ ಚೆಂಡನ್ನು ನೆಲವನ್ನು ಸ್ಪರ್ಷಿಸಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ಟಿವಿ ಅಂಪೈರ್ ಔಟ್ ನೀಡಿದರು. ಇದನ್ನು ನಂಬಲಾಗದ ಗಿಲ್ ಬೇಸರದಿಂದ ಪೆವಿಲಿಯನ್ ಗೆ ಹೆಜ್ಜೆ ಹಾಕಿದರು. ನಾನ್ ಸ್ಟ್ರೈಕರ್ ನಲ್ಲಿದ್ದ ರೋಹಿತ್ ಶರ್ಮಾ ಅಂಪೈರ್ ಜತೆಗೆ ಚರ್ಚೆ ಮಾಡುತ್ತಿದ್ದರು.
ಟಿವಿ ಅಂಪೈರ್ ಈ ನಿರ್ಧಾರ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಸೆಹವಾಗ್ ಸೇರಿ ಹಲವರು ಈ ನಿರ್ಧಾರಕ್ಕೆ ಟೀಕೆ ಮಾಡಿದ್ದಾರೆ. ಸ್ವತಃ ಗಿಲ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಔಟ್- ನಾಟೌಟ್: ನಿಯಮದಲ್ಲಿ ಏನಿದೆ?
ಕ್ರಿಕೆಟ್ ಆಟ ನೂರಾರು ನಿಯಮಗಳನ್ನು ಹೊಂದಿದ್ದರೂ ಕೆಲವು ಕಡೆ ಈ ನಿಯಮಗಳು ಗೊಂದಲ ಉಂಟು ಮಾಡುತ್ತದೆ. ಇಂತಹ ನಿರ್ಣಾಯಕ ಪುರಾವೆಗಳನ್ನು (conclusive evidence) ನೋಡುವಾಗ ಕ್ಯಾಚ್ ಬಗ್ಗೆ ಅಂಪೈರ್ ನ ವ್ಯಾಖ್ಯಾನವನ್ನು ಆಧರಿಸಿ ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಪದ್ಯದಲ್ಲಿ ಒಂದು ಫ್ರೇಮ್ ನಲ್ಲಿ ಕ್ಯಾಚ್ ತೆಗೆದುಕೊಂಡ ನಂತರ ಚೆಂಡಿನ ಕೆಳಗೆ ಬೆರಳುಗಳನ್ನು ಕಾಣಬಹುದು. ಅದರ ನಂತರದ ಒಂದು ಫ್ರೇಮ್ ನಲ್ಲಿ ಚೆಂಡು ಹುಲ್ಲು ಸ್ಪರ್ಷಿಸಿರುವಂತೆ ತೋರಿಸುತ್ತದೆ. ಚೆಂಡಿನ ಒಂದು ಭಾಗವು ಹುಲ್ಲು ಸ್ಪರ್ಶಿಸುತ್ತಿರುವಂತೆ ಕಾಣುತ್ತದೆ.
Third umpire while making that decision of Shubman Gill.
Inconclusive evidence. When in doubt, it’s Not Out #WTC23Final pic.twitter.com/t567cvGjub
— Virender Sehwag (@virendersehwag) June 10, 2023
ಆದರೆ ಟಿವಿ ಅಂಪೈರ್ ಕೆಟಲ್‌ಬರೊ ಅವರ ಪ್ರಕಾರ ಗ್ರೀನ್ ಚೆಂಡನ್ನು ಹಿಡಿದಾಗ ಎಲ್ಲಾ ಬೆರಳುಗಳಿಂದ ನಿಯಂತ್ರಣದಲ್ಲಿಟ್ಟಿದ್ದರು. ಚೆಂಡಿನ ಭಾಗ ಹುಲ್ಲಿಗೆ ತಾಗಿದರೂ ಅದನ್ನು ‘ನಾಟ್ ಔಟ್’ ಎಂದು ತೀರ್ಪು ನೀಡುವಂತಿಲ್ಲ ಎಂದು ಕ್ರಿಕೆಟ್ ಕಾನೂನುಗಳು ಹೇಳುತ್ತವೆ. ಹೀಗಾಗಿ ಈ ನಿಯಮಗಳಿಗೆ ಅಂಟಿಕೊಂಡ ಅಂಪೈರ್ ಕೆಟಲರ್ ಬರೊ ತಮ್ಮ ನಿರ್ಧಾರ ಕೈಗೊಂಡರು.
ಎಂಸಿಸಿ ನಿಯಮದ ಪ್ರಕಾರ ಔಟ್ ಎಂದರೇನು?
ಕಾನೂನಿನ ಮೂರು ಪ್ರಮುಖ ಅಂಶಗಳನ್ನು ನೋಡೋಣ:
33.2.1 ಬೌಲರ್ ಎಸೆದ ಚೆಂಡು ಅವನ/ಅವಳ ಬ್ಯಾಟ್‌ಗೆ ತಗಲಿ ನಂತರ ಅದನ್ನು ನೆಲವನ್ನು ಮುಟ್ಟುವ ಮೊದಲು ಫೀಲ್ಡರ್ ಹಿಡಿದರೆ ಸ್ಟ್ರೈಕರ್ ಕ್ಯಾಚ್ ಔಟ್ ಆಗುತ್ತಾನೆ.
33.2.2 ಚೆಂಡನ್ನು ಹಿಡಿದಿರುವ ಫೀಲ್ಡರ್ ನ ಕೈ ನೆಲಕ್ಕೆ ತಾಗಿದ್ದರೂ ಸಹ ಕ್ಯಾಚ್ ನ್ಯಾಯಯುತವಾಗಿರುತ್ತದೆ.
33.3 ಕ್ಯಾಚ್ ಮಾಡುವ ಕ್ರಿಯೆಯು ಬಾಲ್ ಮೊದಲ ಬಾರಿಗೆ ಫೀಲ್ಡರ್ ನ ಸಂಪರ್ಕಕ್ಕೆ ಬಂದಾಗಿನಿಂದ ಪ್ರಾರಂಭವಾಗುತ್ತದೆ. ಫೀಲ್ಡರ್ ಬಾಲ್ ಮತ್ತು ಅವನ/ಅವಳ ಸ್ವಂತ ಚಲನೆ ಎರಡರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆದಾಗ ಕೊನೆಗೊಳ್ಳುತ್ತದೆ.
That Cameron Green catch!#WTC23 | #AUSvIND pic.twitter.com/bL4IwCC8d6
— ICC (@ICC) June 11, 2023
ಎಂಸಿಸಿ ನಿಯಮ 33.2.2 ಪ್ರಕಾರ ಟಿವಿ ಅಂಪೈರ್ ರಿಚರ್ಡ್ ಕೆಟಲ್ ಬರೊ ಅವರು ಈ ಔಟ್ ನಿರ್ಧಾರ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಒಂದು ಸೆಕೆಂಡಿನ ನಂತರ ಹುಲ್ಲನ್ನು ಮುಟ್ಟಿದರೂ ಗ್ರೀನ್ ನ ಬೆರಳುಗಳು ಚೆಂಡಿನ ಅಡಿಯಲ್ಲಿವೆ ಎಂದು ಅವರು ಭಾವಿಸಿರಬೇಕು. ವಿಡಿಯೋದ ಪ್ರಕಾರ ಚೆಂಡು ಗ್ರೀನ್ ಬೆರಳ ಮೇಲೆ ಇತ್ತು, ಇದೇ ಸಂದರ್ಭದಲ್ಲಿ ಚೆಂಡಿನ ಒಂಚೂರು ಭಾಗ ನೆಲವನ್ನು ಸ್ಪರ್ಷಿಸಿತ್ತು. ಎಂಸಿಸಿ ಕಾನೂನು ಪುಸ್ತಕದಲ್ಲಿ ಇದರ ಬಗ್ಗೆ ಯಾವುದೇ ನಿಯಮವಿಲ್ಲ. ಈ ಸಮಯದಲ್ಲಿ ಅಂಪೈರ್ ಆ ಸಂದರ್ಭವನ್ನು ಹೇಗೆ ನೋಡುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಕೆಟಲ್ ಬರೊ ಅವರ ಪ್ರಕಾರ ಈ ಸಂದರ್ಭದಲ್ಲಿ, ಕ್ಯಾಚ್ ತೆಗೆದುಕೊಂಡ ನಂತರವೂ ಚೆಂಡನ್ನು ಹುಲ್ಲನ್ನು ಸ್ಪರ್ಶಿಸಿರುವುದು ಎಂದರೆ ಚೆಂಡು ನೆಲಕ್ಕೆ ತಾಗಿದೆ ಎಂದು ಅರ್ಥವಲ್ಲ.
ಅಂತಹ ನಿರ್ಧಾರಗಳನ್ನು ಒಪ್ಪಿಕೊಳ್ಳುವುದು ಕಷ್ಟ ಆದರೆ ಇಲ್ಲಿ ಅಂಪೈರ್ ನಿಯಮಗಳನ್ನು ನೋಡಿಯೇ ಗಿಲ್ ಅವರನ್ನು ಔಟ್ ಎಂದು ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.