ಭಾರತದ ಪರ ಈಗಲೂ ರನ್ ಪೇರಿಸಬಲ್ಲೆ: ಗಂಗೂಲಿ
Team Udayavani, Jul 18, 2020, 7:13 AM IST
ಕೋಲ್ಕತಾ: ಕೇವಲ ಮೂರು ತಿಂಗಳ ಕಾಲ ಅಭ್ಯಾಸ ಮಾಡಿದರೆ ತಾನು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ರನ್ ಗಳಿಸಬಲ್ಲೆ ಎಂಬುದಾಗಿ ಮಾಜಿ ನಾಯಕ, ಬಿಸಿಸಿಐ ಆಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
“ನನಗೆ ಕನಿಷ್ಠ ಎರಡು ಏಕದಿನ ಸರಣಿಗಳಲ್ಲಿ ಮುಂದುವರಿಯುವ ಅವಕಾಶ ಲಭಿಸಿದ್ದರೆ ಇನ್ನಷ್ಟು ರನ್ ಗಳಿಸುತ್ತಿದ್ದೆ. ಅಕಸ್ಮಾತ್ ನಾಗ್ಪುರ ಟೆಸ್ಟ್‌ನಲ್ಲಿ ನಿವೃತ್ತಿಯಾಗದೇ ಇದ್ದಿದ್ದರೆ ಮುಂದಿನೆರಡು ಟೆಸ್ಟ್ ಸರಣಿಗಳಲ್ಲಿ ಖಂಡಿತವಾಗಿಯೂ ರನ್ ಮಾಡುತ್ತಿದ್ದೆ’ ಎಂದು ಬಂಗಾಲಿ ದೈನಿಕಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಸೌರವ್ ಗಂಗೂಲಿ ಹೇಳಿದ್ದಾರೆ.
ಮೂರು ತಿಂಗಳ ಅಭ್ಯಾಸ ಸಾಕು
“ಈಗಲೂ ರನ್ ಪೇರಿಸುವ ಆತ್ಮವಿಶ್ವಾಸ ನನ್ನಲ್ಲಿದೆ. ಆರಲ್ಲ, ಕೇವಲ ಮೂರು ತಿಂಗಳ ಅಭ್ಯಾಸ ಮಾಡಿ, ಕನಿಷ್ಠ ಮೂರು ರಣಜಿ ಪಂದ್ಯಗಳನ್ನಾಡುವ ಅವಕಾಶ ಲಭಿಸಿದರೆ ನಾನು ಖಂಡಿತವಾಗಿಯೂ ಟೆಸ್ಟ್ ಮತ್ತು ಏಕದಿನಗಳೆರಡರಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ರನ್ ಗಳಿಸಬಲ್ಲೆ’ ಎಂದು ಗಂಗೂಲಿ ನುಡಿದರು.
ಸದ್ಯ ಸೌರವ್ ಗಂಗೂಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಸಹೋದರ ಸ್ನೇಹಶಿಷ್ ಗಂಗೂಲಿ ಕೋಲ್ಕತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.