Gold medal; ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಆಡುವುದಿಲ್ಲ: ರೋಹನ್ ಬೋಪಣ್ಣ
ಭಾರತದ ಕ್ರೀಡಾ ಸಾಮರ್ಥ್ಯ ಹೆಚ್ಚುತ್ತಿದೆ ಎಂದು ನಾನು ಭಾವಿಸುತ್ತೇನೆ
Team Udayavani, Sep 30, 2023, 5:47 PM IST
ಹ್ಯಾಂಗ್ ಝೂ: ಇಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಟೆನಿಸ್ ಮಿಶ್ರ ಡಬಲ್ಸ್ ನಲ್ಲಿ ಶನಿವಾರ ಭಾರತದ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಅವರು ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಚಿನ್ನ ಗೆದ್ದ ಸಂಭ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ 43 ರ ಹರೆಯದ ರೋಹನ್ ಬೋಪಣ್ಣ “ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಭಾರತದ ಕ್ರೀಡಾ ಸಾಮರ್ಥ್ಯ ಹೆಚ್ಚುತ್ತಿದೆ ಎಂದು ನಾನು ಭಾವಿಸುತ್ತೇನೆ. ಟೆನಿಸ್ ಏರುಗತಿಯಲ್ಲಿದೆ. ನಾವು ಯಾವಾಗಲೂ ಟೆನಿಸ್‌ನಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ. ರುತುಜಾ ಮತ್ತು ನನಗೂ ಚಿನ್ನವನ್ನು ಗಳಿಸಲು ಸಾಧ್ಯವಾಯಿತು ಎಂಬುದು ನಿಜವಾಗಿಯೂ ದೊಡ್ಡ ಕ್ಷಣವಾಗಿದೆ. ಸರಕಾರ ಮತ್ತು ಫೆಡರೇಶನ್‌ನಿಂದ ಸ್ವಲ್ಪಮಟ್ಟಿನ ಬೆಂಬಲವು ಅಂತಹ ದೊಡ್ಡ ಬದಲಾವಣೆಯನ್ನು ಮಾಡುತ್ತದೆ ಎಂದು ತೋರಿಸುತ್ತದೆ’ ಎಂದು ಸಂತಸ ಹೊರ ಹಾಕಿದರು.
#WATCH | Hangzhou Asian Games 2023 | After winning the gold medal in Mixed Doubles, athlete Rohan Bopanna says, “Extremely proud. I think Indian sports are on the rise. Tennis is on the rise. We have always managed to win gold medals in Tennis… It’s a really big moment for… pic.twitter.com/SbF02S7wvI
— ANI (@ANI) September 30, 2023
‘ನಾನು ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಆಡುವುದಿಲ್ಲ ಆದ್ದರಿಂದ ನಾನು ಕ್ರೀಡಾಗ್ರಾಮದಲ್ಲಿನ ವಾತಾವರಣವನ್ನು ಆನಂದಿಸುತ್ತಿದ್ದೇನೆ’ ಎಂದರು.
ರುತುಜಾ ಭೋಸಲೆ ಮಾತನಾಡಿ ‘ರೋಹನ್ ಬೋಪಣ್ಣ ಅವರು ನನ್ನೊಂದಿಗೆ ಡಬಲ್ಸ್ ಆಡಲು ಆಯ್ಕೆ ಮಾಡಿದಾಗ, ನಾನು ನಿಜವಾಗಿಯೂ ಉತ್ಸುಕಳಾಗಿದ್ದೆ. ಅವರು ನನ್ನೊಂದಿಗೆ ಅಂಗಳದಲ್ಲಿ ತುಂಬಾ ಚೆನ್ನಾಗಿದ್ದರು, ಇಂದು ನಾನು ಕೋರ್ಟ್‌ಗೆ ಕಾಲಿಟ್ಟಾಗ ನಾನು ಸ್ವಲ್ಪ ಉದ್ವೇಗಗೊಂಡಿದ್ದೆ.ಪಂದ್ಯದುದ್ದಕ್ಕೂ ಅವರು ನನಗೆ ಸಣ್ಣ ಸಣ್ಣ ಸಲಹೆಗಳನ್ನು ನೀಡುತ್ತಿದ್ದರು” ಎಂದರು.
ಬೋಪಣ್ಣ ಮತ್ತು ರುತುಜಾ ಜೋಡಿ ತೈವಾನ್ ಜೋಡಿ ತ್ಸುಂಗ್-ಹಾವೊ ಹುವಾಂಗ್ ಮತ್ತು ಎನ್-ಶುವೊ ಲಿಯಾಂಗ್ ವಿರುದ್ಧ 2-6 6-3 10-4 ಜಯ ಸಾಧಿಸಿ ಮಿಶ್ರ ಡಬಲ್ಸ್ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.