ಸಿಂಧು ಮುಂದೆ ಸುವರ್ಣಾವಕಾಶ
ಇಂದು ಫೈನಲ್, ಗೆದ್ದರೆ ಚಿನ್ನ ಸಾಯಿ ಪ್ರಣೀತ್ ಕಂಚಿನ ಸಾಧನೆ
Team Udayavani, Aug 25, 2019, 5:27 AM IST
ಬಾಸೆಲ್: ಭಾರತದ ಭರವಸೆಯ ಶಟ್ಲರ್ ಪಿ.ವಿ. ಸಿಂಧು ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದ್ದಾರೆ. ಶನಿವಾರದ ಸೆಮಿಫೈನಲ್ ಕಾಳಗದಲ್ಲಿ ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್, ಚೀನದ ಚೆನ್ ಯು ಫೀ ವಿರುದ್ಧ ಕೇವಲ 40 ನಿಮಿಷಗಳಲ್ಲಿ 21-7, 21-14 ಅಂತರದ ಸುಲಭ ಗೆಲುವು ಸಾಧಿಸಿದರು.
ಇದು ಸಿಂಧು ಅವರ ಸತತ 3ನೇ ಫೈನಲ್ ಆಗಿದ್ದು, ಹಿಂದಿನೆರಡೂ ಕೂಟಗಳಲ್ಲಿ ಪ್ರಶಸ್ತಿ ವಂಚಿತರಾಗಿ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟಿದ್ದರು.
ಭಾರತಕ್ಕೆ ಒಲಿಯದ ಚಿನ್ನ
ಇದುವರೆಗೆ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಆಟಗಾರರ್ಯಾರೂ ಚಾಂಪಿಯನ್ ಆಗಿಲ್ಲ. ಇದೀಗ ಪಿ.ವಿ. ಸಿಂಧು ಮುಂದೆ ಇಂಥದೊಂದು ಸುವರ್ಣಾವಕಾಶ ಎದುರಾಗಿದೆ. ಗೆದ್ದರೆ ಬಂಗಾರದ ಪದಕ ಸಿಂಧು ಕೊರಳನ್ನು ಅಲಂಕರಿಸಲಿದೆ. ಫೈನಲ್‌ನಲ್ಲಿ ಸಿಂಧು 2017ರ ವಿಜೇತೆ, ವಿಶ್ವದ 4ನೇ ಶ್ರೇಯಾಂಕಿತೆ ಜಪಾನಿನ ನೊಜೊಮಿ ಒಕುಹಾರಾ ವಿರುದ್ಧ ಸೆಣಸಲಿದ್ದಾರೆ.
ಚೆನ್ ವಿರುದ್ಧ 5-3ರ ಗೆಲುವಿನ ದಾಖಲೆ ಹೊಂದಿನ ಪಿ.ವಿ. ಸಿಂಧು, ಸೆಮಿಫೈನಲ್ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದರು. ಇದಕ್ಕೆ ತಕ್ಕಂತೆ ಪ್ರದರ್ಶನ ನೀಡುತ್ತ ಹೋದರು. ಆರಂಭದಿಂದಲೇ ಮುನ್ನಡೆ ಸಾಧಿಸುತ್ತ ಹೋದ ಪಿ.ವಿ. ಸಿಂಧು ಮೊದಲ ಗೇಮ್‌ನ ವಿರಾಮದ ವೇಳೆ 11-3ರ ಮುನ್ನಡೆಯಲ್ಲಿದ್ದರು. ದ್ವಿತೀಯ ಗೇಮ್‌ನಲ್ಲೂ ಸಿಂಧು ಸ್ಪಷ್ಟ ಮೇಲುಗೈ ಸಾಧಿಸಿದರು. ಭಾರತೀಯಳ ಆಕ್ರಮಣಕಾರಿ ಆಟದ ಎದುರು ಚೀನಿ ಆಟಗಾರ್ತಿ ಚೆನ್ ಯು ಫೀ ಸಂಪೂರ್ಣ ಮಂಕಾದರು.
ಸಾಯಿ ಪ್ರಣೀತ್‌ಗೆ ಕಂಚು
ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಬಿ. ಸಾಯಿ ಪ್ರಣೀತ್ ಸೋಲನುಭವಿಸಿ ಕೂಟದಿಂದ ನಿರ್ಗಮಿಸಿದರು. ಜಪಾನಿನ ಅಗ್ರಮಾನ್ಯ ಶಟ್ಲರ್ ಕೆಂಟೊ ಮೊಮೊಟ 21-13, 21-8ರಿಂದ ಸುಲಭದಲ್ಲಿ ಮಣಿಸಿದರು. ಇದರೊಂದಿಗೆ ಪ್ರಣೀತ್ ಕಂಚಿನ ಪದಕಕ್ಕೆ ತೃಪ್ತರಾದರು.
ಇದು ಈ ಪ್ರತಿಷ್ಠಿತ ಕೂಟದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 1983ರ ಬಳಿಕ ಭಾರತಕ್ಕೆ ಒಲಿದ ಮೊದಲ ಪದಕ ಎಂಬುದು ವಿಶೇಷ. ಅಂದು ಪ್ರಕಾಶ್ ಪಡುಕೋಣೆ ಕೂಡ ಕಂಚು ಜಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.