![Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’](https://www.udayavani.com/wp-content/uploads/2025/02/sha-415x304.jpg)
![Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’](https://www.udayavani.com/wp-content/uploads/2025/02/sha-415x304.jpg)
Team Udayavani, Dec 20, 2018, 6:05 AM IST
ಪಂಚಕುಲ: ಭಾರತ ತಂಡದ ತಾರಾ ಆಟಗಾರನಾಗಿ, ಪ್ರೊ ಕಬಡ್ಡಿಯಲ್ಲಿ ಯು ಮುಂಬಾದ ಯಶಸ್ವಿ ನಾಯಕನಾಗಿ, ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಹಾಲಿ ಜೈಪುರ್ ಪಿಂಕ್ ಪ್ಯಾಂಥರ್ ತಂಡದ ಪ್ರಮುಖ ಆಟಗಾರನಾಗಿ ಮೆರೆದ ಅನೂಪ್ ಕುಮಾರ್ 15 ವರ್ಷಗಳ ಸುದೀರ್ಘ ಕಬಡ್ಡಿ ಬದುಕಿಗೆ ಬುಧವಾರ ದಿಢೀರ ವಿದಾಯ ಹೇಳಿದ್ದಾರೆ.
35 ವರ್ಷದ ಹರ್ಯಾಣ ಆಟಗಾರ 2006ರಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ದಕ್ಷಿಣ ಏಶ್ಯನ್ ಗೇಮ್ಸ್ ಕೂಟದಲ್ಲಿ ಭಾರತ ಪ್ರತಿನಿಧಿಸುವ ಮೂಲಕ ಪದಾರ್ಪಣೆ ಮಾಡಿದ್ದರು. ಇವರನ್ನೊಳಗೊಂಡ ತಂಡ 2010 ಮತ್ತು 2014ರಲ್ಲಿ ನಡೆದಿದ್ದ ದಕ್ಷಿಣ ಏಶ್ಯನ್ ಪ್ರಶಸ್ತಿ ಗೆದ್ದಿತ್ತು. 2014ರ ಬಳಿಕ ಭಾರತದ ನಾಯಕರಾಗಿಯೂ ಅನೂಪ್ ಕಾರ್ಯ ನಿರ್ವಹಿಸಿದ್ದರು. ಇವರ ನಾಯಕತ್ವದಲ್ಲಿ ಭಾರತ 2014ರಲ್ಲಿ ಏಶ್ಯನ್ ಗೇಮ್ಸ್ ಚಿನ್ನ ಹಾಗೂ 2016ರಲ್ಲಿ ವಿಶ್ವಕಪ್ ಕಬಡ್ಡಿ ಚಿನ್ನ ಪದಕ ಗೆದ್ದಿತ್ತು.
ಬುಧವಾರ ಪಂಚಕುಲ ಚರಣದ ಪಂದ್ಯಕ್ಕೂ ಮೊದಲು ಮಾತನಾಡಿದ ಅನೂಪ್, “ಹವ್ಯಾಸವಾಗಿ ಆರಂಭಿಸಿದ ಕಬಡ್ಡಿ ನನಗೆ ಬದುಕನ್ನೇ ನೀಡಿದೆ. ವೃತ್ತಿಪರ ಆಟಗಾರನಾಗಿ ನನಗೆ ಎಲ್ಲ ಯಶಸ್ಸನ್ನು ತಂದುಕೊಟ್ಟಿದೆ. ದೇಶವನ್ನು ಪ್ರತಿನಿಧಿಸುವ, ನಾಯಕನಾಗಿ ತಂಡವನ್ನು ಮುನ್ನಡೆಸಿದ ತೃಪ್ತಿ ನನಗಿದೆ. ನನಗೆ ಬೆಂಬಲ ನೀಡಿದ ಎಲ್ಲ ಹಿತೈಷಿಗಳಿಗೆ, ಕುಟುಂಬ ವರ್ಗದವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.
ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಡರ್ಟ್ ಕಾರ್ ರೇಸ್‌ಗೆ ತೆರೆ
Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’
Special Train: ಉಡುಪಿ-ಪ್ರಯಾಗರಾಜ್ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ
CEC Appoint: ಜ್ಞಾನೇಶ್ ಕುಮಾರ್ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ
Udupi: ಮತ್ಸ್ಯಗಂಧ ರೈಲಿಗೆ ನೂತನ ಎಲ್‌ಎಚ್‌ಬಿ ಬೋಗಿ ಅಳವಡಿಕೆ
You seem to have an Ad Blocker on.
To continue reading, please turn it off or whitelist Udayavani.