ಗ್ರೀಕ್ ಫುಟ್‌ಬಾಲ್ ಕ್ಲಬ್ ಮಾಲಕನಿಗೆ ನಿಷೇಧ
Team Udayavani, Mar 30, 2018, 6:20 AM IST
ಏಥೆನ್ಸ್ : ಲೀಗ್ ಪಂದ್ಯವೊಂದರ ವೇಳೆ ಬಂದೂಕು ಸಹಿತ ಮೈದಾನಕ್ಕಿಳಿದು ಆತಂಕ ಸೃಷ್ಟಿಸಿದ್ದ ಗ್ರೀಕ್ ಫುಟ್‌ಬಾಲ್ ಕ್ಲಬ್ ಪಿಎಒಕೆ ಸಾಲೋನಿಕಾದ ಅಧ್ಯಕ್ಷ ಇವಾನ್ ಸಾವ್ವಿಡಿಸ್‌ಗೆ ಎಲ್ಲ ಫುಟ್‌ಬಾಲ್ ಕ್ರೀಡಾಂಗಣದಿಂದ 3 ವರ್ಷಗಳ ನಿಷೇಧ ಹೇರಲಾಗಿದೆ. ಲೀಗ್‌ನ ಶಿಸ್ತು ಪಾಲನಾ ಸಮಿತಿ ಗುರುವಾರ ಈ ವಿಚಾರ ತಿಳಿಸಿದೆಯಲ್ಲದೆ ಸಾವ್ವಿಡಿಸ್ ತಂಡದ 3 ಅಂಕಗಳನ್ನು ಕಡಿತಗೊಳಿಸುವ ಮೂಲಕ ತಂಡದ ಪ್ರಶಸ್ತಿ ಆಸೆಗೆ ತಣ್ಣೀರೆರಚಿದೆ.
ಮಾ. 11ರಂದು ಗ್ರೀಕ್‌ನ ಟಾಪ್ ಫ್ಲೈಟ್ ಫುಟ್‌ಬಾಲ್ ಚಾಂಪಿಯನ್‌ಶಿಪ್ ರದ್ದಾಗಿತ್ತು. ಬೆಲ್ಟ್ಗೆ ಕಟ್ಟಿಕೊಂಡಿದ್ದ ಬಂದೂಕಿನೊಂದಿಗೆ ಪಿಎಒಕೆ ತಂಡದ ಮಾಲಕ ಸಾವ್ವಿಡಿಸ್ ಕ್ರೀಡಾಂಗಣಕ್ಕೆ ನುಗ್ಗಿ ಆತಂಕಕಾರಿ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಪಂದ್ಯವನ್ನು ನಿರ್ಧಿಷ್ಟಾವಧಿ ರದ್ದುಗೊಳಿಸಲಾಗಿತ್ತು. ಈ ಘಟನೆಗೆ ಸಂಬಂಧಿಸಿ ಇವಾನ್‌ಗೆ ನಿಷೇಧ ಹೇರಲಾಗಿದೆ.
ಪಿಎಒಕೆ ಮತ್ತು ಎಇಕೆ ಏಥೆನ್ಸ್ ನಡುವೆ ಪಂದ್ಯ ನಡೆಯುತ್ತಿದ್ದಾಗ 90ನೇ ನಿಮಿಷದಲ್ಲಿ ಬಂದೂಕು ಧಾರಿಯಾಗಿದ್ದ ಗ್ರೀಕ್-ರಶ್ಯನ್ ಉದ್ಯಮಿ ಸಾವ್ವಿಡಿಸ್ ಅಂಗರಕ್ಷಕರೊಂದಿಗೆ ಕ್ರೀಡಾಂಗಣಕ್ಕೆ ನುಗ್ಗಿ ಎದುರಾಳಿ ತಂಡಕ್ಕೆ ಗೋಲ್ ನೀಡದಂತೆ ಅಂಪಾಯರ್ ಜತೆ ಜಟಾಪಟಿಗಿಳಿದಿದ್ದರು. ಹೀಗೆ ಕ್ರೀಡಾಂಗಣದಲ್ಲಿ ಆತಂಕಕಾರಿ ವಾತಾವರಣ ಸೃಷ್ಟಿಸಿದ ಕಾರಣಕ್ಕಾಗಿ ಸಾವ್ವಿಡಿಸ್ ವಿರುದ್ಧ ಬಂಧನ ವಾರೆಂಟ್ ಕೂಡ ಜಾರಿಯಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.